ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ
Choose an available translation of this Hadeeth
Hadeeth text
ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸುವಾಗ ಹೀಗೆ ಹೇಳುತ್ತಿದ್ದರು: "ಬಹಿಷ್ಕೃತನಾದ ಶೈತಾನನಿಂದ ನಾನು ಮಹಾನನಾದ ಅಲ್ಲಾಹನೊಂದಿಗೆ, ಅವನ ಗೌರವಾನ್ವಿತ ಮುಖದೊಂದಿಗೆ ಮತ್ತು ಅವನ ಅನಶ್ವರ ಅಧಿಕಾರದೊಂದಿಗೆ ರಕ್ಷೆ ಬೇಡುತ್ತೇನೆ." ಅವರು ಕೇಳಿದರು: "ಇಷ್ಟೇ ಏನು?" ನಾನು ಹೇಳಿದೆ: "ಹೌದು." ಅವರು ಹೇಳಿದರು: "ಇದನ್ನು ಪಠಿಸಿದರೆ ಶೈತಾನನು ಹೀಗೆ ಹೇಳುವನು: ಈ ಇಡೀ ದಿನ ಅವನು ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."
Explanation
ಮಸೀದಿಗೆ ಪ್ರವೇಶಿಸುವವನು ಈ ಪ್ರಾರ್ಥನೆ ಪಠಿಸಿದರೆ, ಶೈತಾನನು ಹೇಳುವನು: "ಮಸೀದಿಗೆ ಪ್ರವೇಶಿಸಿದ ಈ ವ್ಯಕ್ತಿ ಎಲ್ಲಾ ಸಮಯಗಳಲ್ಲೂ ರಾತ್ರಿಯಲ್ಲೂ ಹಗಲಲ್ಲೂ ನನ್ನಿಂದ ರಕ್ಷಿಸಲ್ಪಟ್ಟಿದ್ದಾನೆ."
Benefits
ಶೈತಾನನ ಬಗ್ಗೆ ಮತ್ತು ಅವನು ಮುಸಲ್ಮಾನನನ್ನು ದುರ್ಮಾರ್ಗಿಯನ್ನಾಗಿ ಮಾಡಲು ಮತ್ತು ಪ್ರಲೋಭನೆಗೆ ಒಳಪಡಿಸಲು ಸದಾ ಹೊಂಚುಹಾಕುತ್ತಿರುತ್ತಾನೆ ಎಂದು ಎಚ್ಚರಿಸಲಾಗಿದೆ.
ಮನುಷ್ಯನ ಹೃದಯದಲ್ಲಿ ಅಲ್ಲಾಹನ ಬಗ್ಗೆಯಿರುವ ವಿಶ್ವಾಸ, ಈ ಪ್ರಾರ್ಥನೆಯನ್ನು ಪಠಿಸುವಾಗ ಅವನಿಗಿರುವ ಹೃದಯ ಸಾನಿಧ್ಯತೆ ಮತ್ತು ಇದರಲ್ಲಿ ಸೇರಿಕೊಂಡಿರುವ ಅಲ್ಲಾಹನ ವಾಗ್ದಾನದಲ್ಲಿ ಅವನಿಗಿರುವ ನಂಬಿಕೆ - ಇವು ಎಷ್ಟರಮಟ್ಟಿಗೆ ಅವನಲ್ಲಿರುತ್ತವೋ ಅಷ್ಟರ ಮಟ್ಟಿಗೆ ಅವನಿಗೆ ಶೈತಾನನ ದುರ್ಮಾರ್ಗದಿಂದ ರಕ್ಷಣೆ ದೊರೆಯುತ್ತದೆ.
Attribution
Categories
Share hadeeth
Sharing options · 0 Total shares

