ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಹೀ' (ದೇವವಾಣಿ) ಪ್ರಾರಂಭವಾಗಿದ್ದು ನಿದ್ರೆಯಲ್ಲಿನ ಸತ್ಯವಾದ ಕನಸುಗಳ ಮೂಲಕ
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ವಹೀ' (ದೇವವಾಣಿ) ಪ್ರಾರಂಭವಾಗಿದ್ದು ನಿದ್ರೆಯಲ್ಲಿನ ಸತ್ಯವಾದ ಕನಸುಗಳ ಮೂಲಕ. ಅವರು ಯಾವುದೇ ಕನಸನ್ನು ಕಂಡರೂ, ಅದು ಬೆಳಗಿನ ಜಾವದ ಬೆಳಕಿನಂತೆ ನಿಜವ…

