ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್ನಿಂದಾಗಿಯೇ ನಾವು ಮರಣಹೊಂದುತ್ತೇವೆ. ಪುನರುತ್ಥಾನವು ನಿನ್ನ ಕಡೆಗೇ ಆಗಿದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ): ಬೆಳಗಾಗುವಾಗ ಹೀಗೆ ಹೇಳುತ್ತಿದ್ದರು: "ಓ ಅಲ್ಲಾಹ್! ನಿನ್ನಿಂದಾಗಿ ನಾವು ಬೆಳಗನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಸಂಜೆಯನ್ನು ಪ್ರವೇಶಿಸಿದೆವು. ನಿನ್ನಿಂದಾಗಿ ನಾವು ಜೀವಂತವಿದ್ದೇವೆ. ನಿನ್…

