ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'
Choose an available translation of this Hadeeth
Hadeeth text
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಪುನರುತ್ಥಾನ ದಿನದಂದು ಅಲ್ಲಾಹು ಮೊದಲಿನವರು ಮತ್ತು ನಂತರದವರನ್ನು (ಎಲ್ಲರನ್ನೂ) ಒಟ್ಟುಗೂಡಿಸಿದಾಗ, ಪ್ರತಿಯೊಬ್ಬ ವಿಶ್ವಾಸದ್ರೋಹಿಗಾಗಿ ಒಂದು ಪ್ರತ್ಯೇಕ ಧ್ವಜ ಏರಿಸಲಾಗುವುದು. ಆಗ ಹೇಳಲಾಗುವುದು: 'ಇದು ಇಂಥಿಂತವನ ಮಗನ ವಿಶ್ವಾಸದ್ರೋಹ'."
Explanation
Benefits
ರಕ್ತ, ಗೌರವ, ರಹಸ್ಯ ಅಥವಾ ಸಂಪತ್ತಿನ ವಿಷಯದಲ್ಲಿ ಯಾರಾದರೂ ನಿಮ್ಮನ್ನು ನಂಬಿ, ನೀವು ಅವರಿಗೆ ದ್ರೋಹ ಬಗೆದು, ನಿಮ್ಮ ವಿಶ್ವಾಸಾರ್ಹತೆಯ ಬಗ್ಗೆ ಅವರಲ್ಲಿದ್ದ ಭರವಸೆಯನ್ನು ಹುಸಿಗೊಳಿಸಿದರೆ ಅದೆಲ್ಲವನ್ನೂ ಎಚ್ಚರಿಕೆ ನೀಡಲಾದ ವಿಶ್ವಾಸದ್ರೋಹದಲ್ಲಿ ಒಳಗೊಳ್ಳುತ್ತದೆ.
ಇಮಾಮ್ ಖುರ್ತುಬಿ ಹೇಳುತ್ತಾರೆ: "ಇದು ಅರಬ್ಬರು ಮಾಡುತ್ತಿದ್ದ ರೀತಿಯಲ್ಲಿಯೇ ಅವರಿಗಾಗಿರುವ ಒಂದು ಸಂಬೋಧನೆಯಾಗಿದೆ. ಏಕೆಂದರೆ ಅವರು ವಫಾದಾರಿಗಾಗಿ ಬಿಳಿ ಧ್ವಜವನ್ನು ಮತ್ತು ವಿಶ್ವಾಸದ್ರೋಹಕ್ಕಾಗಿ ಕಪ್ಪು ಧ್ವಜವನ್ನು ಎತ್ತುತ್ತಿದ್ದರು. ಇದರಿಂದ ವಿಶ್ವಾಸದ್ರೋಹಿಯನ್ನು ದೂಷಿಸಲು ಮತ್ತು ನಿಂದಿಸಲು ಸಾಧ್ಯವಾಗುತ್ತಿತ್ತು. ಆದ್ದರಿಂದ, ಹದೀಸ್‌ನ ಪ್ರಕಾರ, ವಿಶ್ವಾಸದ್ರೋಹಿಗೆ ಇದೇ ರೀತಿಯ ಘಟನೆ ಸಂಭವಿಸುತ್ತದೆ. ಇದರಿಂದ ಅವನು ಪುನರುತ್ಥಾನದಲ್ಲಿ ತನ್ನ ಈ ಗುಣದಿಂದ ಪ್ರಸಿದ್ಧನಾಗುತ್ತಾನೆ ಮತ್ತು (ಮಹ್ಶರ್‌ನ) ಜನರು ಅವನನ್ನು ದೂಷಿಸುತ್ತಾರೆ.
ಇಬ್ನ್ ಹಜರ್ ಹೇಳುತ್ತಾರೆ: "ಇದರಲ್ಲಿ, ಪುನರುತ್ಥಾನ ದಿನದಂದು ಜನರನ್ನು ಅವರ ತಂದೆಯಂದಿರ ಹೆಸರುಗಳಿಂದ ಕರೆಯಲಾಗುವುದು ಎಂಬ ಸೂಚನೆಯಿದೆ. ಏಕೆಂದರೆ ಇದರಲ್ಲಿ "ಇಂಥವನ ಮಗ ಇಂಥವನ ವಿಶ್ವಾಸದ್ರೋಹ" ಎಂದು ಹೇಳಲಾಗಿದೆ."
Attribution
Categories
Share hadeeth
Sharing options · 0 Total shares

