ನನ್ನ ಮುಂದೆ ಸ್ವರ್ಗ ಮತ್ತು ನರಕವನ್ನು ಪ್ರದರ್ಶಿಸಲಾಯಿತು. ಇಂದಿನಂತೆ ಒಳಿತು ಮತ್ತು ಕೆಡುಕನ್ನು (ಒಟ್ಟಿಗೆ) ನಾನು ಎಂದಿಗೂ ನೋಡಿರಲಿಲ್ಲ. ನಾನು ತಿಳಿದಿರುವುದನ್ನು ನೀವು ತಿಳಿದಿದ್ದರೆ, ನೀವು ಖಂಡಿತವಾಗಿಯೂ ಕಡಿಮೆ ನಗುತ್ತಿದ್ದಿರಿ ಮತ್ತು ಹೆಚ್ಚು ಅಳುತ್ತಿದ್ದಿರಿ
Choose an available translation of this Hadeeth
Hadeeth text
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳ ಕಡೆಯಿಂದ ಏನೋ ತಲುಪಿತು. ಆಗ ಅವರು ಪ್ರವಚನ ನೀಡುತ್ತಾ ಹೇಳಿದರು: "ನನ್ನ ಮುಂದೆ ಸ್ವರ್ಗ ಮತ್ತು ನರಕವನ್ನು ಪ್ರದರ್ಶಿಸಲಾಯಿತು. ಇಂದಿನಂತೆ ಒಳಿತು ಮತ್ತು ಕೆಡುಕನ್ನು (ಒಟ್ಟಿಗೆ) ನಾನು ಎಂದಿಗೂ ನೋಡಿರಲಿಲ್ಲ. ನಾನು ತಿಳಿದಿರುವುದನ್ನು ನೀವು ತಿಳಿದಿದ್ದರೆ, ನೀವು ಖಂಡಿತವಾಗಿಯೂ ಕಡಿಮೆ ನಗುತ್ತಿದ್ದಿರಿ ಮತ್ತು ಹೆಚ್ಚು ಅಳುತ್ತಿದ್ದಿರಿ". ಅವರು (ಅನಸ್) ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಿಗೆ ಅದಕ್ಕಿಂತ ಕಠಿಣವಾದ ದಿನವು ಬಂದಿರಲಿಲ್ಲ. ಅವರು (ಅನಸ್) ಹೇಳುತ್ತಾರೆ: ಅವರು (ಸಹಾಬಿಗಳು) ತಮ್ಮ ತಲೆಗಳನ್ನು ಮುಚ್ಚಿಕೊಂಡರು. ಅವರು ಬಿಕ್ಕಳಿಸಿ ಅಳುವ ಶಬ್ದ ಕೇಳಿಬರುತ್ತಿತ್ತು. ಅನಸ್ ಹೇಳುತ್ತಾರೆ: ಆಗ ಉಮರ್ ಎದ್ದು ನಿಂತು ಹೇಳಿದರು: "ನಾವು ಅಲ್ಲಾಹನನ್ನು ಪರಿಪಾಲಕನಾಗಿ, ಇಸ್ಲಾಂ ಅನ್ನು ಧರ್ಮವಾಗಿ, ಮತ್ತು ಮುಹಮ್ಮದ್ ರನ್ನು ಪ್ರವಾದಿಯಾಗಿ ತೃಪ್ತಿಪಟ್ಟಿದ್ದೇವೆ". ಅನಸ್ ಹೇಳುತ್ತಾರೆ: ಆಗ ಒಬ್ಬ ವ್ಯಕ್ತಿ ಎದ್ದು ನಿಂತು ಕೇಳಿದರು: "ನನ್ನ ತಂದೆ ಯಾರು?" ಪ್ರವಾದಿ ಹೇಳಿದರು: "ನಿನ್ನ ತಂದೆ ಇಂತಿಂತಹ ವ್ಯಕ್ತಿ". ಆಗ ಈ ವಚನವು ಅವತೀರ್ಣವಾಯಿತು: “ಓ ಸತ್ಯವಿಶ್ವಾಸಿಗಳೇ, ಕೆಲವು ವಿಷಯಗಳ ಬಗ್ಗೆ ಕೇಳಬೇಡಿ. ಅವು ನಿಮಗೆ ಬಹಿರಂಗಗೊಳಿಸಲ್ಪಟ್ಟರೆ ನಿಮಗೆ ನೋವು ಉಂಟುಮಾಡಬಹುದು.” [ಸೂರ ಅಲ್-ಮಾಇದಾ: 101].
Explanation
ಅವರು (ಪ್ರವಾದಿ) ಹೇಳಿದರು: "ನಿನ್ನ ತಂದೆ ಇಂತಿಂತಹ ವ್ಯಕ್ತಿ". ಆಗ ಈ ವಚನವು ಅವತೀರ್ಣವಾಯಿತು: “ಓ ಸತ್ಯವಿಶ್ವಾಸಿಗಳೇ, ಕೆಲವು ವಿಷಯಗಳ ಬಗ್ಗೆ ಕೇಳಬೇಡಿ. ಅವು ನಿಮಗೆ ಬಹಿರಂಗಗೊಳಿಸಲ್ಪಟ್ಟರೆ ನಿಮಗೆ ನೋವು ಉಂಟುಮಾಡಬಹುದು.” [ಸೂರ ಅಲ್-ಮಾಇದಾ: 101].
Benefits
ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಉಪದೇಶದಿಂದ ಪ್ರಭಾವಿತರಾಗುತ್ತಿದ್ದರು, ಮತ್ತು ಸರ್ವಶಕ್ತನಾದ ಅಲ್ಲಾಹನ ಶಿಕ್ಷೆಯನ್ನು ತೀವ್ರವಾಗಿ ಭಯಪಡುತ್ತಿದ್ದರು.
ಅಳುವಾಗ ಮುಖವನ್ನು ಮುಚ್ಚಿಕೊಳ್ಳುವುದು ಅಪೇಕ್ಷಿತವಾಗಿದೆ.
ಅಲ್-ಖತ್ತಾಬೀ ಹೇಳುತ್ತಾರೆ: ಈ ಹದೀಸ್, ಯಾರು ತಮಗೆ ಅಗತ್ಯವಿಲ್ಲದ ವಿಷಯದ ಬಗ್ಗೆ ಅನಗತ್ಯವಾಗಿ ಅಥವಾ ಹಠದಿಂದ ಕೇಳುತ್ತಾರೋ ಅವರಿಗೆ ಸಂಬಂಧಿಸಿದ್ದಾಗಿದೆ. ಆದರೆ, ಯಾರು ಅನಿವಾರ್ಯತೆಯಿಂದ, ಅಂದರೆ ಒಂದು ಸಮಸ್ಯೆ ಎದುರಾಗಿ ಅದರ ಬಗ್ಗೆ ಕೇಳುತ್ತಾರೋ, ಅವರಿಗೆ ಯಾವುದೇ ಪಾಪ ಅಥವಾ ದೋಷವಿಲ್ಲ.
ಅಲ್ಲಾಹನಿಗೆ ವಿಧೇಯತೆ ತೋರುವುದರಲ್ಲಿ ಸ್ಥಿರವಾಗಿರಲು, ಅಲ್ಲಾಹನಿಗೆ ಅವಿಧೇಯತೆ ತೋರುವುದರಿಂದ ದೂರವಿರಲು, ಮತ್ತು ಅಲ್ಲಾಹನ ಎಲ್ಲೆಗಳಲ್ಲಿ ನಿಲ್ಲಲು ಪ್ರೋತ್ಸಾಹಿಸಲಾಗಿದೆ.
ಉಪದೇಶ ಮಾಡುವಾಗ ಮತ್ತು ಕಲಿಸುವಾಗ (ಸಕಾರಣವಾಗಿದ್ದರೆ) ಕೋಪಗೊಳ್ಳಲು ಅನುಮತಿಯಿದೆ.
Attribution
Categories
Share hadeeth
Sharing options · 0 Total shares

