ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್-ಅಜ್‌ಝಿ ವಲ್-ಕಸಲಿ ವಲ್-ಜುಬ್‌ನಿ ವಲ್-ಬುಖ್‌ಲಿ ವಲ್-ಹರಮಿ ವ ಅಝಾಬಿಲ್-ಖಬ್ರ್. (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ನಿನ್ನಲ್ಲಿ ಅಶಕ್ತತೆ, ಸೋಮಾರಿತನ, ಹೇಡಿತನ, ಜಿಪುಣತನ, ಅತಿ ವೃದ್ಧಾಪ್ಯ ಮತ್ತು ಸಮಾಧಿಯ ಶಿಕ್ಷೆಯಿಂದ ಅಭಯ ಕೋರುತ್ತೇನೆ). ಅಲ್ಲಾಹುಮ್ಮ ಆತಿ ನಫ್ಸೀ ತಖ್ವಾಹಾ, ವ ಝಕ್ಕಿಹಾ ಅಂತ ಖೈರು ಮನ್ ಝಕ್ಕಾಹಾ, ಅಂತ ವಲಿಯ್ಯುಹಾ ವ ಮೌಲಾಹಾ. (ಅರ್ಥ: ಓ ಅಲ್ಲಾಹನೇ, ನನ್ನ ಆತ್ಮಕ್ಕೆ ಅದರ ತಖ್ವಾವನ್ನು (ದೇವಭಕ್ತಿಯನ್ನು) ನೀಡು, ಮತ್ತು ಅದನ್ನು ಪರಿಶುದ್ಧಗೊಳಿಸು, ನೀನೇ ಅದನ್ನು ಪರಿಶುದ್ಧಗೊಳಿಸುವವರಲ್ಲಿ ಅತ್ಯುತ್ತಮನು. ನೀನೇ ಅದರ 'ವಲೀ' (ರಕ್ಷಕ ಮಿತ್ರ) ಮತ್ತು 'ಮೌಲಾ' (ಒಡೆಯ)). "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಇಲ್ಮಿನ್ ಲಾ ಯನ್‌ಫಅ್, ವ ಮಿನ್ ಖಲ್‌ಬಿನ್ ಲಾ ಯಖ್‌ಶಅ್, ವ ಮಿನ್ ನಫ್‌ಸಿನ್ ಲಾ ತಶ್‌ಬಅ್, ವ ಮಿನ್ ದಅ್‌ವತಿನ್ ಲಾ ಯುಸ್ತಜಾಬು ಲಹಾ". (ಅರ್ಥ: ಓ ಅಲ್ಲಾಹನೇ, ಖಂಡಿತವಾಗಿಯೂ ನಾನು ಪ್ರಯೋಜನ ನೀಡದ ಜ್ಞಾನದಿಂದ, ವಿನಯವಿಲ್ಲದ ಹೃದಯದಿಂದ, ಆಸೆ ತೀರದ ಆತ್ಮದಿಂದ, ಮತ್ತು ಸ್ವೀಕರಿಸಲ್ಪಡದ ಪ್ರಾರ್ಥನೆಯಿಂದ ನಿನ್ನಲ್ಲಿ ಅಭಯ ಕೋರುತ್ತೇನೆ)
ಝೈದ್ ಇಬ್ನ್ ಅರ್ಖಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏನು ಹೇಳುತ್ತಿದ್ದರೋ ಅದನ್ನು ಹೊರತುಪಡಿಸಿ ನಾನು ನಿಮಗೆ ಬೇರೇನೂ ಹೇಳುವುದಿಲ್ಲ. ಅವರು ಹೇಳುತ್ತಿದ್ದರು: "ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್-ಅಜ್‌ಝಿ ವಲ್-ಕಸ…

