ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ
Choose an available translation of this Hadeeth
Hadeeth text
ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ."
Explanation
ನಂತರ ಅವರು ಅದನ್ನು ವಿವರಿಸುತ್ತಾ ಹೀಗೆ ಹೇಳುತ್ತಾರೆ: "ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ." ಅಲಿಫ್-ಲಾಮ್-ಮೀಮ್ ಮೂರು ಅಕ್ಷರಗಳಾಗಿದ್ದು ಅದನ್ನು ಪಠಿಸಿದರೆ ಮೂವತ್ತು ಒಳಿತುಗಳನ್ನು ಮಾಡಿದ ಪ್ರತಿಫಲ ದೊರಕುತ್ತದೆ.
Benefits
ಕುರ್‌ಆನ್ ಪಠಣ ಮಾಡುವವರಿಗೆ ಅವರು ಪಠಿಸುವ ಪ್ರತಿಯೊಂದು ಶಬ್ದದ ಪ್ರತಿಯೊಂದು ಅಕ್ಷರಕ್ಕೂ ಹತ್ತು ಪಟ್ಟು ಒಳಿತುಗಳನ್ನು ಮಾಡಿದ ಪ್ರತಿಫಲವಿದೆ.
ಅಲ್ಲಾಹನ ದಯೆ ಮತ್ತು ಉದಾರತೆಯನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ. ಏಕೆಂದರೆ, ಅವನು ತನ್ನ ಔದಾರ್ಯ ಮತ್ತು ಅನುಗ್ರಹದಿಂದ ದಾಸರಿಗೆ ಹೆಚ್ಚು ಹೆಚ್ಚು ಪ್ರತಿಫಲ ನೀಡುತ್ತಾನೆ.
ಇತರ ವಚನಗಳಿಗಿಂತಲೂ ಕುರ್‌ಆನ್ ವಚನಗಳಿಗೆ ಶ್ರೇಷ್ಠತೆಯಿದೆಯೆಂದು ಮತ್ತು ಅದನ್ನು ಪಠಿಸುವುದು ಆರಾಧನೆಯಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಅಲ್ಲಾಹನ ವಚನವಾಗಿದೆ.
Attribution
Categories
Share hadeeth
Sharing options · 0 Total shares

