Prophetic Hadeeth Encyclopedia
Search and read verified Prophetic hadeeth translations, explanations, benefits, categories and source attribution. Page 42.
Search the Hadeeth Encyclopedia
Smart instant results tolerate minor spelling mistakes, with every filter in one place.
ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ
ಅದೀ ಬಿನ್ ಹಾತಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ. ಆಗ ಅವನು ತನ್ನ ಬಲಭಾ…
ಒಂಟೆಯ ಕೊರಳಲ್ಲಿ ಬಿಲ್ಲಿನ ತಂತಿಯಿಂದ ಮಾಡಿದ ಹಾರ ಅಥವಾ ಬೇರೆ ಯಾವುದೇ ಹಾರವಿದ್ದರೂ ಅದನ್ನು ಕತ್ತರಿಸದೆ ಬಿಟ್ಟು ಬಿಡಬೇಡ
ಅಬೂ ಬಶೀರ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಂದು ಯಾತ್ರೆಯಲ್ಲಿ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದರು. ಆಗ ಜನರು ಮಲಗುವ ಸ್ಥಳದಲ್ಲಿದ್ದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ದೂತನನ್ನು ಕಳುಹಿಸಿ ಹೇಳಿದರು: "ಒಂಟೆಯ ಕ…
ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು
ಉಕ್ಬ ಬಿನ್ ಆಮಿರ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಒಂದು ಗುಂಪು ಜನರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರು ಒಂಬತ್ತು ಮಂದಿಯಿಂದ ನಿಷ್ಠೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಆದರೆ ಒಬ್ಬರಿಂದ ಅದನ್ನು ತಡೆಹಿಡಿದರು. ಅವರು ಕೇಳಿದರು: "ಓ…
ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ
ತಾರಿಕ್ ಬಿನ್ ಅಶೀಮ್ ಅಶ್ಜಈ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆ…
ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ. ಏಕೆಂದರೆ ಕೆಲವೊಮ್ಮೆ ತಲುಪಿಸುವವನು ಕೇಳಿದವನಿಗಿಂತ ಹೆಚ್ಚು ಗ್ರಹಿಸುವ ಶಕ್ತಿಯನ್ನು ಹೊಂದಿರಬಹುದು
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ನಮ್ಮಿಂದ ಏನನ್ನಾದರೂ ಕೇಳಿ ಅದನ್ನು ಕೇಳಿದಂತೆಯೇ ತಲುಪಿಸಿದ ವ್ಯಕ್ತಿಯ ಮುಖವನ್ನು ಅಲ್ಲಾಹು ಪ್ರಕಾಶಮಾನವಾಗಿಡಲಿ.…
ಸುಳ್ಳು ಎಂದು ಭಾವಿಸಲಾಗುವ ಒಂದು ಹದೀಸನ್ನು ಯಾರಾದರೂ ನನ್ನ ಹೆಸರಲ್ಲಿ ವರದಿ ಮಾಡಿದರೆ, ಅವನು ಸುಳ್ಳುಗಾರರಲ್ಲಿ ಒಬ್ಬನಾಗಿದ್ದಾನೆ
ಸಮುರ ಬಿನ್ ಜುಂದುಬ್ ಮತ್ತು ಮುಗೀರ ಬಿನ್ ಶುಅ್‌ಬ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರಿಬ್ಬರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಳ್ಳು ಎಂದು ಭಾವಿಸಲಾಗುವ ಒಂದು ಹದೀಸನ್ನು ಯಾರಾದರೂ ನನ್ನ ಹೆಸರಲ್ಲಿ ವರದಿ ಮಾಡಿದರೆ, ಅವನು ಸುಳ್ಳುಗಾರರಲ…
ನಮಾಝ್ ಮಾಡುವವನ ಮುಂದೆ ಹಾದುಹೋಗುವವನಿಗೆ, ಅವನ ಮೇಲೆ ಏನಿದೆ (ಅಂದರೆ, ಎಷ್ಟು ಪಾಪವಿದೆ) ಎಂದು ತಿಳಿದಿದ್ದರೆ, ಅವನ ಮುಂದೆ ಹಾದುಹೋಗುವುದಕ್ಕಿಂತ ನಲವತ್ತು (ದಿನ/ತಿಂಗಳು/ವರ್ಷ) ಕಾಯುವುದು ಅವನಿಗೆ ಉತ್ತಮವಾಗಿರುತ್ತಿತ್ತು
ಬುಸ್ರ್ ಇಬ್ನ್ ಸಈದ್ ರಿಂದ ವರದಿ: ಝೈದ್ ಇಬ್ನ್ ಖಾಲಿದ್ ಅಲ್-ಜುಹನೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ನಮಾಝ್ ಮಾಡುವವನ ಮುಂದೆ ಹಾದುಹೋಗುವ ಬಗ್ಗೆ ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಕೇಳಿದ್ದೀರಿ ಎಂದು ಕೇಳಲು, ಅವರನ್ನು (ಬುಸ್ರ್ ಅವರನ್ನು) ಅಬೂ ಜುಹೈಮ್ (ಅಲ್ಲಾಹು ಅವರ…
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆ ಪವಿತ್ರ ಕುರ್‌ಆನ್ ಆಗಿದೆ
ಸಅದ್ ಬಿನ್ ಹಿಶಾಮ್ ಬಿನ್ ಆಮಿರ್ – ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಗೆ ಹೋದಾಗ ಹೇಳಿದರು: "ಓ ಸತ್ಯವಿಶ್ವಾಸಿಗಳ ತಾಯಿಯವರೇ! ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಡವಳಿಕೆಯ ಬಗ್ಗೆ ನನಗೆ ತಿಳಿಸಿಕೊಡಿ." ಅವರು ಕೇಳಿದರು: "ನೀವು ಪವಿತ್ರ ಕುರ್‌ಆನ್ ಪಠಿಸುವುದಿಲ್ಲವೇ?" ನಾನ…
ದಯೆ ತೋರುವವರಿಗೆ ಪರಮ ದಯಾಮಯನು (ಅಲ್ಲಾಹು) ದಯೆ ತೋರುತ್ತಾನೆ. ಭೂಮಿಯಲ್ಲಿರುವವರಿಗೆ ದಯೆ ತೋರಿರಿ. ಆಕಾಶದಲ್ಲಿರುವವನು ನಿಮಗೆ ದಯೆ ತೋರುತ್ತಾನೆ
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ…
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ…
ನೀವು ನನ್ನನ್ನು ನಂಬುವುದಿಲ್ಲವೇ? ನಾನು ಆಕಾಶದಲ್ಲಿರುವವನ (ಅಲ್ಲಾಹುವಿನ) ನಂಬಿಗಸ್ಥ ದಾಸನಾಗಿದ್ದೇನೆ. ನನಗೆ ಆಕಾಶದ ಸುದ್ದಿ (ದಿವ್ಯಸಂದೇಶ) ಬೆಳಿಗ್ಗೆ ಮತ್ತು ಸಂಜೆ ಬರುತ್ತದೆ
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲಿ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಯಮನ್‌ನಿಂದ ಅಲ್ಲಾಹುವಿನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಂದು ಚಿಕ್ಕ ಚಿನ್ನದ ತುಂಡನ್ನು, ಕರಝ್ (ಒಂದು ರೀತಿಯ ಎಲೆ) ನಿಂದ ಹದಮಾ…

