ಅಲ್ಲಾಹು ನನ್ನನ್ನು ಕಳುಹಿಸಿರುವ ಮಾರ್ಗದರ್ಶನ ಮತ್ತು ಜ್ಞಾನದ ಉದಾಹರಣೆಯು, ಒಂದು ಭೂಮಿಯ ಮೇಲೆ ಬಿದ್ದ ಭಾರೀ ಮಳೆಯಂತಿದೆ
Choose an available translation of this Hadeeth
Hadeeth text
ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನನ್ನನ್ನು ಕಳುಹಿಸಿರುವ ಮಾರ್ಗದರ್ಶನ ಮತ್ತು ಜ್ಞಾನದ ಉದಾಹರಣೆಯು, ಒಂದು ಭೂಮಿಯ ಮೇಲೆ ಬಿದ್ದ ಭಾರೀ ಮಳೆಯಂತಿದೆ. ಅದರಲ್ಲಿ ಒಂದು ಭಾಗವು ಫಲವತ್ತಾದ ಭೂಮಿಯಾಗಿತ್ತು, ಅದು ನೀರನ್ನು ಸ್ವೀಕರಿಸಿ, ಹುಲ್ಲು ಮತ್ತು ಹೇರಳವಾದ ಸಸ್ಯಗಳನ್ನು ಬೆಳೆಸಿತು. ಮತ್ತು ಅದರಲ್ಲಿ ಇನ್ನೊಂದು ಭಾಗವು ಬಂಜರು ಭೂಮಿಯಾಗಿತ್ತು, ಅದು ನೀರನ್ನು ಹಿಡಿದಿಟ್ಟುಕೊಂಡಿತು. ಆಗ ಅಲ್ಲಾಹು ಅದರ ಮೂಲಕ ಜನರಿಗೆ ಪ್ರಯೋಜನ ನೀಡಿದನು; ಅವರು ಅದರಿಂದ ಕುಡಿದರು, (ತಮ್ಮ ಪ್ರಾಣಿಗಳಿಗೆ) ಕುಡಿಸಿದರು ಮತ್ತು (ತಮ್ಮ ಹೊಲಗಳಿಗೆ) ನೀರು ಹಾಯಿಸಿದರು. ಮತ್ತು ಅದು (ಮಳೆ) ಇನ್ನೊಂದು ಭಾಗಕ್ಕೂ ಬಿದ್ದಿತು, ಅದು ಕೇವಲ ಬಯಲು ನೆಲವಾಗಿತ್ತು. ಅದು ನೀರನ್ನೂ ಹಿಡಿದಿಟ್ಟುಕೊಳ್ಳುವುದಿಲ್ಲ, ಸಸ್ಯವನ್ನೂ ಬೆಳೆಸುವುದಿಲ್ಲ. ಇದು, ಯಾರು ಅಲ್ಲಾಹನ ಧರ್ಮದಲ್ಲಿ ಜ್ಞಾನ (ಫಿಕ್ಹ್) ವನ್ನು ಪಡೆದು, ಅಲ್ಲಾಹು ನನ್ನನ್ನು ಕಳುಹಿಸಿರುವ ವಿಷಯದಿಂದ ಪ್ರಯೋಜನ ಪಡೆದು, ತಾನೂ ಕಲಿತು ಇತರರಿಗೂ ಕಲಿಸಿದನೋ ಅವನ ಉದಾಹರಣೆಯಾಗಿದೆ, ಮತ್ತು ಯಾರು ಅದನ್ನು ತಲೆ ಎತ್ತಿ ನೋಡಲಿಲ್ಲವೋ, ಮತ್ತು ನಾನು ಯಾವುದರೊಂದಿಗೆ ಕಳುಹಿಸಲ್ಪಟ್ಟೆನೋ ಆ ಅಲ್ಲಾಹನ ಮಾರ್ಗದರ್ಶನವನ್ನು ಸ್ವೀಕರಿಸಲಿಲ್ಲವೋ ಅವನ ಉದಾಹರಣೆಯಾಗಿದೆ."
Explanation
Benefits
ಜನರಿಗೆ ಅರ್ಥಗಳನ್ನು ಹತ್ತಿರ ತರಲು ಉದಾಹರಣೆಗಳನ್ನು ನೀಡಲಾಗಿದೆ.
ಇಮಾಮ್ ಖುರ್ತುಬಿ ಹೇಳುತ್ತಾರೆ: "ಹೇಗೆ ಮಳೆಯು ಸತ್ತ ಭೂಮಿಯನ್ನು ಪುನರುಜ್ಜೀವನಗೊಳಿಸುತ್ತದೆಯೋ, ಹಾಗೆಯೇ ಧಾರ್ಮಿಕ ಜ್ಞಾನಗಳು ಸತ್ತ ಹೃದಯವನ್ನು ಪುನರುಜ್ಜೀವನಗೊಳಿಸುತ್ತವೆ. ನಂತರ ಅವರು (ಪ್ರವಾದಿ) ತಮಗೆ ಕಿವಿಗೊಡುವವರನ್ನು ಮಳೆ ಬೀಳುವ ವಿವಿಧ ರೀತಿಯ ಭೂಮಿಗಳಿಗೆ ಹೋಲಿಸಿದ್ದಾರೆ."
ಶರೀಅತ್‌ನ (ಧಾರ್ಮಿಕ) ಜ್ಞಾನವನ್ನು ಸ್ವೀಕರಿಸುವಲ್ಲಿ ಜನರು ವಿವಿಧ ದರ್ಜೆಗಳಲ್ಲಿರುತ್ತಾರೆ.
Attribution
Categories
Share hadeeth
Sharing options · 0 Total shares

