ಅಲ್ಲಾಹು ನಿಮಗೆ ದಾನವಾಗಿ ನೀಡಲು ಸಾಧ್ಯವಾಗುವಂತಹದ್ದನ್ನು ಒದಗಿಸಿಲ್ಲವೇ? ಪ್ರತಿ ತಸ್ಬೀಹ್ (ಸುಬ್‌ಹಾನಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಕ್ಬೀರ್ (ಅಲ್ಲಾಹು ಅಕ್ಬರ್ ಎಂದು ಹೇಳುವುದು) ದಾನವಾಗಿದೆ; ಪ್ರತಿ ತಹ್ಮೀದ್ (ಅಲ್‌ಹಮ್ದುಲಿಲ್ಲಾಹ್ ಎಂದು ಹೇಳುವುದು) ದಾನವಾಗಿದೆ; ಮತ್ತು ಪ್ರತಿ ತಹ್ಲೀಲ್ (ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವುದು) ದಾನವಾಗಿದೆ. ಒಳಿತನ್ನು ಆದೇಶಿಸುವುದು ದಾನವಾಗಿದೆ, ಕೆಡುಕನ್ನು ತಡೆಯುವುದು ದಾನವಾಗಿದೆ, ಮತ್ತು ನಿಮ್ಮಲ್ಲಿ ಒಬ್ಬರು ಲೈಂಗಿಕ ಬಯಕೆಯನ್ನು ಪೂರೈಸುವುದರಲ್ಲಿ ಸಹ ದಾನವಿದೆ
ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸಹಾಬಿಗಳು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ಸಂದೇಶವಾಹಕರೇ! ಶ್ರೀಮಂತರು ಎಲ್ಲಾ ಪುಣ್ಯಗಳನ್ನು ತೆಗೆದುಕೊಂಡು ಹೋದರು. ಅವರು ನಾವು ನಮಾಝ್ ಮಾ…

