ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಒಬ್ಬ ಸತ್ಯವಿಶ್ವಾಸಿಯಿಂದ ಇಹಲೋಕದ ಕಷ್ಟಗಳಲ್ಲಿ ಒಂದು ಕಷ್ಟವನ್ನು ನಿವಾರಿಸುತ್ತಾನೋ, ಅಲ್ಲಾಹು ಪುನರುತ್ಥಾನದ ದಿನದ ಕಷ್ಟಗಳಲ್ಲಿ ಒಂದು ಕಷ್ಟವನ್ನು ಅವನಿಂದ ನಿವಾರಿಸುತ್ತಾನೆ. ಯಾರು ಕಷ್ಟದಲ್ಲಿರುವವರಿಗೆ ಸುಲಭಗೊಳಿಸುತ್ತಾನೋ, ಅಲ್ಲಾಹು ಅವನಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಲಭಗೊಳಿಸುತ್ತಾನೆ. ಯಾರು ಒಬ್ಬ ಮುಸ್ಲಿಮನ ನ್ಯೂನತೆಗಳನ್ನು ಮುಚ್ಚಿಡುತ್ತಾನೋ, ಅಲ್ಲಾಹು ಅವನ ನ್ಯೂನತೆಗಳನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಮುಚ್ಚಿಡುತ್ತಾನೆ. ದಾಸನು ತನ್ನ ಸಹೋದರನಿಗೆ ಸಹಾಯ ಮಾಡುತ್ತಿರುವ ತನಕ ಅಲ್ಲಾಹನು ದಾಸನಿಗೆ ಸಹಾಯ ಮಾಡುತ್ತಾನೆ. ಯಾರು ಜ್ಞಾನವನ್ನು ಹುಡುಕುತ್ತಾ ಒಂದು ದಾರಿಯನ್ನು ತುಳಿಯುತ್ತಾನೋ, ಅಲ್ಲಾಹು ಅವನಿಗೆ ಸ್ವರ್ಗಕ್ಕೆ ದಾರಿಯನ್ನು ಸುಲಭಗೊಳಿಸುತ್ತಾನೆ. ಒಂದು ಗುಂಪು ಜನರು ಅಲ್ಲಾಹನ ಮನೆಗಳ (ಮಸೀದಿಗಳ) ಪೈಕಿ ಒಂದರಲ್ಲಿ ಅಲ್ಲಾಹನ ಗ್ರಂಥವನ್ನು ಪಠಿಸಲು, ಮತ್ತು ಅದನ್ನು ತಮ್ಮ ನಡುವೆ ಅಧ್ಯಯನ ಮಾಡಲು ಒಟ್ಟುಗೂಡುತ್ತಾರೆ ಎಂದಾದರೆ, ಅವರ ಮೇಲೆ ಶಾಂತಿ ಇಳಿಯುತ್ತದೆ, ಕರುಣೆಯು ಅವರನ್ನು ಆವರಿಸುತ್ತದೆ, ದೇವದೂತರುಗಳು ಅವರನ್ನು ಸುತ್ತುವರಿಯುತ್ತಾರೆ ಮತ್ತು ಅಲ್ಲಾಹು ತನ್ನ ಹತ್ತಿರವಿರುವವರಿಗೆ ಅವರ ಬಗ್ಗೆ ತಿಳಿಸುತ್ತಾನೆ. ಯಾರ ಕರ್ಮಗಳು ಅವನನ್ನು ನಿಧಾನಗೊಳಿಸುತ್ತವೆಯೋ, ಅವನ ವಂಶವು ಅವನನ್ನು ಮುಂದಕ್ಕೆ ಒಯ್ಯುವುದಿಲ್ಲ."
Explanation
Benefits
ಕಷ್ಟದಲ್ಲಿರುವವರಿಗೆ ಸುಲಭಗೊಳಿಸುವುದನ್ನು ಪ್ರೋತ್ಸಾಹಿಸಲಾಗಿದೆ.
ಒಬ್ಬ ಮುಸ್ಲಿಮನಿಗೆ ಸಹಾಯ ಮಾಡಲು ಪ್ರೋತ್ಸಾಹಿಸಲಾಗಿದೆ. ಅವನು ತನ್ನ ಸಹೋದರನಿಗೆ ಸಹಾಯ ಮಾಡಿದ್ದಕ್ಕೆ ಅನುಗುಣವಾಗಿ ಅಲ್ಲಾಹು ಅವನಿಗೆ ಸಹಾಯ ಮಾಡುತ್ತಾನೆ.
ಮುಸ್ಲಿಮನ ತಪ್ಪುಗಳನ್ನು ಮುಚ್ಚಿಡುವುದರಲ್ಲಿ ಅವನ ನ್ಯೂನತೆಗಳನ್ನು (ಅಥವಾ ಖಾಸಗಿ ವಿಷಯಗಳನ್ನು) ತನಿಖೆ ಮಾಡದಿರುವುದು ಒಳಪಡುತ್ತದೆ. ಪೂರ್ವಿಕರಲ್ಲಿ ಒಬ್ಬರು ಹೀಗೆ ಹೇಳಿದ್ದಾರೆಂದು ವರದಿಯಾಗಿದೆ: "ನಾನು ಯಾವುದೇ ನ್ಯೂನತೆಗಳಿಲ್ಲದ ಜನರನ್ನು ಭೇಟಿಯಾದೆ. ಆದರೆ, ಅವರು ಇತರರ ನ್ಯೂನತೆಗಳ ಬಗ್ಗೆ ಮಾತನಾಡಿದರು. ಇದರ ಪರಿಣಾಮವಾಗಿ, ಆ ಜನರು ಇವರ ನ್ಯೂನತೆಗಳನ್ನು ಹೇಳಿಕೊಳ್ಳಲು ಪ್ರಾರಂಭಿಸಿದರು. ನಾನು ನ್ಯೂನತೆಗಳನ್ನು ಹೊಂದಿದ್ದ ಜನರನ್ನು ಭೇಟಿಯಾದೆ. ಆದರೆ, ಅವರು ಇತರರ ನ್ಯೂನತೆಗಳನ್ನು ಹೇಳುತ್ತಿರಲಿಲ್ಲ. ಆದ್ದರಿಂದ, ಅವರ ನ್ಯೂನತೆಗಳು ಯಾರಿಗೂ ತಿಳಿಯದಂತೆ ಮರೆತುಬಿಡಲಾಯಿತು."
ಇತರರ ತಪ್ಪುಗಳನ್ನು ಮುಚ್ಚಿಡಬೇಕು ಎಂದರೆ, ಕೆಡುಕನ್ನು ತಡೆಯಬಾರದು ಮತ್ತು ಅದನ್ನು ಬದಲಾಯಿಸಬಾರದು ಎಂದಲ್ಲ. ಬದಲಾಗಿ, ಅದನ್ನು ಬದಲಾಯಿಸಬೇಕು ಮತ್ತು ಅದೇ ಸಮಯದಲ್ಲಿ ಅದನ್ನು ಮುಚ್ಚಿಡಬೇಕು. ಇದು ದುಷ್ಕರ್ಮ ಅಥವಾ ಅತಿರೇಕದಲ್ಲಿ ಕುಖ್ಯಾತಿ ಪಡೆಯದವರಿಗೆ ಅನ್ವಯಿಸುತ್ತದೆ. ಆದರೆ, ಅಂತಹ ಕುಖ್ಯಾತಿಯನ್ನು ಪಡೆದವರ ಬಗ್ಗೆ ಹೇಳುವುದಾದರೆ, ಅವರ ತಪ್ಪುಗಳನ್ನು ಮರೆಮಾಚುವುದು ಸೂಕ್ತವಲ್ಲ; ಬದಲಿಗೆ, ಅವನ ವಿಷಯವನ್ನು ಅಧಿಕಾರದಲ್ಲಿರುವವರಿಗೆ ತಲುಪಿಸಬೇಕು - ಇದು ಹೆಚ್ಚಿನ ಹಾನಿಗೆ ಕಾರಣವಾಗುವುದಿಲ್ಲ ಎಂದಾದರೆ ಮಾತ್ರ. ಏಕೆಂದರೆ, ಅವನ ತಪ್ಪುಗಳನ್ನು ಮರೆಮಾಡಿದರೆ ಅದು ಅವನನ್ನು ದುಷ್ಕರ್ಮಗಳಲ್ಲಿ ಮುಂದುವರಿಯಲು ಪ್ರೋತ್ಸಾಹಿಸುತ್ತದೆ ಮತ್ತು ಇತರರಿಗೆ ಹಾನಿ ಮಾಡಲು ಅವನಿಗೆ ಧೈರ್ಯ ನೀಡುತ್ತದೆ. ಅದೇ ರೀತಿ, ಅದು ಇತರ ದುಷ್ಟರಿಗೂ ಮತ್ತು ಮೊಂಡರಿಗೂ (ಅಪರಾಧ ಮಾಡಲು) ಧೈರ್ಯ ನೀಡುತ್ತದೆ.
ಜ್ಞಾನವನ್ನು ಪಡೆಯಲು, ಕುರ್‌ಆನನ್ನು ಪಠಿಸಲು ಮತ್ತು ಅಧ್ಯಯನ ಮಾಡಲು ಪ್ರೋತ್ಸಾಹಿಸಲಾಗಿದೆ.
ನವವಿ ಹೇಳಿದರು: "ಮಸೀದಿಯಲ್ಲಿ ಕುರ್‌ಆನ್ ಪಠಿಸಲು ಒಟ್ಟುಗೂಡುವುದರ ಶ್ರೇಷ್ಠತೆಗೆ ಈ ಹದೀಸ್ ಪುರಾವೆಯಾಗಿದೆ... ಮದ್ರಸಗಳು, ಕಾರ್ಯಾಗಾರಗಳು ಅಥವಾ ಅಂತಹುದೇ ಸಭೆಗಳು ಸಹ ಅಲ್ಲಾಹು ಇಚ್ಛಿಸಿದರೆ ಇದೇ ಶ್ರೇಷ್ಠತೆಯನ್ನು ಹೊಂದಿವೆ."
ಅಲ್ಲಾಹು ಪ್ರತಿಫಲವನ್ನು ಇಟ್ಟಿರುವುದು ವಂಶಗಳ ಆಧಾರದಲ್ಲಲ್ಲ, ಬದಲಾಗಿ ಕರ್ಮಗಳ ಆಧಾರದಲ್ಲಾಗಿದೆ.
Attribution
Categories
Share hadeeth
Sharing options · 0 Total shares

