ಈ ಕುರ್‌ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕುರ್‌ಆನ್ ನೆನಪಿನಿಂದ ಮಾಸಿ ಹೋಗುತ್ತದೆ
ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈ ಕುರ್‌ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ…

