'ಖಂಡಿತವಾಗಿಯೂ ಇಹಲೋಕದಲ್ಲಿ ಜನರನ್ನು ಶಿಕ್ಷಿಸುವವರನ್ನು ಅಲ್ಲಾಹು ಶಿಕ್ಷಿಸುತ್ತಾನೆ'
Choose an available translation of this Hadeeth
Hadeeth text
ಹಿಶಾಮ್ ಇಬ್ನ್ ಹಕೀಮ್ ಇಬ್ನ್ ಹಿಝಾಮ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಶಾಮ್ (ಸಿರಿಯಾ) ನಲ್ಲಿ 'ಅನ್ಬಾತ್' (ಜನಾಂಗದವರು) ಗಳ ಒಂದು ಗುಂಪಿನ ಬಳಿ ಹಾದುಹೋದರು. ಅವರನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿತ್ತು. ಅವರು (ಹಿಶಾಮ್) ಕೇಳಿದರು: "ಇವರ ವಿಷಯವೇನು?". ಜನರು ಹೇಳಿದರು: "ಅವರನ್ನು 'ಜಿಝ್ಯಾ' (ತೆರಿಗೆ) ಗಾಗಿ ತಡೆಹಿಡಿಯಲಾಗಿದೆ". ಆಗ ಹಿಶಾಮ್ ಹೇಳಿದರು: "ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಖಂಡಿತವಾಗಿಯೂ ಕೇಳಿದ್ದೇನೆ ಎಂದು ನಾನು ಸಾಕ್ಷಿ ನುಡಿಯುತ್ತೇನೆ: 'ಖಂಡಿತವಾಗಿಯೂ ಇಹಲೋಕದಲ್ಲಿ ಜನರನ್ನು ಶಿಕ್ಷಿಸುವವರನ್ನು ಅಲ್ಲಾಹು ಶಿಕ್ಷಿಸುತ್ತಾನೆ' ".
Explanation
Benefits
ಶರೀಅತ್ ಸಮ್ಮತ ಕಾರಣವಿಲ್ಲದೆ ಜನರನ್ನು, ಅವರು ಸತ್ಯನಿಷೇಧಿಗಳಾಗಿದ್ದರೂ ಸಹ, ಶಿಕ್ಷಿಸುವುದು ನಿಷಿದ್ಧವಾಗಿದೆ (ಹರಾಮ್).
ಅನ್ಯಾಯಗಾರರಿಗೆ ಅನ್ಯಾಯ ಮಾಡುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಾಬಿಗಳು ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ನಿಷೇಧಿಸುವುದಕ್ಕೆ ಬದ್ಧರಾಗಿದ್ದರು.
ಇಮಾಮ್ ನವವಿ ಹೇಳುತ್ತಾರೆ: "ಇದು ಅನ್ಯಾಯವಾಗಿ ನೀಡುವ ಶಿಕ್ಷೆಗೆ ಅನ್ವಯಿಸುತ್ತದೆ. ನ್ಯಾಯಯುತವಾಗಿ ನೀಡಲಾಗುವ ಶಿಕ್ಷೆಯು ಇದರಲ್ಲಿ ಸೇರುವುದಿಲ್ಲ. ಉದಾಹರಣೆಗೆ 'ಖಿಸಾಸ್' (ಪ್ರತೀಕಾರ), 'ಹುದೂದ್' (ಶರೀಅತ್ ನಿರ್ಧರಿಸಿದ ದಂಡನೆಗಳು), ಮತ್ತು 'ತಅ್‌ಝೀರ್' (ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ಶಿಕ್ಷೆ), ಮುಂತಾದ (ಕಾನೂನುಬದ್ಧ) ಶಿಕ್ಷೆಗಳು.
Attribution
Categories
Share hadeeth
Sharing options · 0 Total shares

