'ಅಂತ್ಯಕಾಲದಲ್ಲಿ ಒಂದು ಜನಾಂಗವು ಬರುತ್ತದೆ. ಅವರು ವಯಸ್ಸಿನಲ್ಲಿ ಚಿಕ್ಕವರು ಮತ್ತು ಬುದ್ಧಿಶಕ್ತಿಯಲ್ಲಿ ಅವಿವೇಕಿಗಳು. ಅವರು ಸೃಷ್ಟಿಗಳ ಮಾತುಗಳಲ್ಲೇ ಅತ್ಯುತ್ತಮವಾದ ಮಾತನ್ನು ಹೇಳುತ್ತಾರೆ. ಬಾಣವು ಗುರಿಯಿಂದ ಹೊರಬೀಳುವಷ್ಟು ವೇಗವಾಗಿ ಅವರು ಇಸ್ಲಾಮಿನಿಂದ ಹೊರಬೀಳುತ್ತಾರೆ
ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: (ಅವರು ಹೇಳಿದರು:) "ನಾನು ನಿಮಗೆ ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಯಾವುದೇ ಒಂದು ಹದೀಸ್) ತಿಳಿಸುವಾಗ, ಅವರ ಮೇಲೆ ಸುಳ್ಳು ಹೇಳುವುದಕ್ಕಿಂತ ಆಕಾಶದಿಂದ ಕೆಳಗೆ ಬೀಳುವುದು ನನಗೆ ಹೆಚ್ಚು ಪ್ರಿಯವಾಗಿದೆ. ಆದರೆ, ನಾನು ನನ್ನ ಮತ್ತು…

