ಪುನರುತ್ಥಾನ ದಿನದಂದು ಒಬ್ಬ ವ್ಯಕ್ತಿಯನ್ನು ತರಲಾಗುವುದು ಮತ್ತು ಅವನನ್ನು ನರಕಕ್ಕೆ ಎಸೆಯಲಾಗುವುದು. ಆಗ ಅವನ ಕರುಳುಗಳು ಹೊಟ್ಟೆಯಿಂದ ಹೊರ ಚೆಲ್ಲುವುವು. ಕತ್ತೆಯು ಗಾಣಕ್ಕೆ ಸುತ್ತು ಬರುವಂತೆ ಅವನು ಅದರೊಂದಿಗೆ ಸುತ್ತು ಬರುವನು
ಉಸಾಮ ಬಿನ್ ಝೈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರೊಡನೆ ಒಬ್ಬರು ಕೇಳಿದರು: "ನೀವೇಕೆ ಉಸ್ಮಾನ್ ರವರ ಬಳಿಗೆ ಹೋಗಿ ಅವರಲ್ಲಿ ಮಾತನಾಡುವುದಿಲ್ಲ?" ಅವರು ಉತ್ತರಿಸಿದರು: "ನಿಮಗೆ ಕೇಳಿಸುವ ರೀತಿಯಲ್ಲೇ ನಾನು ಅವರಲ್ಲಿ ಮಾತನಾಡಬೇಕು ಎಂದು ನೀವು ಭಾವಿಸಿದ್ದೀರಾ? ಅಲ್ಲಾಹನಾಣೆ! ನಾನು ಅವರೊಡನೆ ನಮ್ಮಿಬ್ಬರಿಗೆ ಸಂ…

