النور

 

An-Nur

 

The Light

1 - An-Nur (The Light) - 001

سُورَةٌ أَنزَلۡنَٰهَا وَفَرَضۡنَٰهَا وَأَنزَلۡنَا فِيهَآ ءَايَٰتِۭ بَيِّنَٰتٖ لَّعَلَّكُمۡ تَذَكَّرُونَ
ಇದು ನಾವು ಅವತೀರ್ಣಗೊಳಿಸಿದ ಮತ್ತು ನಿಗದಿಗೊಳಿಸಿದ ಒಂದು ಅಧ್ಯಾಯವಾಗಿದೆ. ನಾವು ಇದರಲ್ಲಿ ಸ್ಪಷ್ಟವಾದ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ನೀವು ಉಪದೇಶ ಪಡೆಯುವುದಕ್ಕಾಗಿ.

2 - An-Nur (The Light) - 002

ٱلزَّانِيَةُ وَٱلزَّانِي فَٱجۡلِدُواْ كُلَّ وَٰحِدٖ مِّنۡهُمَا مِاْئَةَ جَلۡدَةٖۖ وَلَا تَأۡخُذۡكُم بِهِمَا رَأۡفَةٞ فِي دِينِ ٱللَّهِ إِن كُنتُمۡ تُؤۡمِنُونَ بِٱللَّهِ وَٱلۡيَوۡمِ ٱلۡأٓخِرِۖ وَلۡيَشۡهَدۡ عَذَابَهُمَا طَآئِفَةٞ مِّنَ ٱلۡمُؤۡمِنِينَ
ವ್ಯಭಿಚಾರ ಮಾಡುವ ಸ್ತ್ರೀ-ಪುರುಷರಲ್ಲಿ ಪ್ರತಿಯೊಬ್ಬರಿಗೂ ನೂರು ಚಡಿಯೇಟು ನೀಡಿರಿ.[1] ಅವರ ಮೇಲೆ ಅಲ್ಲಾಹನ ಕಾನೂನನ್ನು ಜಾರಿಗೊಳಿಸುವ ವಿಷಯದಲ್ಲಿ ನೀವು ಸ್ವಲ್ಪವೂ ಅನುಕಂಪ ತೋರಬಾರದು. ನಿಮಗೆ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿದ್ದರೆ. ಅವರಿಗೆ ಶಿಕ್ಷೆ ನೀಡುವಾಗ ಸತ್ಯವಿಶ್ವಾಸಿಗಳ ಒಂದು ಗುಂಪು ಅಲ್ಲಿ ಉಪಸ್ಥಿತರಿರಲಿ.
[1] ವ್ಯಭಿಚಾರ ಮಾಡಿದವರು ಸ್ವಯಂ ತಪ್ಪೊಪ್ಪಿಕೊಂಡರೆ, ಅಥವಾ ಅವರು ವ್ಯಭಿಚಾರ ಮಾಡಿದ್ದನ್ನು ನೋಡಿದ್ದೇವೆಂದು ನಾಲ್ಕು ಮಂದಿ ಸಾಕ್ಷಿ ನುಡಿದರೆ ಮಾತ್ರ ವ್ಯಭಿಚಾರದ ಶಿಕ್ಷೆ ಜಾರಿ ಮಾಡಲಾಗುತ್ತದೆ. ಇಲ್ಲಿ ಹೇಳಿರುವುದು ವ್ಯಭಿಚಾರ ಮಾಡುವ ಅವಿವಾಹಿತ ಪುರುಷ ಮತ್ತು ಮಹಿಳೆಗೆ ನೀಡಲಾಗುವ ಶಿಕ್ಷೆ. ವ್ಯಭಿಚಾರ ಮಾಡಿದವರು ವಿವಾಹಿತರಾಗಿದ್ದರೆ ಅವರನ್ನು ಕಲ್ಲೆಸೆದು ಸಾಯಿಸಲಾಗುತ್ತದೆ.

3 - An-Nur (The Light) - 003

ٱلزَّانِي لَا يَنكِحُ إِلَّا زَانِيَةً أَوۡ مُشۡرِكَةٗ وَٱلزَّانِيَةُ لَا يَنكِحُهَآ إِلَّا زَانٍ أَوۡ مُشۡرِكٞۚ وَحُرِّمَ ذَٰلِكَ عَلَى ٱلۡمُؤۡمِنِينَ
ವ್ಯಭಿಚಾರಿ ಪುರುಷನು ವ್ಯಭಿಚಾರಿ ಮಹಿಳೆ ಅಥವಾ ಬಹುದೇವಾರಾಧಕಿ ಮಹಿಳೆಯ ಹೊರತಾಗಿ ಬೇರೆ ಯಾರನ್ನೂ ವಿವಾಹವಾಗುವುದಿಲ್ಲ. ವ್ಯಭಿಚಾರಿ ಮಹಿಳೆ ವ್ಯಭಿಚಾರಿ ಪುರುಷ ಅಥವಾ ಬಹುದೇವಾರಾಧಕ ಪುರುಷನ ಹೊರತಾಗಿ ಬೇರೆ ಯಾರನ್ನೂ ವಿವಾಹವಾಗುವುದಿಲ್ಲ. ಸತ್ಯವಿಶ್ವಾಸಿಗಳಿಗೆ ಇಂತಹವರನ್ನು ವಿವಾಹವಾಗುವುದು ನಿಷಿದ್ಧವಾಗಿದೆ.

4 - An-Nur (The Light) - 004

وَٱلَّذِينَ يَرۡمُونَ ٱلۡمُحۡصَنَٰتِ ثُمَّ لَمۡ يَأۡتُواْ بِأَرۡبَعَةِ شُهَدَآءَ فَٱجۡلِدُوهُمۡ ثَمَٰنِينَ جَلۡدَةٗ وَلَا تَقۡبَلُواْ لَهُمۡ شَهَٰدَةً أَبَدٗاۚ وَأُوْلَـٰٓئِكَ هُمُ ٱلۡفَٰسِقُونَ
ಪರಿಶುದ್ಧ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಮಾಡಿ, ನಂತರ (ಅದನ್ನು ಸಾಬೀತುಪಡಿಸಲು) ನಾಲ್ಕು ಸಾಕ್ಷಿಗಳನ್ನು ತರಲು ಸಾಧ್ಯವಾಗದವರಿಗೆ ಎಂಬತ್ತು ಚಡಿಯೇಟು ನೀಡಿರಿ. ಅವರ ಸಾಕ್ಷ್ಯವನ್ನು ಎಂದಿಗೂ ಸ್ವೀಕರಿಸಬೇಡಿ. ಅವರೇ ನಿಜವಾದ ದುಷ್ಕರ್ಮಿಗಳು.

5 - An-Nur (The Light) - 005

إِلَّا ٱلَّذِينَ تَابُواْ مِنۢ بَعۡدِ ذَٰلِكَ وَأَصۡلَحُواْ فَإِنَّ ٱللَّهَ غَفُورٞ رَّحِيمٞ
ಆದರೆ ಅದರ ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡವರು ಇದಕ್ಕೆ ಹೊರತಾಗಿದ್ದಾರೆ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು, ದಯೆ ತೋರುವವನಾಗಿದ್ದಾನೆ.

6 - An-Nur (The Light) - 006

وَٱلَّذِينَ يَرۡمُونَ أَزۡوَٰجَهُمۡ وَلَمۡ يَكُن لَّهُمۡ شُهَدَآءُ إِلَّآ أَنفُسُهُمۡ فَشَهَٰدَةُ أَحَدِهِمۡ أَرۡبَعُ شَهَٰدَٰتِۭ بِٱللَّهِ إِنَّهُۥ لَمِنَ ٱلصَّـٰدِقِينَ
ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಮಾಡುವವರು ಮತ್ತು ಅದಕ್ಕೆ ಸ್ವತಃ ಅವರ ಹೊರತು ಬೇರೆ ಸಾಕ್ಷಿಯಿಲ್ಲದವರು ಯಾರೋ—ಅವರಲ್ಲಿ ಪ್ರತಿಯೊಬ್ಬರೂ (ತಮ್ಮ ಆರೋಪವನ್ನು ಸಾಬೀತುಪಡಿಸಲು) “ಖಂಡಿತವಾಗಿಯೂ ನಾನು ಸತ್ಯ ಹೇಳುವವರಲ್ಲೇ ಸೇರಿದ್ದೇನೆ” ಎಂದು ಅಲ್ಲಾಹನ ಹೆಸರಲ್ಲಿ ನಾಲ್ಕು ಬಾರಿ ಆಣೆ ಮಾಡಿ ಹೇಳಬೇಕು.

7 - An-Nur (The Light) - 007

وَٱلۡخَٰمِسَةُ أَنَّ لَعۡنَتَ ٱللَّهِ عَلَيۡهِ إِن كَانَ مِنَ ٱلۡكَٰذِبِينَ
ಐದನೆಯ ಬಾರಿ ಅವನು, “ನಾನು ಸುಳ್ಳು ಹೇಳುವವರಲ್ಲಿ ಸೇರಿದ್ದರೆ ಅಲ್ಲಾಹನ ಶಾಪ ನನ್ನ ಮೇಲಿರಲಿ” ಎಂದು ಆಣೆ ಮಾಡಿ ಹೇಳಬೇಕು.

8 - An-Nur (The Light) - 008

وَيَدۡرَؤُاْ عَنۡهَا ٱلۡعَذَابَ أَن تَشۡهَدَ أَرۡبَعَ شَهَٰدَٰتِۭ بِٱللَّهِ إِنَّهُۥ لَمِنَ ٱلۡكَٰذِبِينَ
ಅವಳಿಗೆ ಶಿಕ್ಷೆಯಿಂದ ಮುಕ್ತಿ ಸಿಗಬೇಕಾದರೆ, ಅವಳು ನಾಲ್ಕು ಬಾರಿ ಅಲ್ಲಾಹನ ಮೇಲೆ ಆಣೆ ಮಾಡಿ, “ಅವನು ಸುಳ್ಳು ಹೇಳುವವರಲ್ಲಿ ಸೇರಿದ್ದಾನೆ” ಎಂದು ಹೇಳಬೇಕು.

9 - An-Nur (The Light) - 009

وَٱلۡخَٰمِسَةَ أَنَّ غَضَبَ ٱللَّهِ عَلَيۡهَآ إِن كَانَ مِنَ ٱلصَّـٰدِقِينَ
ಐದನೆಯ ಬಾರಿ ಅವಳು, “ಅವನು ಸತ್ಯ ಹೇಳುವವರಲ್ಲಿ ಸೇರಿದ್ದರೆ ಅಲ್ಲಾಹನ ಕೋಪ ನನ್ನ ಮೇಲಿರಲಿ” ಎಂದು ಆಣೆ ಮಾಡಿ ಹೇಳಬೇಕು.

10 - An-Nur (The Light) - 010

وَلَوۡلَا فَضۡلُ ٱللَّهِ عَلَيۡكُمۡ وَرَحۡمَتُهُۥ وَأَنَّ ٱللَّهَ تَوَّابٌ حَكِيمٌ
ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ (ನಿಮಗೆ ಬಹಳ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತಿತ್ತು). ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ವಿವೇಕಪೂರ್ಣನಾಗಿದ್ದಾನೆ.

11 - An-Nur (The Light) - 011

إِنَّ ٱلَّذِينَ جَآءُو بِٱلۡإِفۡكِ عُصۡبَةٞ مِّنكُمۡۚ لَا تَحۡسَبُوهُ شَرّٗا لَّكُمۖ بَلۡ هُوَ خَيۡرٞ لَّكُمۡۚ لِكُلِّ ٱمۡرِيٕٖ مِّنۡهُم مَّا ٱكۡتَسَبَ مِنَ ٱلۡإِثۡمِۚ وَٱلَّذِي تَوَلَّىٰ كِبۡرَهُۥ مِنۡهُمۡ لَهُۥ عَذَابٌ عَظِيمٞ
ನಿಶ್ಚಯವಾಗಿಯೂ ಆ ಸುಳ್ಳು ಸುದ್ದಿಯನ್ನು ತಂದವರು ನಿಮ್ಮಲ್ಲೇ ಇರುವ ಒಂದು ಗುಂಪಿನವರಾಗಿದ್ದಾರೆ. ಅದು ನಿಮಗೆ ಕೆಡುಕೆಂದು ಭಾವಿಸಬೇಡಿ. ಬದಲಿಗೆ, ಅದು ನಿಮಗೆ ಒಳಿತಾಗಿದೆ. ಅವರಲ್ಲಿ ಪ್ರತಿಯೊಬ್ಬರಿಗೂ ಅವರು ಮಾಡಿದ ಪಾಪಕ್ಕೆ ತಕ್ಕಂತೆ ಶಿಕ್ಷೆಯಿದೆ. ಅವರಲ್ಲಿ ಹಿರಿಯ ಪಾತ್ರ ವಹಿಸಿದವನಾರೋ ಅವನಿಗೆ ಘೋರ ಶಿಕ್ಷೆಯಿದೆ.[1]
[1] ಇಲ್ಲಿ ಹೇಳಿರುವುದು ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಆಯಿಶರ ಮೇಲೆ ವ್ಯಭಿಚಾರ ಆರೋಪ ಹೊರಿಸಿದವರ ಬಗ್ಗೆ. ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಈ ಅಪಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.

12 - An-Nur (The Light) - 012

لَّوۡلَآ إِذۡ سَمِعۡتُمُوهُ ظَنَّ ٱلۡمُؤۡمِنُونَ وَٱلۡمُؤۡمِنَٰتُ بِأَنفُسِهِمۡ خَيۡرٗا وَقَالُواْ هَٰذَآ إِفۡكٞ مُّبِينٞ
ಆ ಸುದ್ದಿಯನ್ನು ಕೇಳಿದಾಗ ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರು ತಮ್ಮದೇ ಜನರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಂಡು, “ಇದು ಸ್ಪಷ್ಟ ಸುಳ್ಳಾರೋಪವಾಗಿದೆ” ಎಂದು ಏಕೆ ಹೇಳಲಿಲ್ಲ?

13 - An-Nur (The Light) - 013

لَّوۡلَا جَآءُو عَلَيۡهِ بِأَرۡبَعَةِ شُهَدَآءَۚ فَإِذۡ لَمۡ يَأۡتُواْ بِٱلشُّهَدَآءِ فَأُوْلَـٰٓئِكَ عِندَ ٱللَّهِ هُمُ ٱلۡكَٰذِبُونَ
ಅವರು ಅದಕ್ಕೆ ನಾಲ್ಕು ಸಾಕ್ಷಿಗಳನ್ನು ಏಕೆ ತರಲಿಲ್ಲ? ಅವರು ಸಾಕ್ಷಿಗಳನ್ನು ತರದೇ ಇರುವುದರಿಂದ ಅಲ್ಲಾಹನ ದೃಷ್ಟಿಯಲ್ಲಿ ಅವರೇ ಸುಳ್ಳುಗಾರರಾಗಿದ್ದಾರೆ.

14 - An-Nur (The Light) - 014

وَلَوۡلَا فَضۡلُ ٱللَّهِ عَلَيۡكُمۡ وَرَحۡمَتُهُۥ فِي ٱلدُّنۡيَا وَٱلۡأٓخِرَةِ لَمَسَّكُمۡ فِي مَآ أَفَضۡتُمۡ فِيهِ عَذَابٌ عَظِيمٌ
ನಿಮ್ಮ ಮೇಲೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ, ನೀವು ತೊಡಗಿಕೊಂಡ ಈ ಚರ್ಚೆಯ ಕಾರಣದಿಂದಾಗಿ ಘೋರ ಶಿಕ್ಷೆಯು ನಿಮಗೆ ಸ್ಪರ್ಶಿಸುತ್ತಿತ್ತು.

15 - An-Nur (The Light) - 015

إِذۡ تَلَقَّوۡنَهُۥ بِأَلۡسِنَتِكُمۡ وَتَقُولُونَ بِأَفۡوَاهِكُم مَّا لَيۡسَ لَكُم بِهِۦ عِلۡمٞ وَتَحۡسَبُونَهُۥ هَيِّنٗا وَهُوَ عِندَ ٱللَّهِ عَظِيمٞ
ನೀವು ಅದನ್ನು ನಿಮ್ಮ ನಾಲಗೆಗಳಿಂದ ಸ್ವೀಕರಿಸುತ್ತಲೂ ಮತ್ತು ನಿಮಗೆ ಯಾವುದೇ ಜ್ಞಾನವಿಲ್ಲದ ಆ ವಿಷಯವನ್ನು ನಿಮ್ಮ ಬಾಯಿ ಮೂಲಕ ಮಾತನಾಡುತ್ತಲೂ ಇದ್ದ ಸಂದರ್ಭ(ವನ್ನು ಸ್ಮರಿಸಿ). ನೀವು ಅದನ್ನು ಕ್ಷುಲ್ಲಕವೆಂದು ಭಾವಿಸಿರಬಹುದು. ಆದರೆ ಅಲ್ಲಾಹನ ದೃಷ್ಟಿಯಲ್ಲಿ ಅದು ಗಂಭೀರ ವಿಷಯವಾಗಿದೆ.

16 - An-Nur (The Light) - 016

وَلَوۡلَآ إِذۡ سَمِعۡتُمُوهُ قُلۡتُم مَّا يَكُونُ لَنَآ أَن نَّتَكَلَّمَ بِهَٰذَا سُبۡحَٰنَكَ هَٰذَا بُهۡتَٰنٌ عَظِيمٞ
ನೀವು ಅದನ್ನು ಕೇಳಿದಾಗ, “ಇದರ ಬಗ್ಗೆ ಮಾತನಾಡುವುದು ನಮಗೆ ಯೋಗ್ಯವಾದುದಲ್ಲ. ಅಲ್ಲಾಹು ಪರಿಶುದ್ಧನು. ಇದೊಂದು ಮಹಾ ಸುಳ್ಳಾರೋಪವಾಗಿದೆ” ಎಂದು ಏಕೆ ಹೇಳಲಿಲ್ಲ?

17 - An-Nur (The Light) - 017

يَعِظُكُمُ ٱللَّهُ أَن تَعُودُواْ لِمِثۡلِهِۦٓ أَبَدًا إِن كُنتُم مُّؤۡمِنِينَ
ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇಂತಹ ಕೆಲಸವನ್ನು ಮುಂದೆ ಎಂದಿಗೂ ಮಾಡಬಾರದೆಂದು ಅಲ್ಲಾಹು ನಿಮಗೆ ಉಪದೇಶ ನೀಡುತ್ತಿದ್ದಾನೆ.

18 - An-Nur (The Light) - 018

وَيُبَيِّنُ ٱللَّهُ لَكُمُ ٱلۡأٓيَٰتِۚ وَٱللَّهُ عَلِيمٌ حَكِيمٌ
ಅಲ್ಲಾಹು ನಿಮಗೆ ವಚನಗಳನ್ನು (ನಿಯಮಗಳನ್ನು) ವಿವರಿಸುತ್ತಿದ್ದಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

19 - An-Nur (The Light) - 019

إِنَّ ٱلَّذِينَ يُحِبُّونَ أَن تَشِيعَ ٱلۡفَٰحِشَةُ فِي ٱلَّذِينَ ءَامَنُواْ لَهُمۡ عَذَابٌ أَلِيمٞ فِي ٱلدُّنۡيَا وَٱلۡأٓخِرَةِۚ وَٱللَّهُ يَعۡلَمُ وَأَنتُمۡ لَا تَعۡلَمُونَ
ಸತ್ಯವಿಶ್ವಾಸಿಗಳ ನಡುವೆ ಅಶ್ಲೀಲವು ಪ್ರಚಾರವಾಗಬೇಕೆಂದು ಬಯಸುವವರು ಯಾರೋ ಅವರಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಯಾತನಾಮಯ ಶಿಕ್ಷೆಯಿದೆ. ಅಲ್ಲಾಹು ಎಲ್ಲವನ್ನೂ ತಿಳಿದಿದ್ದಾನೆ. ಆದರೆ ನೀವು ತಿಳಿದಿಲ್ಲ.

20 - An-Nur (The Light) - 020

وَلَوۡلَا فَضۡلُ ٱللَّهِ عَلَيۡكُمۡ وَرَحۡمَتُهُۥ وَأَنَّ ٱللَّهَ رَءُوفٞ رَّحِيمٞ
ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ (ನಿಮಗೆ ಬಹಳ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತಿತ್ತು). ನಿಶ್ಚಯವಾಗಿಯೂ ಅಲ್ಲಾಹು ಅನುಕಂಪ ತೋರುವವನು ಮತ್ತು ಮತ್ತು ದಯೆ ತೋರುವವನಾಗಿದ್ದಾನೆ.

21 - An-Nur (The Light) - 021

۞يَـٰٓأَيُّهَا ٱلَّذِينَ ءَامَنُواْ لَا تَتَّبِعُواْ خُطُوَٰتِ ٱلشَّيۡطَٰنِۚ وَمَن يَتَّبِعۡ خُطُوَٰتِ ٱلشَّيۡطَٰنِ فَإِنَّهُۥ يَأۡمُرُ بِٱلۡفَحۡشَآءِ وَٱلۡمُنكَرِۚ وَلَوۡلَا فَضۡلُ ٱللَّهِ عَلَيۡكُمۡ وَرَحۡمَتُهُۥ مَا زَكَىٰ مِنكُم مِّنۡ أَحَدٍ أَبَدٗا وَلَٰكِنَّ ٱللَّهَ يُزَكِّي مَن يَشَآءُۗ وَٱللَّهُ سَمِيعٌ عَلِيمٞ
ಓ ಸತ್ಯವಿಶ್ವಾಸಿಗಳೇ! ನೀವು ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ಯಾರು ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸುತ್ತಾನೋ—ನಿಶ್ಚಯವಾಗಿಯೂ ಶೈತಾನನು (ಅವನಿಗೆ) ಅಶ್ಲೀಲತೆ ಮತ್ತು ದುಷ್ಕೃತ್ಯಗಳನ್ನು ಮಾತ್ರ ಮಾಡಲು ಆದೇಶಿಸುತ್ತಾನೆ. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ನಿಮ್ಮಲ್ಲಿ ಯಾರೂ ಯಾವತ್ತೂ ಪರಿಶುದ್ಧರಾಗುತ್ತಿರಲಿಲ್ಲ. ಆದರೆ ಅಲ್ಲಾಹು ಅವನು ಬಯಸುವವರನ್ನು ಪರಿಶುದ್ಧಗೊಳಿಸುತ್ತಾನೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.

22 - An-Nur (The Light) - 022

وَلَا يَأۡتَلِ أُوْلُواْ ٱلۡفَضۡلِ مِنكُمۡ وَٱلسَّعَةِ أَن يُؤۡتُوٓاْ أُوْلِي ٱلۡقُرۡبَىٰ وَٱلۡمَسَٰكِينَ وَٱلۡمُهَٰجِرِينَ فِي سَبِيلِ ٱللَّهِۖ وَلۡيَعۡفُواْ وَلۡيَصۡفَحُوٓاْۗ أَلَا تُحِبُّونَ أَن يَغۡفِرَ ٱللَّهُ لَكُمۡۚ وَٱللَّهُ غَفُورٞ رَّحِيمٌ
ನಿಮ್ಮಲ್ಲಿರುವ ಶ್ರೇಷ್ಠರು ಮತ್ತು ಸಂಪನ್ನರು ತಮ್ಮ ಸಂಬಂಧಿಕರಿಗೆ, ಬಡವರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿದವರಿಗೆ ಏನೂ ಕೊಡುವುದಿಲ್ಲವೆಂದು ಪ್ರತಿಜ್ಞೆ ಮಾಡದಿರಲಿ.[1] ಅವರು ಅವರನ್ನು ಮನ್ನಿಸಲಿ ಮತ್ತು (ಅವರ ತಪ್ಪುಗಳನ್ನು) ನಿರ್ಲಕ್ಷಿಸಲಿ. ಅಲ್ಲಾಹು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಆಸೆ ಪಡುವುದಿಲ್ಲವೇ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ಮಿಸ್ತಹ್ ಎಂಬ ಹೆಸರಿನ ಸಹಾಬಿ ಅಚಾನಕ್ಕಾಗಿ ಈ ಅಪಪ್ರಚಾರದಲ್ಲಿ ಭಾಗಿಯಾಗಿದ್ದರು. ಇವರಿಗೆ ಆಯಿಶರ ತಂದೆ ಅಬೂಬಕರ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಖರ್ಚಿಗೆ ನೀಡುತ್ತಿದ್ದರು. ಈ ವಿಷಯ ತಿಳಿದಾಗ ಇನ್ನು ಮುಂದೆ ಅವರಿಗೆ ಖರ್ಚಿಗೆ ಏನೂ ಕೊಡುವುದಿಲ್ಲವೆಂದು ಅಬೂಬಕರ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಪ್ರತಿಜ್ಞೆ ಮಾಡಿದರು.

23 - An-Nur (The Light) - 023

إِنَّ ٱلَّذِينَ يَرۡمُونَ ٱلۡمُحۡصَنَٰتِ ٱلۡغَٰفِلَٰتِ ٱلۡمُؤۡمِنَٰتِ لُعِنُواْ فِي ٱلدُّنۡيَا وَٱلۡأٓخِرَةِ وَلَهُمۡ عَذَابٌ عَظِيمٞ
ಪರಿಶುದ್ಧರಾದ, (ವ್ಯಭಿಚಾರದ ಬಗ್ಗೆ) ಯೋಚಿಸಿಯೂ ಇರದ ಸತ್ಯವಿಶ್ವಾಸಿ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರು ಯಾರೋ—ಅವರನ್ನು ಇಹಲೋಕದಲ್ಲೂ ಪರಲೋಕದಲ್ಲೂ ಶಪಿಸಲಾಗಿದೆ. ಅವರಿಗೆ ಘೋರ ಶಿಕ್ಷೆಯಿದೆ.

24 - An-Nur (The Light) - 024

يَوۡمَ تَشۡهَدُ عَلَيۡهِمۡ أَلۡسِنَتُهُمۡ وَأَيۡدِيهِمۡ وَأَرۡجُلُهُم بِمَا كَانُواْ يَعۡمَلُونَ
ಅವರು ಮಾಡುತ್ತಿರುವ ಕೃತ್ಯಗಳ ಬಗ್ಗೆ ಅವರ ನಾಲಗೆಗಳು, ಕೈಗಳು ಮತ್ತು ಕಾಲುಗಳು ಅವರ ವಿರುದ್ಧ ಸಾಕ್ಷಿ ನುಡಿಯುವ ದಿನ.

25 - An-Nur (The Light) - 025

يَوۡمَئِذٖ يُوَفِّيهِمُ ٱللَّهُ دِينَهُمُ ٱلۡحَقَّ وَيَعۡلَمُونَ أَنَّ ٱللَّهَ هُوَ ٱلۡحَقُّ ٱلۡمُبِينُ
ಅಂದು ಅಲ್ಲಾಹು ಅವರಿಗೆ ಅವರ ನಿಜವಾದ ಪ್ರತಿಫಲವನ್ನು ಪೂರ್ಣವಾಗಿ ನೀಡುವನು. ಅಲ್ಲಾಹನೇ ಪರಮ ಸತ್ಯವೆಂದು ಅವರು ಖಂಡಿತ ತಿಳಿಯುವರು.

26 - An-Nur (The Light) - 026

ٱلۡخَبِيثَٰتُ لِلۡخَبِيثِينَ وَٱلۡخَبِيثُونَ لِلۡخَبِيثَٰتِۖ وَٱلطَّيِّبَٰتُ لِلطَّيِّبِينَ وَٱلطَّيِّبُونَ لِلطَّيِّبَٰتِۚ أُوْلَـٰٓئِكَ مُبَرَّءُونَ مِمَّا يَقُولُونَۖ لَهُم مَّغۡفِرَةٞ وَرِزۡقٞ كَرِيمٞ
ನೀಚ ಮಹಿಳೆಯರು ನೀಚ ಪುರುಷರಿಗೆ ಮತ್ತು ನೀಚ ಪುರುಷರು ನೀಚ ಮಹಿಳೆಯರಿಗೆ. ಪರಿಶುದ್ಧ ಮಹಿಳೆಯರು ಪರಿಶುದ್ಧ ಪುರುಷರಿಗೆ ಮತ್ತು ಪರಿಶುದ್ಧ ಪುರುಷರು ಪರಿಶುದ್ಧ ಮಹಿಳೆಯರಿಗೆ. ಅವರು ಮಾಡುತ್ತಿರುವ ಎಲ್ಲಾ (ನೀಚ) ಆರೋಪಗಳಿಂದ ಈ ಪರಿಶುದ್ಧ ಜನರು ಮುಕ್ತರಾಗಿದ್ದಾರೆ. ಇವರಿಗೆ ಕ್ಷಮೆ ಮತ್ತು ಗೌರವಾನ್ವಿತ ಉಪಜೀವನವಿದೆ.

27 - An-Nur (The Light) - 027

يَـٰٓأَيُّهَا ٱلَّذِينَ ءَامَنُواْ لَا تَدۡخُلُواْ بُيُوتًا غَيۡرَ بُيُوتِكُمۡ حَتَّىٰ تَسۡتَأۡنِسُواْ وَتُسَلِّمُواْ عَلَىٰٓ أَهۡلِهَاۚ ذَٰلِكُمۡ خَيۡرٞ لَّكُمۡ لَعَلَّكُمۡ تَذَكَّرُونَ
ಓ ಸತ್ಯವಿಶ್ವಾಸಿಗಳೇ! ನಿಮ್ಮ ಮನೆಗಳನ್ನು ಬಿಟ್ಟು ಬೇರೆ ಮನೆಗಳನ್ನು, ಆ ಮನೆಯವರಿಂದ ಅನುಮತಿ ಪಡೆದು ಅವರಿಗೆ ಸಲಾಮ್ ಹೇಳುವ ತನಕ ಪ್ರವೇಶಿಸಬೇಡಿ. ಅದು ನಿಮಗೆ ಉತ್ತಮವಾಗಿದೆ. ನೀವು ಉಪದೇಶ ಪಡೆಯುವುದಕ್ಕಾಗಿ.

28 - An-Nur (The Light) - 028

فَإِن لَّمۡ تَجِدُواْ فِيهَآ أَحَدٗا فَلَا تَدۡخُلُوهَا حَتَّىٰ يُؤۡذَنَ لَكُمۡۖ وَإِن قِيلَ لَكُمُ ٱرۡجِعُواْ فَٱرۡجِعُواْۖ هُوَ أَزۡكَىٰ لَكُمۡۚ وَٱللَّهُ بِمَا تَعۡمَلُونَ عَلِيمٞ
ಅಲ್ಲಿ ಯಾರೂ ಇಲ್ಲದಿದ್ದರೂ ಸಹ ನಿಮಗೆ ಅನುಮತಿ ಸಿಗುವ ತನಕ ಆ ಮನೆಗಳನ್ನು ಪ್ರವೇಶಿಸಬೇಡಿ. ನಿಮ್ಮೊಡನೆ ಹಿಂದಿರುಗಿ ಹೋಗಲು ಹೇಳಲಾದರೆ ಹಿಂದಿರುಗಿರಿ. ಅದು ನಿಮಗೆ ಅತ್ಯಂತ ಪರಿಶುದ್ಧವಾಗಿದೆ. ಅಲ್ಲಾಹು ನೀವು ಮಾಡುತ್ತಿರುವುದನ್ನು ತಿಳಿಯುತ್ತಾನೆ.

29 - An-Nur (The Light) - 029

لَّيۡسَ عَلَيۡكُمۡ جُنَاحٌ أَن تَدۡخُلُواْ بُيُوتًا غَيۡرَ مَسۡكُونَةٖ فِيهَا مَتَٰعٞ لَّكُمۡۚ وَٱللَّهُ يَعۡلَمُ مَا تُبۡدُونَ وَمَا تَكۡتُمُونَ
ಜನವಾಸವಿಲ್ಲದ ಮತ್ತು ನಿಮ್ಮ ಯಾವುದಾದರೂ ಬಳಕೆಗೆ ಇರುವಂತಹ ಮನೆಗಳನ್ನು (ಅನುಮತಿ ವಿನಾ) ಪ್ರವೇಶಿಸುವುದರಲ್ಲಿ ತಪ್ಪಿಲ್ಲ. ನೀವು ಬಹಿರಂಗಪಡಿಸುವುದನ್ನು ಮತ್ತು ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.

30 - An-Nur (The Light) - 030

قُل لِّلۡمُؤۡمِنِينَ يَغُضُّواْ مِنۡ أَبۡصَٰرِهِمۡ وَيَحۡفَظُواْ فُرُوجَهُمۡۚ ذَٰلِكَ أَزۡكَىٰ لَهُمۡۚ إِنَّ ٱللَّهَ خَبِيرُۢ بِمَا يَصۡنَعُونَ
(ಪ್ರವಾದಿಯವರೇ) ಸತ್ಯವಿಶ್ವಾಸಿಗಳೊಂದಿಗೆ ತಮ್ಮ ದೃಷ್ಟಿಗಳನ್ನು ತಗ್ಗಿಸಲು ಮತ್ತು ತಮ್ಮ ಗುಹ್ಯಭಾಗಗಳನ್ನು ರಕ್ಷಿಸಲು ಹೇಳಿರಿ. ಅದು ಅವರಿಗೆ ಅತ್ಯಂತ ಪರಿಶುದ್ಧವಾಗಿದೆ. ನಿಶ್ಚಯವಾಗಿಯೂ ಅವರು ಮಾಡುವುದೆಲ್ಲವನ್ನೂ ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.

31 - An-Nur (The Light) - 031

وَقُل لِّلۡمُؤۡمِنَٰتِ يَغۡضُضۡنَ مِنۡ أَبۡصَٰرِهِنَّ وَيَحۡفَظۡنَ فُرُوجَهُنَّ وَلَا يُبۡدِينَ زِينَتَهُنَّ إِلَّا مَا ظَهَرَ مِنۡهَاۖ وَلۡيَضۡرِبۡنَ بِخُمُرِهِنَّ عَلَىٰ جُيُوبِهِنَّۖ وَلَا يُبۡدِينَ زِينَتَهُنَّ إِلَّا لِبُعُولَتِهِنَّ أَوۡ ءَابَآئِهِنَّ أَوۡ ءَابَآءِ بُعُولَتِهِنَّ أَوۡ أَبۡنَآئِهِنَّ أَوۡ أَبۡنَآءِ بُعُولَتِهِنَّ أَوۡ إِخۡوَٰنِهِنَّ أَوۡ بَنِيٓ إِخۡوَٰنِهِنَّ أَوۡ بَنِيٓ أَخَوَٰتِهِنَّ أَوۡ نِسَآئِهِنَّ أَوۡ مَا مَلَكَتۡ أَيۡمَٰنُهُنَّ أَوِ ٱلتَّـٰبِعِينَ غَيۡرِ أُوْلِي ٱلۡإِرۡبَةِ مِنَ ٱلرِّجَالِ أَوِ ٱلطِّفۡلِ ٱلَّذِينَ لَمۡ يَظۡهَرُواْ عَلَىٰ عَوۡرَٰتِ ٱلنِّسَآءِۖ وَلَا يَضۡرِبۡنَ بِأَرۡجُلِهِنَّ لِيُعۡلَمَ مَا يُخۡفِينَ مِن زِينَتِهِنَّۚ وَتُوبُوٓاْ إِلَى ٱللَّهِ جَمِيعًا أَيُّهَ ٱلۡمُؤۡمِنُونَ لَعَلَّكُمۡ تُفۡلِحُونَ
ಸತ್ಯವಿಶ್ವಾಸಿ ಮಹಿಳೆಯರೊಂದಿಗೆ ತಮ್ಮ ದೃಷ್ಟಿಗಳನ್ನು ತಗ್ಗಿಸಲು ಮತ್ತು ತಮ್ಮ ಗುಹ್ಯಭಾಗಗಳನ್ನು ರಕ್ಷಿಸಲು ಹೇಳಿರಿ. ಅವರು ತಮ್ಮ ಸೌಂದರ್ಯದಿಂದ ಏನನ್ನೂ ಪ್ರದರ್ಶಿಸದಿರಲಿ—(ಅನಿವಾರ್ಯವಾಗಿ) ಪ್ರಕಟವಾಗುವ ಭಾಗಗಳ ಹೊರತು. ಅವರು ತಮ್ಮ ಎದೆಗಳ ಮೇಲೆ ಶಿರವಸ್ತ್ರಗಳನ್ನು ಹಾಕಿಕೊಳ್ಳಲಿ. ಅವರು ತಮ್ಮ ಸೌಂದರ್ಯವನ್ನು ಅವರ ಗಂಡಂದಿರು, ತಂದೆಯಂದಿರು, ಗಂಡನ ತಂದೆಯಂದಿರು, ಪುತ್ರರು, ಗಂಡನ ಪುತ್ರರು, ಸಹೋದರರು, ಸಹೋದರರ ಪುತ್ರರು, ಸಹೋದರಿಯರ ಪುತ್ರರು, ಮುಸ್ಲಿಮ್ ಮಹಿಳೆಯರು, ಅವರ ಅಧೀನದಲ್ಲಿರುವ ಗುಲಾಮರು, ಲೈಂಗಿಕಾಸಕ್ತಿಯಿಲ್ಲದ ಪುರುಷ ಸೇವಕರು, ಮಹಿಳೆಯರ ಖಾಸಗಿ ಭಾಗಗಳ ಬಗ್ಗೆ ಇನ್ನೂ ತಿಳಿದಿರದ ಮಕ್ಕಳು ಮುಂತಾದವರ ಹೊರತು ಬೇರೆ ಯಾರಿಗೂ ತೋರಿಸದಿರಲಿ. ಮರೆಯಾಗಿರುವ ತಮ್ಮ ಸೌಂದರ್ಯವು ಇತರರಿಗೆ ತಿಳಿಯುವಂತೆ ಮಾಡಲು ಅವರು ಕಾಲನ್ನು ನೆಲಕ್ಕೆ ಬಡಿದು ನಡೆಯದಿರಲಿ. ಓ ಸತ್ಯವಿಶ್ವಾಸಿಗಳೇ! ನೀವೆಲ್ಲರೂ ಅಲ್ಲಾಹನ ಬಳಿಗೆ ಪಶ್ಚಾತ್ತಾಪಪಟ್ಟು ಮರಳಿರಿ. ನೀವು ಯಶಸ್ವಿಯಾಗುವುದಕ್ಕಾಗಿ.

32 - An-Nur (The Light) - 032

وَأَنكِحُواْ ٱلۡأَيَٰمَىٰ مِنكُمۡ وَٱلصَّـٰلِحِينَ مِنۡ عِبَادِكُمۡ وَإِمَآئِكُمۡۚ إِن يَكُونُواْ فُقَرَآءَ يُغۡنِهِمُ ٱللَّهُ مِن فَضۡلِهِۦۗ وَٱللَّهُ وَٰسِعٌ عَلِيمٞ
ನಿಮ್ಮಲ್ಲಿ ಅವಿವಾಹಿತರಾಗಿರುವ ಪುರುಷರು ಮತ್ತು ಮಹಿಳೆಯರಿಗೆ ವಿವಾಹ ಮಾಡಿಸಿರಿ. ನಿಮ್ಮ ನೀತಿವಂತ ಗುಲಾಮರು ಮತ್ತು ಗುಲಾಮ ಸ್ತ್ರೀಯರಿಗೂ ವಿವಾಹ ಮಾಡಿಸಿರಿ. ಅವರು ಬಡವರಾಗಿದ್ದರೆ ಅಲ್ಲಾಹು ತನ್ನ ಔದಾರ್ಯದಿಂದ ಅವರಿಗೆ ಶ್ರೀಮಂತಿಕೆಯನ್ನು ನೀಡುವನು. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.

33 - An-Nur (The Light) - 033

وَلۡيَسۡتَعۡفِفِ ٱلَّذِينَ لَا يَجِدُونَ نِكَاحًا حَتَّىٰ يُغۡنِيَهُمُ ٱللَّهُ مِن فَضۡلِهِۦۗ وَٱلَّذِينَ يَبۡتَغُونَ ٱلۡكِتَٰبَ مِمَّا مَلَكَتۡ أَيۡمَٰنُكُمۡ فَكَاتِبُوهُمۡ إِنۡ عَلِمۡتُمۡ فِيهِمۡ خَيۡرٗاۖ وَءَاتُوهُم مِّن مَّالِ ٱللَّهِ ٱلَّذِيٓ ءَاتَىٰكُمۡۚ وَلَا تُكۡرِهُواْ فَتَيَٰتِكُمۡ عَلَى ٱلۡبِغَآءِ إِنۡ أَرَدۡنَ تَحَصُّنٗا لِّتَبۡتَغُواْ عَرَضَ ٱلۡحَيَوٰةِ ٱلدُّنۡيَاۚ وَمَن يُكۡرِههُّنَّ فَإِنَّ ٱللَّهَ مِنۢ بَعۡدِ إِكۡرَٰهِهِنَّ غَفُورٞ رَّحِيمٞ
ವಿವಾಹವಾಗುವ ಸಾಮರ್ಥ್ಯವಿಲ್ಲದವರು—ಅಲ್ಲಾಹು ಅವರಿಗೆ ತನ್ನ ಔದಾರ್ಯದಿಂದ ಶ್ರೀಮಂತಿಕೆಯನ್ನು ಒದಗಿಸುವ ತನಕ ತಮ್ಮ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲಿ. ನಿಮ್ಮ ಅಧೀನದಲ್ಲಿರುವ ಗುಲಾಮರಲ್ಲಿ ಯಾರಾದರೂ ನಿಮಗೆ ಏನಾದರೂ ನೀಡಿ ಸ್ವತಂತ್ರರಾಗಲು ಬಯಸಿದರೆ, ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಅವರನ್ನು ಸ್ವತಂತ್ರಗೊಳಿಸಿರಿ.[1] ಅಲ್ಲಾಹು ನಿಮಗೆ ನೀಡಿದ ಸಂಪತ್ತಿನಿಂದ ಅವರಿಗೂ ಸ್ವಲ್ಪ ನೀಡಿರಿ. ನಿಮ್ಮ ಗುಲಾಮ ಸ್ತ್ರೀಯರು ಪರಿಶುದ್ಧರಾಗಿ ಬದುಕಲು ಬಯಸಿದರೆ, ಐಹಿಕ ಲಾಭಗಳನ್ನು ದೃಷ್ಟಿಯಲ್ಲಿಟ್ಟು ಅವರನ್ನು ಬಲವಂತವಾಗಿ ವ್ಯಭಿಚಾರಕ್ಕೆ ತಳ್ಳಬೇಡಿ.[2] ಯಾರಾದರೂ ಅವರನ್ನು ಬಲವಂತಪಡಿಸಿದರೆ, ಆ ಗುಲಾಮ ಸ್ತ್ರೀಯರು ಬಲವಂತದಿಂದ ತಪ್ಪೆಸಗಿದ ಬಳಿಕವೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ನಾನು ಇಂತಿಷ್ಟು ಮೊತ್ತ ಹಣವನ್ನು ಸಂಗ್ರಹಿಸಿಕೊಟ್ಟರೆ ನೀವು ನನ್ನನ್ನು ಸ್ವತಂತ್ರಗೊಳಿಸಬೇಕೆಂದು ಗುಲಾಮರು ತಮ್ಮ ಯಜಮಾನರೊಡನೆ ವಿಮೋಚನಾ ಒಪ್ಪಂದ ಮಾಡುತ್ತಿದ್ದರು. ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಎಂಬ ವಚನದ ಅರ್ಥವೇನೆಂದರೆ, ಆ ಗುಲಾಮರಲ್ಲಿ ಸತ್ಯವಂತಿಕೆ ಮತ್ತು ಪ್ರಾಮಾಣಿಕತೆಯಿದೆಯೆಂದು ನಿಮಗೆ ತಿಳಿದು ಬಂದರೆ, ಅಥವಾ ಅವರು ಯಾವುದಾದರೂ ವೃತ್ತಿಯಲ್ಲಿ ತರಬೇತಿ ಪಡೆದಿದ್ದು ಆ ವೃತ್ತಿ ಮಾಡಿ ನಿಮ್ಮ ಹಣವನ್ನು ಪಾವತಿಸುವರೆಂಬ ಭರವಸೆ ನಿಮಗಿದ್ದರೆ ಅವರನ್ನು ಸ್ವತಂತ್ರಗೊಳಿಸಿರಿ ಎಂದರ್ಥ. [2] ಇಸ್ಲಾಮೀ ಪೂರ್ವ ಕಾಲದಲ್ಲಿ (ಅಜ್ಞಾನಕಾಲದಲ್ಲಿ) ಯಜಮಾನರು ತಮ್ಮ ಗುಲಾಮ ಸ್ತ್ರೀಯರನ್ನು ವೇಶ್ಯಾವಾಟಿಕೆಗೆ ತಳ್ಳಿ ಆದಾಯ ಗಳಿಸುತ್ತಿದ್ದರು. ಮುಸಲ್ಮಾನರು ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರಿಂದ ಇಂತಹ ಕೆಲಸಗಳನ್ನು ಮಾಡಿಸಬಾರದೆಂದು ಇಲ್ಲಿ ಆದೇಶ ನೀಡಲಾಗಿದೆ.

34 - An-Nur (The Light) - 034

وَلَقَدۡ أَنزَلۡنَآ إِلَيۡكُمۡ ءَايَٰتٖ مُّبَيِّنَٰتٖ وَمَثَلٗا مِّنَ ٱلَّذِينَ خَلَوۡاْ مِن قَبۡلِكُمۡ وَمَوۡعِظَةٗ لِّلۡمُتَّقِينَ
ನಿಶ್ಚಯವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ನಿಮಗಿಂತ ಮೊದಲು ಬದುಕಿದ್ದ ಜನರ ಸಮಾಚಾರಗಳನ್ನು ಮತ್ತು ದೇವಭಯವುಳ್ಳವರಿಗೆ ಉಪದೇಶವನ್ನು (ಅವತೀರ್ಣಗೊಳಿಸಿದ್ದೇವೆ).

35 - An-Nur (The Light) - 035

۞ٱللَّهُ نُورُ ٱلسَّمَٰوَٰتِ وَٱلۡأَرۡضِۚ مَثَلُ نُورِهِۦ كَمِشۡكَوٰةٖ فِيهَا مِصۡبَاحٌۖ ٱلۡمِصۡبَاحُ فِي زُجَاجَةٍۖ ٱلزُّجَاجَةُ كَأَنَّهَا كَوۡكَبٞ دُرِّيّٞ يُوقَدُ مِن شَجَرَةٖ مُّبَٰرَكَةٖ زَيۡتُونَةٖ لَّا شَرۡقِيَّةٖ وَلَا غَرۡبِيَّةٖ يَكَادُ زَيۡتُهَا يُضِيٓءُ وَلَوۡ لَمۡ تَمۡسَسۡهُ نَارٞۚ نُّورٌ عَلَىٰ نُورٖۚ يَهۡدِي ٱللَّهُ لِنُورِهِۦ مَن يَشَآءُۚ وَيَضۡرِبُ ٱللَّهُ ٱلۡأَمۡثَٰلَ لِلنَّاسِۗ وَٱللَّهُ بِكُلِّ شَيۡءٍ عَلِيمٞ
ಅಲ್ಲಾಹು ಭೂಮ್ಯಾಕಾಶಗಳ ಬೆಳಕಾಗಿದ್ದಾನೆ. ಅವನ ಬೆಳಕಿನ ಉದಾಹರಣೆಯು (ಗೋಡೆಯಲ್ಲಿ ದೀಪವನ್ನಿಡಲು ನಿರ್ಮಿಸಲಾದ) ಒಂದು ಮಾಡದಂತೆ. ಅದರಲ್ಲಿ ಒಂದು ದೀಪವಿದೆ. ದೀಪವು ಗಾಜಿನ ಆವರಣದ ಒಳಗಿದೆ. ಆ ಗಾಜು ಬೆಳ್ಳಗೆ ಹೊಳೆಯುವ ಒಂದು ನಕ್ಷತ್ರವೋ ಎಂಬಂತಿದೆ. ಆ ದೀಪವು ಸಮೃದ್ಧವಾದ ಓಲಿವ್ ಮರದ ಎಣ್ಣೆಯಿಂದ ಉರಿಯುತ್ತಿದೆ. ಆ ಮರವು ಪೂರ್ವಭಾಗದ್ದೋ ಪಶ್ಚಿಮ ಭಾಗದ್ದೋ ಅಲ್ಲ. ಬೆಂಕಿ ಆ ಎಣ್ಣೆಯನ್ನು ಸ್ಪರ್ಶಿಸದಿದ್ದರೂ ಸಹ ಅದು (ಎಣ್ಣೆ) ಹೆಚ್ಚು-ಕಮ್ಮಿ ಹೊಳೆಯುತ್ತಲೇ ಇದೆ. ಬೆಳಕಿನ ಮೇಲೆ ಬೆಳಕು. ಅಲ್ಲಾಹು ಅವನು ಬಯಸುವವರಿಗೆ ತನ್ನ ಬೆಳಕಿನ ಕಡೆಗೆ ದಾರಿ ತೋರಿಸುತ್ತಾನೆ. ಜನರು (ಅರ್ಥಮಾಡಿಕೊಳ್ಳುವುದಕ್ಕಾಗಿ) ಅಲ್ಲಾಹು ಉದಾಹರಣೆಗಳನ್ನು ನೀಡುತ್ತಿದ್ದಾನೆ. ಅಲ್ಲಾಹು ಎಲ್ಲಾ ವಿಷಯಗಳ ಬಗ್ಗೆಯೂ ತಿಳಿದವನಾಗಿದ್ದಾನೆ.

36 - An-Nur (The Light) - 036

فِي بُيُوتٍ أَذِنَ ٱللَّهُ أَن تُرۡفَعَ وَيُذۡكَرَ فِيهَا ٱسۡمُهُۥ يُسَبِّحُ لَهُۥ فِيهَا بِٱلۡغُدُوِّ وَٱلۡأٓصَالِ
ಅಲ್ಲಾಹು ಎತ್ತರಿಸಲು ಮತ್ತು ತನ್ನ ಹೆಸರನ್ನು ಸ್ಮರಿಸಲು ಆದೇಶಿಸಿದ ಮಸೀದಿಗಳಲ್ಲಿ (ಆ ಬೆಳಕುಗಳಿವೆ). ಅಲ್ಲಿ ಮುಂಜಾನೆ ಮತ್ತು ಸಂಜೆ ಅವನ ಮಹತ್ವವನ್ನು ಕೊಂಡಾಡುತ್ತಾರೆ.

37 - An-Nur (The Light) - 037

رِجَالٞ لَّا تُلۡهِيهِمۡ تِجَٰرَةٞ وَلَا بَيۡعٌ عَن ذِكۡرِ ٱللَّهِ وَإِقَامِ ٱلصَّلَوٰةِ وَإِيتَآءِ ٱلزَّكَوٰةِ يَخَافُونَ يَوۡمٗا تَتَقَلَّبُ فِيهِ ٱلۡقُلُوبُ وَٱلۡأَبۡصَٰرُ
ಪುರುಷರು—ಅವರನ್ನು ವ್ಯಾಪಾರ ಮತ್ತು ಕ್ರಯ-ವಿಕ್ರಯಗಳು ಅಲ್ಲಾಹನನ್ನು ಸ್ಮರಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು ಮುಂತಾದವುಗಳ ಕಡೆಗೆ ಗಮನ ಹರಿಸದಂತೆ ಮಾಡುವುದಿಲ್ಲ. ಹೃದಯಗಳು ಮತ್ತು ಕಣ್ಣುಗಳು ಹೊರಳಾಡುವ ಒಂದು ದಿನವನ್ನು ಅವರು ಭಯಪಡುತ್ತಾರೆ.

38 - An-Nur (The Light) - 038

لِيَجۡزِيَهُمُ ٱللَّهُ أَحۡسَنَ مَا عَمِلُواْ وَيَزِيدَهُم مِّن فَضۡلِهِۦۗ وَٱللَّهُ يَرۡزُقُ مَن يَشَآءُ بِغَيۡرِ حِسَابٖ
ಅಲ್ಲಾಹು ಅವರ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲು ಮತ್ತು ತನ್ನ ಔದಾರ್ಯದಿಂದ ಅವರಿಗೆ ಹೆಚ್ಚಿಗೆಯನ್ನೂ ನೀಡಲು. ಅಲ್ಲಾಹು ಅವನು ಬಯಸುವವರಿಗೆ ಲೆಕ್ಕವಿಲ್ಲದೆ ನೀಡುತ್ತಾನೆ.

39 - An-Nur (The Light) - 039

وَٱلَّذِينَ كَفَرُوٓاْ أَعۡمَٰلُهُمۡ كَسَرَابِۭ بِقِيعَةٖ يَحۡسَبُهُ ٱلظَّمۡـَٔانُ مَآءً حَتَّىٰٓ إِذَا جَآءَهُۥ لَمۡ يَجِدۡهُ شَيۡـٔٗا وَوَجَدَ ٱللَّهَ عِندَهُۥ فَوَفَّىٰهُ حِسَابَهُۥۗ وَٱللَّهُ سَرِيعُ ٱلۡحِسَابِ
ಸತ್ಯನಿಷೇಧಿಗಳ ಕರ್ಮಗಳು ಮರುಭೂಮಿಯ ಮರೀಚಿಕೆಯಂತೆ. ದಾಹದಿಂದ ಬಳಲುವವನು ಅದನ್ನು ನೀರೆಂದು ಭಾವಿಸುತ್ತಾನೆ. ಎಲ್ಲಿಯವರೆಗೆಂದರೆ, ಅವನು ಅದರ ಬಳಿಗೆ ಬಂದಾಗ ಅಲ್ಲಿ ಅವನಿಗೆ ಏನೂ ಕಾಣಿಸುವುದಿಲ್ಲ. ಆದರೆ ಅವನು ತನ್ನ ಬಳಿ ಅಲ್ಲಾಹನನ್ನು ಕಾಣುತ್ತಾನೆ ಮತ್ತು ಅಲ್ಲಾಹು ಅವನ ಲೆಕ್ಕವನ್ನು ಪೂರ್ಣವಾಗಿ ಪಾವತಿಸುತ್ತಾನೆ. ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುವವನಾಗಿದ್ದಾನೆ.

40 - An-Nur (The Light) - 040

أَوۡ كَظُلُمَٰتٖ فِي بَحۡرٖ لُّجِّيّٖ يَغۡشَىٰهُ مَوۡجٞ مِّن فَوۡقِهِۦ مَوۡجٞ مِّن فَوۡقِهِۦ سَحَابٞۚ ظُلُمَٰتُۢ بَعۡضُهَا فَوۡقَ بَعۡضٍ إِذَآ أَخۡرَجَ يَدَهُۥ لَمۡ يَكَدۡ يَرَىٰهَاۗ وَمَن لَّمۡ يَجۡعَلِ ٱللَّهُ لَهُۥ نُورٗا فَمَا لَهُۥ مِن نُّورٍ
ಅಥವಾ ಅವರ ಕರ್ಮಗಳ ಉದಾಹರಣೆಯು ಆಳ ಸಮುದ್ರದ ತಳದಲ್ಲಿರುವ ಕತ್ತಲೆಯಂತೆ. ಅದನ್ನು ಮೇಲ್ಭಾಗದಲ್ಲಿ ಅಲೆಗಳು ಮುಚ್ಚಿಕೊಂಡಿವೆ. ಅದರ ಮೇಲೆಯೂ ಅಲೆಗಳಿವೆ. ಅದರ ಮೇಲೆ ಕಾರ್ಮೋಡಗಳಿವೆ. ಒಂದರ ಮೇಲೆ ಒಂದರಂತೆ ಅನೇಕ ಕತ್ತಲೆಗಳು. ಅವನು ತನ್ನ ಕೈಯನ್ನು ಹೊರ ಚಾಚಿದರೆ ಹೆಚ್ಚು-ಕಮ್ಮಿ ಅದನ್ನು ನೋಡಲು ಅವನಿಗೆ ಸಾಧ್ಯವಾಗುವುದೇ ಇಲ್ಲ. ಅಲ್ಲಾಹು ಯಾರಿಗೆ ಬೆಳಕನ್ನು ನೀಡಲಿಲ್ಲವೋ ಅವನಿಗೆ ಯಾವುದೇ ಬೆಳಕಿಲ್ಲ.

41 - An-Nur (The Light) - 041

أَلَمۡ تَرَ أَنَّ ٱللَّهَ يُسَبِّحُ لَهُۥ مَن فِي ٱلسَّمَٰوَٰتِ وَٱلۡأَرۡضِ وَٱلطَّيۡرُ صَـٰٓفَّـٰتٖۖ كُلّٞ قَدۡ عَلِمَ صَلَاتَهُۥ وَتَسۡبِيحَهُۥۗ وَٱللَّهُ عَلِيمُۢ بِمَا يَفۡعَلُونَ
ಭೂಮ್ಯಾಕಾಶಗಳಲ್ಲಿರುವ ಎಲ್ಲಾ ಜೀವಿಗಳು ಮತ್ತು ರೆಕ್ಕೆಯನ್ನು ಹರಡಿಕೊಂಡು ಹಾರಾಡುವ ಎಲ್ಲಾ ಹಕ್ಕಿಗಳು ಅಲ್ಲಾಹನ ಕೀರ್ತನೆ ಮಾಡುವುದನ್ನು ನೀವು ನೋಡಿಲ್ಲವೇ? ಪ್ರತಿಯೊಬ್ಬರೂ ಅವರ ಪ್ರಾರ್ಥನೆ ಮತ್ತು ಕೀರ್ತನೆಯನ್ನು ತಿಳಿದಿದ್ದಾರೆ. ಅವರು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ.

42 - An-Nur (The Light) - 042

وَلِلَّهِ مُلۡكُ ٱلسَّمَٰوَٰتِ وَٱلۡأَرۡضِۖ وَإِلَى ٱللَّهِ ٱلۡمَصِيرُ
ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಎಲ್ಲವೂ ಅವನ ಕಡೆಗೇ ಮರಳುತ್ತವೆ.

43 - An-Nur (The Light) - 043

أَلَمۡ تَرَ أَنَّ ٱللَّهَ يُزۡجِي سَحَابٗا ثُمَّ يُؤَلِّفُ بَيۡنَهُۥ ثُمَّ يَجۡعَلُهُۥ رُكَامٗا فَتَرَى ٱلۡوَدۡقَ يَخۡرُجُ مِنۡ خِلَٰلِهِۦ وَيُنَزِّلُ مِنَ ٱلسَّمَآءِ مِن جِبَالٖ فِيهَا مِنۢ بَرَدٖ فَيُصِيبُ بِهِۦ مَن يَشَآءُ وَيَصۡرِفُهُۥ عَن مَّن يَشَآءُۖ يَكَادُ سَنَا بَرۡقِهِۦ يَذۡهَبُ بِٱلۡأَبۡصَٰرِ
ಅಲ್ಲಾಹು ಮೋಡಗಳನ್ನು ಚಲಿಸುವಂತೆ ಮಾಡುವುದನ್ನು ನೀವು ನೋಡಿಲ್ಲವೇ? ನಂತರ ಅವನು ಅವುಗಳನ್ನು ಒಟ್ಟು ಸೇರಿಸುತ್ತಾನೆ. ನಂತರ ಅವುಗಳನ್ನು ಪದರ ಪದರವಾಗಿ ರಾಶಿ ಮಾಡುತ್ತಾನೆ. ಆಗ ಅದರ ನಡುವಿನಿಂದ ಮಳೆ ನೀರು ಹೊರಬರುವುದನ್ನು ನೀವು ನೋಡುತ್ತೀರಿ. ಅವನು ಆಕಾಶದಿಂದ—ಅಲ್ಲಿರುವ ಬೆಟ್ಟಗಳಂತಹ ಮೋಡಗಳ ರಾಶಿಗಳಿಂದ—ಆಲಿಕಲ್ಲುಗಳನ್ನು ಬೀಳಿಸುತ್ತಾನೆ. ನಂತರ ಅವನು ಇಚ್ಛಿಸುವವರಿಗೆ ಅದು ತಗಲುವಂತೆ ಮಾಡುತ್ತಾನೆ ಮತ್ತು ಅವನು ಇಚ್ಛಿಸುವವರಿಂದ ಅದನ್ನು ದೂರ ಸರಿಸುತ್ತಾನೆ. ಅದರ ಮಿಂಚಿನ ಹೊಳಪು ಇನ್ನೇನು ದೃಷ್ಟಿಗಳನ್ನೇ ಕಿತ್ತು ಬಿಡುವಂತಿದೆ.

44 - An-Nur (The Light) - 044

يُقَلِّبُ ٱللَّهُ ٱلَّيۡلَ وَٱلنَّهَارَۚ إِنَّ فِي ذَٰلِكَ لَعِبۡرَةٗ لِّأُوْلِي ٱلۡأَبۡصَٰرِ
ಅಲ್ಲಾಹು ರಾತ್ರಿ-ಹಗಲುಗಳನ್ನು ಒಂದರ ನಂತರ ಒಂದರಂತೆ ಬದಲಾಯಿಸುತ್ತಾನೆ. ನಿಶ್ಚಯವಾಗಿಯೂ ದೃಷ್ಟಿಯುಳ್ಳವರಿಗೆ ಅದರಲ್ಲಿ ನೀತಿಪಾಠವಿದೆ.

45 - An-Nur (The Light) - 045

وَٱللَّهُ خَلَقَ كُلَّ دَآبَّةٖ مِّن مَّآءٖۖ فَمِنۡهُم مَّن يَمۡشِي عَلَىٰ بَطۡنِهِۦ وَمِنۡهُم مَّن يَمۡشِي عَلَىٰ رِجۡلَيۡنِ وَمِنۡهُم مَّن يَمۡشِي عَلَىٰٓ أَرۡبَعٖۚ يَخۡلُقُ ٱللَّهُ مَا يَشَآءُۚ إِنَّ ٱللَّهَ عَلَىٰ كُلِّ شَيۡءٖ قَدِيرٞ
ಅಲ್ಲಾಹು ಎಲ್ಲಾ ಜೀವರಾಶಿಗಳನ್ನು ನೀರಿನಿಂದ ಸೃಷ್ಟಿಸಿದನು. ಕೆಲವು ಅವುಗಳ ಹೊಟ್ಟೆಯ ಮೇಲೆ ತೆವಳುತ್ತವೆ. ಕೆಲವು ಎರಡು ಕಾಲುಗಳ ಮೇಲೆ ಚಲಿಸುತ್ತವೆ. ಕೆಲವು ನಾಲ್ಕು ಕಾಲುಗಳಲ್ಲಿ ಚಲಿಸುತ್ತವೆ. ಅಲ್ಲಾಹು ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.

46 - An-Nur (The Light) - 046

لَّقَدۡ أَنزَلۡنَآ ءَايَٰتٖ مُّبَيِّنَٰتٖۚ وَٱللَّهُ يَهۡدِي مَن يَشَآءُ إِلَىٰ صِرَٰطٖ مُّسۡتَقِيمٖ
ನಾವು ಸ್ಪಷ್ಟವಾದ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ಅಲ್ಲಾಹು ಅವನು ಇಚ್ಛಿಸುವವರಿಗೆ ನೇರ ಮಾರ್ಗವನ್ನು ತೋರಿಸುತ್ತಾನೆ.

47 - An-Nur (The Light) - 047

وَيَقُولُونَ ءَامَنَّا بِٱللَّهِ وَبِٱلرَّسُولِ وَأَطَعۡنَا ثُمَّ يَتَوَلَّىٰ فَرِيقٞ مِّنۡهُم مِّنۢ بَعۡدِ ذَٰلِكَۚ وَمَآ أُوْلَـٰٓئِكَ بِٱلۡمُؤۡمِنِينَ
ಅವರು (ಕಪಟವಿಶ್ವಾಸಿಗಳು) ಹೇಳುತ್ತಾರೆ: “ನಾವು ಅಲ್ಲಾಹನಲ್ಲಿ ಮತ್ತು ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟಿದ್ದೇವೆ ಮತ್ತು ಅವರನ್ನು ಅನುಸರಿಸುತ್ತೇವೆ.” ನಂತರ ಅದರ ಬಳಿಕವೂ ಅವರಲ್ಲಿ ಒಂದು ಗುಂಪು ವಿಮುಖರಾಗಿ ಹೋಗುತ್ತಾರೆ. ಅವರು ಸತ್ಯವಿಶ್ವಾಸಿಗಳೇ ಅಲ್ಲ.

48 - An-Nur (The Light) - 048

وَإِذَا دُعُوٓاْ إِلَى ٱللَّهِ وَرَسُولِهِۦ لِيَحۡكُمَ بَيۡنَهُمۡ إِذَا فَرِيقٞ مِّنۡهُم مُّعۡرِضُونَ
ಅವರ ಮಧ್ಯೆ ತೀರ್ಪು ನೀಡಲು ಅವರನ್ನು ಅಲ್ಲಾಹು ಮತ್ತು ಸಂದೇಶವಾಹಕರ ಕಡೆಗೆ ಆಮಂತ್ರಿಸಲಾದರೆ, ಅವರಲ್ಲಿ ಒಂದು ಗುಂಪು ಬೆನ್ನು ತೋರಿಸಿ ನಡೆಯುತ್ತಾರೆ.

49 - An-Nur (The Light) - 049

وَإِن يَكُن لَّهُمُ ٱلۡحَقُّ يَأۡتُوٓاْ إِلَيۡهِ مُذۡعِنِينَ
ಸತ್ಯವು ಅವರ ಕಡೆಯಿದ್ದರೆ ಅವರು ಪ್ರವಾದಿಯ ಬಳಿಗೆ ವಿನಮ್ರತೆಯಿಂದ ಬರುತ್ತಾರೆ.

50 - An-Nur (The Light) - 050

أَفِي قُلُوبِهِم مَّرَضٌ أَمِ ٱرۡتَابُوٓاْ أَمۡ يَخَافُونَ أَن يَحِيفَ ٱللَّهُ عَلَيۡهِمۡ وَرَسُولُهُۥۚ بَلۡ أُوْلَـٰٓئِكَ هُمُ ٱلظَّـٰلِمُونَ
ಅವರ ಹೃದಯಗಳಲ್ಲಿ ರೋಗವಿದೆಯೇ? ಅಥವಾ ಅವರಿಗೆ ಸಂಶಯವಿದೆಯೇ? ಅಥವಾ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವರಿಗೆ ಅನ್ಯಾಯ ಮಾಡುವರೆಂದು ಅವರಿಗೆ ಭಯವಿದೆಯೇ? ಅಲ್ಲ. ವಾಸ್ತವವಾಗಿ ಅವರೇ ಅಕ್ರಮಿಗಳು.

51 - An-Nur (The Light) - 051

إِنَّمَا كَانَ قَوۡلَ ٱلۡمُؤۡمِنِينَ إِذَا دُعُوٓاْ إِلَى ٱللَّهِ وَرَسُولِهِۦ لِيَحۡكُمَ بَيۡنَهُمۡ أَن يَقُولُواْ سَمِعۡنَا وَأَطَعۡنَاۚ وَأُوْلَـٰٓئِكَ هُمُ ٱلۡمُفۡلِحُونَ
ಸತ್ಯವಿಶ್ವಾಸಿಗಳನ್ನು—ಅವರ ನಡುವೆ ತೀರ್ಪು ನೀಡಲು—ಅಲ್ಲಾಹು ಮತ್ತು ಸಂದೇಶವಾಹಕರ ಕಡೆಗೆ ಆಮಂತ್ರಿಸಲಾದರೆ, “ನಾವು ಕೇಳಿದ್ದೇವೆ ಮತ್ತು ಅನುಸರಿಸಿದ್ದೇವೆ” ಎಂದು ಅವರು ಹೇಳುತ್ತಾರೆ. ಅವರೇ ಯಶಸ್ವಿಯಾದವರು.

52 - An-Nur (The Light) - 052

وَمَن يُطِعِ ٱللَّهَ وَرَسُولَهُۥ وَيَخۡشَ ٱللَّهَ وَيَتَّقۡهِ فَأُوْلَـٰٓئِكَ هُمُ ٱلۡفَآئِزُونَ
ಅಲ್ಲಾಹನನ್ನು ಮತ್ತು ಸಂದೇಶವಾಹಕರನ್ನು ಅನುಸರಿಸುವವರು, ಅಲ್ಲಾಹನನ್ನು ಭಯಪಡುವವರು ಮತ್ತು ಅಲ್ಲಾಹನ ಶಿಕ್ಷೆಯನ್ನು ಹೆದರುವವರು ಯಾರೋ ಅವರೇ ಜಯಗಳಿಸಿದವರು.

53 - An-Nur (The Light) - 053

۞وَأَقۡسَمُواْ بِٱللَّهِ جَهۡدَ أَيۡمَٰنِهِمۡ لَئِنۡ أَمَرۡتَهُمۡ لَيَخۡرُجُنَّۖ قُل لَّا تُقۡسِمُواْۖ طَاعَةٞ مَّعۡرُوفَةٌۚ إِنَّ ٱللَّهَ خَبِيرُۢ بِمَا تَعۡمَلُونَ
ನೀವೇನಾದರೂ ಆಜ್ಞಾಪಿಸಿದರೆ ಅವರು ಖಂಡಿತ ಹೊರಟು ಬರುತ್ತಾರೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡುತ್ತಾ ಹೇಳುತ್ತಾರೆ. ಹೇಳಿರಿ: “ನೀವು ಆಣೆ ಮಾಡಬೇಡಿ. ನಿಮ್ಮ ಆಜ್ಞಾಪಾಲನೆ ಹೇಗಿದೆಯೆಂದು ಎಲ್ಲರಿಗೂ ತಿಳಿದಿದೆ. ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿದಿದ್ದಾನೆ.”

54 - An-Nur (The Light) - 054

قُلۡ أَطِيعُواْ ٱللَّهَ وَأَطِيعُواْ ٱلرَّسُولَۖ فَإِن تَوَلَّوۡاْ فَإِنَّمَا عَلَيۡهِ مَا حُمِّلَ وَعَلَيۡكُم مَّا حُمِّلۡتُمۡۖ وَإِن تُطِيعُوهُ تَهۡتَدُواْۚ وَمَا عَلَى ٱلرَّسُولِ إِلَّا ٱلۡبَلَٰغُ ٱلۡمُبِينُ
ಹೇಳಿರಿ: “ನೀವು ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವೇನಾದರೂ ಮುಖ ತಿರುಗಿಸಿ ನಡೆದರೆ, ಅವರ (ಪ್ರವಾದಿಯ) ಹೊಣೆಯು ಅವರಿಗೆ ವಹಿಸಿದ ವಿಷಯಗಳು ಮಾತ್ರ. ನಿಮ್ಮ ಹೊಣೆಯು ನಿಮಗೆ ವಹಿಸಿದ ವಿಷಯಗಳು ಮಾತ್ರ. ನೀವು ಅವರ ಆಜ್ಞಾಪಾಲನೆ ಮಾಡಿದರೆ ಸನ್ಮಾರ್ಗವನ್ನು ಪಡೆಯುತ್ತೀರಿ. ಸಂದೇಶವಾಹಕರ ಹೊಣೆಯು (ಸಂದೇಶವನ್ನು) ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರ.”

55 - An-Nur (The Light) - 055

وَعَدَ ٱللَّهُ ٱلَّذِينَ ءَامَنُواْ مِنكُمۡ وَعَمِلُواْ ٱلصَّـٰلِحَٰتِ لَيَسۡتَخۡلِفَنَّهُمۡ فِي ٱلۡأَرۡضِ كَمَا ٱسۡتَخۡلَفَ ٱلَّذِينَ مِن قَبۡلِهِمۡ وَلَيُمَكِّنَنَّ لَهُمۡ دِينَهُمُ ٱلَّذِي ٱرۡتَضَىٰ لَهُمۡ وَلَيُبَدِّلَنَّهُم مِّنۢ بَعۡدِ خَوۡفِهِمۡ أَمۡنٗاۚ يَعۡبُدُونَنِي لَا يُشۡرِكُونَ بِي شَيۡـٔٗاۚ وَمَن كَفَرَ بَعۡدَ ذَٰلِكَ فَأُوْلَـٰٓئِكَ هُمُ ٱلۡفَٰسِقُونَ
ಅಲ್ಲಾಹು ನಿಮ್ಮಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರಿಗೆ, ಅವರಿಗಿಂತ ಮೊದಲಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯ ನೀಡಿದಂತೆ ಅವರಿಗೂ ಖಂಡಿತ ಪ್ರಾತಿನಿಧ್ಯವನ್ನು ನೀಡುವನು, ಅವನು ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮವನ್ನು (ಭೂಮಿಯಲ್ಲಿ) ಪ್ರಬಲವಾಗಿ ಸ್ಥಾಪಿಸುವನು ಮತ್ತು ಅವರು ಅನುಭವಿಸುತ್ತಿರುವ ಭಯವನ್ನು ನಿರ್ಭಯವಾಗಿ ಬದಲಾಯಿಸುವನೆಂದು ವಾಗ್ದಾನ ಮಾಡಿದ್ದಾನೆ. ಅವರು ನನ್ನನ್ನು ಮಾತ್ರ ಆರಾಧಿಸುತ್ತಾರೆ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ. ಯಾರು ಅದರ ಬಳಿಕವೂ ಸತ್ಯವನ್ನು ನಿಷೇಧಿಸುತ್ತಾರೋ ಅವರೇ ನಿಜವಾದ ದುಷ್ಕರ್ಮಿಗಳು.

56 - An-Nur (The Light) - 056

وَأَقِيمُواْ ٱلصَّلَوٰةَ وَءَاتُواْ ٱلزَّكَوٰةَ وَأَطِيعُواْ ٱلرَّسُولَ لَعَلَّكُمۡ تُرۡحَمُونَ
ನೀವು ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ನೀಡಿರಿ ಮತ್ತು ಸಂದೇಶವಾಹಕರ ಆಜ್ಞೆಗಳನ್ನು ಪಾಲಿಸಿರಿ. ನಿಮ್ಮ ಮೇಲೆ ದಯೆ ತೋರಲಾಗುವುದಕ್ಕಾಗಿ.

57 - An-Nur (The Light) - 057

لَا تَحۡسَبَنَّ ٱلَّذِينَ كَفَرُواْ مُعۡجِزِينَ فِي ٱلۡأَرۡضِۚ وَمَأۡوَىٰهُمُ ٱلنَّارُۖ وَلَبِئۡسَ ٱلۡمَصِيرُ
ಸತ್ಯನಿಷೇಧಿಗಳು ಭೂಮಿಯಲ್ಲಿ ಅಲ್ಲಾಹನನ್ನು ಸೋಲಿಸುವರೆಂದು ನೀವು ಎಂದಿಗೂ ಭಾವಿಸಬೇಡಿ. ಅವರ ವಾಸಸ್ಥಳವು ನರಕವಾಗಿದೆ. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.

58 - An-Nur (The Light) - 058

يَـٰٓأَيُّهَا ٱلَّذِينَ ءَامَنُواْ لِيَسۡتَـٔۡذِنكُمُ ٱلَّذِينَ مَلَكَتۡ أَيۡمَٰنُكُمۡ وَٱلَّذِينَ لَمۡ يَبۡلُغُواْ ٱلۡحُلُمَ مِنكُمۡ ثَلَٰثَ مَرَّـٰتٖۚ مِّن قَبۡلِ صَلَوٰةِ ٱلۡفَجۡرِ وَحِينَ تَضَعُونَ ثِيَابَكُم مِّنَ ٱلظَّهِيرَةِ وَمِنۢ بَعۡدِ صَلَوٰةِ ٱلۡعِشَآءِۚ ثَلَٰثُ عَوۡرَٰتٖ لَّكُمۡۚ لَيۡسَ عَلَيۡكُمۡ وَلَا عَلَيۡهِمۡ جُنَاحُۢ بَعۡدَهُنَّۚ طَوَّـٰفُونَ عَلَيۡكُم بَعۡضُكُمۡ عَلَىٰ بَعۡضٖۚ كَذَٰلِكَ يُبَيِّنُ ٱللَّهُ لَكُمُ ٱلۡأٓيَٰتِۗ وَٱللَّهُ عَلِيمٌ حَكِيمٞ
ಓ ಸತ್ಯವಿಶ್ವಾಸಿಗಳೇ! ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ನಿಮ್ಮಲ್ಲಿ ಪ್ರೌಢಾವಸ್ಥೆಗೆ ತಲುಪದವರು ಮೂರು ವೇಳೆಗಳಲ್ಲಿ ನಿಮ್ಮೊಂದಿಗೆ ಪ್ರವೇಶಾನುಮತಿಯನ್ನು ಕೇಳಲಿ. ಫಜ್ರ್ ನಮಾಝ್‍ಗೆ ಮೊದಲು, ಮಧ್ಯಾಹ್ನದ ವೇಳೆ (ವಿಶ್ರಾಂತಿಗಾಗಿ) ನೀವು ನಿಮ್ಮ ಉಡುಪುಗಳನ್ನು ಕಳಚಿಡುವಾಗ ಮತ್ತು ಇಶಾ ನಮಾಝ್‍ನ ಬಳಿಕ. ಇವು ನಿಮ್ಮ ಮೂರು ಖಾಸಗಿ ಸಮಯಗಳಾಗಿವೆ. ಇವುಗಳ ಹೊರತಾದ ಸಮಯಗಳಲ್ಲಿ ನಿಮಗೆ ಅಥವಾ ಅವರಿಗೆ ದೋಷವಿಲ್ಲ. ನೀವು ಪರಸ್ಪರ ಒಬ್ಬರ ಬಳಿಗೆ ಇನ್ನೊಬ್ಬರು ಬರುತ್ತಲೂ ಹೋಗುತ್ತಲೂ ಇರುವವರಾಗಿದ್ದೀರಿ. ಈ ರೀತಿ ಅಲ್ಲಾಹು ನಿಮಗೆ ವಚನಗಳನ್ನು ವಿವರಿಸಿಕೊಡುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

59 - An-Nur (The Light) - 059

وَإِذَا بَلَغَ ٱلۡأَطۡفَٰلُ مِنكُمُ ٱلۡحُلُمَ فَلۡيَسۡتَـٔۡذِنُواْ كَمَا ٱسۡتَـٔۡذَنَ ٱلَّذِينَ مِن قَبۡلِهِمۡۚ كَذَٰلِكَ يُبَيِّنُ ٱللَّهُ لَكُمۡ ءَايَٰتِهِۦۗ وَٱللَّهُ عَلِيمٌ حَكِيمٞ
ನಿಮ್ಮ ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದರೆ ಅವರಿಗಿಂತ ಮೊದಲಿನವರು ಪ್ರವೇಶಾನುಮತಿ ಕೇಳುವಂತೆ ಅವರೂ ಪ್ರವೇಶಾನುಮತಿ ಕೇಳಲಿ. ಈ ರೀತಿ ಅಲ್ಲಾಹು ನಿಮಗೆ ಅವನ ವಚನಗಳನ್ನು ವಿವರಿಸಿಕೊಡುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

60 - An-Nur (The Light) - 060

وَٱلۡقَوَٰعِدُ مِنَ ٱلنِّسَآءِ ٱلَّـٰتِي لَا يَرۡجُونَ نِكَاحٗا فَلَيۡسَ عَلَيۡهِنَّ جُنَاحٌ أَن يَضَعۡنَ ثِيَابَهُنَّ غَيۡرَ مُتَبَرِّجَٰتِۭ بِزِينَةٖۖ وَأَن يَسۡتَعۡفِفۡنَ خَيۡرٞ لَّهُنَّۗ وَٱللَّهُ سَمِيعٌ عَلِيمٞ
ವಿವಾಹವಾಗುವ ಬಯಕೆಯಿಲ್ಲದ ವಯಸ್ಸಾದ (ಋತುಸ್ರಾವ ನಿಂತ) ಮಹಿಳೆಯರು ತಮ್ಮ ಹೊರ ಉಡುಪುಗಳನ್ನು ಕಳಚಿಡುವುದರಲ್ಲಿ ದೋಷವಿಲ್ಲ—ಆದರೆ ಅವರು ಸೌಂದರ್ಯವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿರಬಾರದು. ಆದರೆ ಅವರು ಈ ವಿಷಯದಲ್ಲಿ ಸೂಕ್ಷ್ಮತೆ ಪಾಲಿಸುವುದು ಅವರಿಗೆ ಅತ್ಯುತ್ತಮವಾಗಿದೆ.

Scroll to Top