ನೀನು ನಿನ್ನ ಕೈಗಳಿಂದ ಹೀಗೆ ಮಾಡಿದರೆ ನಿನಗೆ ಸಾಕಾಗುತ್ತಿತ್ತು." ನಂತರ ಅವರು ತಮ್ಮ ಕೈಗಳಿಂದ ಒಂದು ಬಾರಿ ನೆಲಕ್ಕೆ ಬಡಿದರು. ನಂತರ ಎಡಗೈಯಿಂದ ಬಲಗೈಯನ್ನು, ಎರಡು ಅಂಗೈಗಳ ಹೊರಭಾಗವನ್ನು ಮತ್ತು ಮುಖವನ್ನು ಸವರಿದರು
ಅಮ್ಮಾರ್ ಬಿನ್ ಯಾಸಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನನ್ನು ಒಂದು ಕಾರ್ಯಕ್ಕೆ ಕಳುಹಿಸಿದರು. ಆಗ ನನಗೆ ಜನಾಬತ್ (ದೊಡ್ಡ ಅಶುದ್ಧಿ) ಉಂಟಾಯಿತು. ನನಗೆ ನೀರು ಸಿಗಲಿಲ್ಲ. ಆದ್ದರಿಂದ ಪ್ರಾಣಿಯು ಹೊರಳಾಡುವಂತೆ ನಾನು…

