ಹೀಗೆ ಹೇಳು: 'ಅಲ್ಲಾಹುಮ್ಮಕ್‌ಫಿನೀ ಬಿ ಹಲಾಲಿಕ ಅನ್ ಹರಾಮಿಕ್, ವ ಅಗ್ನಿನೀ ಬಿ ಫದ್ಲಿಕ ಅಮ್ಮನ್ ಸಿವಾಕ್' ". (ಓ ಅಲ್ಲಾಹನೇ, ನೀನು ನಿಷಿದ್ಧಗೊಳಿಸಿದ ವಿಷಯಗಳಿಂದ ನನ್ನನ್ನು ದೂರವಿಟ್ಟು ನೀನು ಅನುಮತಿಸಿದ ವಿಷಯಗಳು ನನಗೆ ಸಾಕಾಗುವಂತೆ ಮಾಡು. ಮತ್ತು ಇತರರ ಅನುಗ್ರಹವನ್ನು ಅವಲಂಬಿಸುವುದಕ್ಕೆ ಹೊರತಾಗಿ ನಿನ್ನ ಅನುಗ್ರಹವನ್ನು ಅವಲಂಬಿಸುವಂತೆ ಮಾಡು)
Choose an available translation of this Hadeeth
Hadeeth text
ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ 'ಮುಕಾತಬ್' (ಒಪ್ಪಂದದ ಮೂಲಕ ವಿಮೋಚನೆ ಕೋರುತ್ತಿರುವ ಗುಲಾಮ) ಅವರ ಬಳಿಗೆ ಬಂದನು. ಅವನು ಹೇಳಿದನು: "ನನ್ನ ವಿಮೋಚನೆಯ ಒಪ್ಪಂದದ ಮೊತ್ತವನ್ನು ಪಾವತಿಸಲು ನಾನು ಅಸಮರ್ಥನಾಗಿದ್ದೇನೆ. ಆದ್ದರಿಂದ ನನಗೆ ಸಹಾಯ ಮಾಡಿರಿ". ಅವರು (ಅಲೀ) ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನಗೆ ಕಲಿಸಿದ ಕೆಲವು ವಚನಗಳನ್ನು ನಾನು ನಿನಗೆ ಕಲಿಸಲೇ? ನಿನ್ನ ಮೇಲೆ 'ಸೀರ್' ಪರ್ವತದಷ್ಟು ಸಾಲವಿದ್ದರೂ, ಅಲ್ಲಾಹು ಅದನ್ನು ನಿನ್ನ ಪರವಾಗಿ ತೀರಿಸುತ್ತಾನೆ". ಅವರು (ಅಲೀ) ಹೇಳಿದರು: "ಹೀಗೆ ಹೇಳು: 'ಅಲ್ಲಾಹುಮ್ಮಕ್‌ಫಿನೀ ಬಿ ಹಲಾಲಿಕ ಅನ್ ಹರಾಮಿಕ್, ವ ಅಗ್ನಿನೀ ಬಿ ಫದ್ಲಿಕ ಅಮ್ಮನ್ ಸಿವಾಕ್' ". (ಓ ಅಲ್ಲಾಹನೇ, ನೀನು ನಿಷಿದ್ಧಗೊಳಿಸಿದ ವಿಷಯಗಳಿಂದ ನನ್ನನ್ನು ದೂರವಿಟ್ಟು ನೀನು ಅನುಮತಿಸಿದ ವಿಷಯಗಳು ನನಗೆ ಸಾಕಾಗುವಂತೆ ಮಾಡು. ಮತ್ತು ಇತರರ ಅನುಗ್ರಹವನ್ನು ಅವಲಂಬಿಸುವುದಕ್ಕೆ ಹೊರತಾಗಿ ನಿನ್ನ ಅನುಗ್ರಹವನ್ನು ಅವಲಂಬಿಸುವಂತೆ ಮಾಡು).
Explanation
Benefits
ಜನರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಷಯಗಳ ಕಡೆಗೆ ಮಾರ್ಗದರ್ಶನ ನೀಡುವುದು ಜ್ಞಾನಿಗಳ ಮತ್ತು ಅಲ್ಲಾಹನ ಕಡೆಗೆ ಆಹ್ವಾನಿಸುವವರ ಕರ್ತವ್ಯವಾಗಿದೆ.
ವಿಮೋಚನೆ ಕೋರುವ ಗುಲಾಮರಿಗೆ ಸಹಾಯ ಮಾಡಲು ಪ್ರೋತ್ಸಾಹಿಸಲಾಗಿದೆ.
ಈ ಪ್ರಾರ್ಥನೆಯನ್ನು ಕಲಿಯಲು ಮತ್ತು ಅದರ ಮೂಲಕ ಅಲ್ಲಾಹನಲ್ಲಿ ಬೇಡಲು ಪ್ರೋತ್ಸಾಹಿಸಲಾಗಿದೆ.
ಧರ್ಮಸಮ್ಮತವಾದ ಸಂಪತ್ತು — ಅದು ಕಡಿಮೆಯಾಗಿದ್ದರೂ ಸಹ — ನಿಷಿದ್ಧವಾದ ಸಂಪತ್ತಿಗಿಂತ — ಅದು ಎಷ್ಟೇ ಹೆಚ್ಚಾಗಿದ್ದರೂ ಸಹ — ಅದಕ್ಕಿಂತ ಉತ್ತಮವಾಗಿದೆ.
ಸೃಷ್ಟಿಗಳ ಮುಂದೆ ಕೈಯೊಡ್ಡುವುದನ್ನು ತಪ್ಪಿಸಿ ಅಲ್ಲಾಹನನ್ನು ಅವಲಂಬಿಸಬೇಕೆಂದು ತಿಳಿಸಲಾಗಿದೆ.
ಬೇಡುವವರಿಗೆ ನೀಡಲು ನಿಮ್ಮ ಬಳಿ ಏನೂ ಇಲ್ಲದಿದ್ದಾಗ ಅವರಿಗೆ ಉತ್ತಮ ರೀತಿಯಲ್ಲಿ ಉತ್ತರ ನೀಡುವುದನ್ನು ಪ್ರೋತ್ಸಾಹಿಸಲಾಗಿದೆ.
Attribution
Categories
Share hadeeth
Sharing options · 0 Total shares

