افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#66205[صحيح]
HadeethEnc · 1.36.0

'ಉಕ್ಲ್' ಅಥವಾ 'ಉರೈನ' (ಜನಾಂಗದ) ಕೆಲವರು (ಮದೀನಾಕ್ಕೆ) ಬಂದರು. ಅವರಿಗೆ ಮದೀನಾದ ಹವಾಮಾನ ಒಗ್ಗಲಿಲ್ಲ

Available translations

Choose an available translation of this Hadeeth

01

Hadeeth text

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: " 'ಉಕ್ಲ್' ಅಥವಾ 'ಉರೈನ' (ಜನಾಂಗದ) ಕೆಲವರು (ಮದೀನಾಕ್ಕೆ) ಬಂದರು. ಅವರಿಗೆ ಮದೀನಾದ ಹವಾಮಾನ ಒಗ್ಗಲಿಲ್ಲ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹಾಲು ಕರೆಯುವ ಒಂಟೆಗಳ ಬಳಿ ಹೋಗಿ ಅವುಗಳ ಮೂತ್ರ ಮತ್ತು ಹಾಲನ್ನು ಕುಡಿಯಲು ಆದೇಶಿಸಿದರು. ಅವರು ಹೊರಟರು. ಅವರು ಗುಣಮುಖರಾದಾಗ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರಿಗಾಹಿಯನ್ನು ಕೊಂದು ಒಂಟೆಗಳನ್ನು ವಶಪಡಿಸಿಕೊಂಡು ಹೋದರು. ಮುಂಜಾನೆ ಈ ಸುದ್ದಿ (ಪ್ರವಾದಿಯವರಿಗೆ) ತಲುಪಿತು. ಆಗ ಅವರು ಅವರನ್ನು ಹಿಂಬಾಲಿಸಲು (ಜನರನ್ನು) ಕಳುಹಿಸಿದರು. ಬಿಸಿಲು ಏರಿದಾಗ ಅವರನ್ನು ಹಿಡಿದು ತರಲಾಯಿತು. ಆಗ ಅವರು (ಪ್ರವಾದಿ) ಆದೇಶಿಸಿದಂತೆ, ಅವರ ಕೈ ಮತ್ತು ಕಾಲುಗಳನ್ನು ಕತ್ತರಿಸಲಾಯಿತು, ಅವರ ಕಣ್ಣುಗಳಿಗೆ ಬರೆ ಹಾಕಲಾಯಿತು, ಮತ್ತು ಅವರನ್ನು 'ಹರ್ರಾ' (ಕಪ್ಪು ಕಲ್ಲುಗಳ ಬಿಸಿಲ ಪ್ರದೇಶ) ದಲ್ಲಿ ಎಸೆಯಲಾಯಿತು. ಅವರು ನೀರಿಗಾಗಿ ಹಪಹಪಿಸುತ್ತಿದ್ದರೆ, ಆದರೆ ಅವರಿಗೆ ನೀರು ನೀಡಲಾಗಲಿಲ್ಲ". (ವರದಿಗಾರರಾದ) ಅಬೂ ಖಿಲಾಬ ಹೇಳುತ್ತಾರೆ: "ಇವರು ಕಳ್ಳತನ ಮಾಡಿದರು, ಕೊಲೆ ಮಾಡಿದರು, ಸತ್ಯವಿಶ್ವಾಸ ಸ್ವೀಕರಿಸಿದ ನಂತರ ಸತ್ಯನಿಷೇಧಿಗಳಾದರು, ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದರು".
02

Explanation

'ಉಕ್ಲ್' ಮತ್ತು 'ಉರೈನ' ಜನಾಂಗದ ಕೆಲವು ಪುರುಷರು ಮುಸ್ಲಿಮರಾಗಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರಿಗೆ ಒಂದು ರೋಗ ತಗಲಿ, ಅದರಿಂದ ಅವರ ಹೊಟ್ಟೆಗಳು ಉಬ್ಬಿಕೊಂಡವು. ಅವರು ಮದೀನಾದಲ್ಲಿ ಉಳಿಯಲು ಇಷ್ಟಪಡಲಿಲ್ಲ, ಏಕೆಂದರೆ ಅಲ್ಲಿನ ಆಹಾರ ಮತ್ತು ಹವಾಮಾನ ಅವರಿಗೆ ಒಗ್ಗುತ್ತಿರಲಿಲ್ಲ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಝಕಾತ್ ಆಗಿ ಸಂಗ್ರಹಿಸಿದ ಒಂಟೆಗಳ ಬಳಿಗೆ ಹೋಗಿ, ಅವುಗಳ ಮೂತ್ರ ಮತ್ತು ಹಾಲನ್ನು ಕುಡಿಯಲು ಆದೇಶಿಸಿದರು. ಅವರು ಹೊರಟರು. ಅವರು ಗುಣಮುಖರಾಗಿ, ಆರೋಗ್ಯವಂತರಾದಾಗ ಮತ್ತು ಅವರ ಕಾಂತಿಯು ಮರಳಿದಾಗ, ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರಿಗಾಹಿಯನ್ನು ಕೊಂದು, ಒಂಟೆಗಳನ್ನು ಅಟ್ಟಿಸಿಕೊಂಡು ಹೋದರು. ಮುಂಜಾನೆ ಈ ಸುದ್ದಿ ಪ್ರವಾದಿಯವರಿಗೆ ಬಂದಿತು. ಅವರು ಅವರನ್ನು ಹುಡುಕಲು ಜನರನ್ನು ಕಳುಹಿಸಿದರು. ಅವರನ್ನು ಹಿಡಿದು ಬಿಸಿಲು ಏರಿದಾಗ ಅವರನ್ನು ಸೆರೆಯಾಳುಗಳಾಗಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತರಲಾಯಿತು. ಆಗ ಅವರು ಕೈ ಕಾಲುಗಳನ್ನು ಕತ್ತರಿಸಲು ಮತ್ತು ಅವರ ಕಣ್ಣುಗಳನ್ನು ಕೀಳಲು ಆದೇಶಿಸಿದರು; ಏಕೆಂದರೆ ಅವರು ಕುರಿಗಾಹಿಗೆ ಹಾಗೆಯೇ ಮಾಡಿದ್ದರು. ನಂತರ ಅವರನ್ನು 'ಹರ್ರಾ'ದಲ್ಲಿ ಎಸೆಯಲಾಯಿತು, ಅವರು ನೀರು ಕೇಳುತ್ತಿದ್ದರು. ಆದರೆ ಅವರಿಗೆ ನೀರು ಕೊಡಲಾಗಲಿಲ್ಲ. ಕೊನೆಗೆ ಅವರು (ಆ ಸ್ಥಿತಿಯಲ್ಲೇ) ಪ್ರಾಣಬಿಟ್ಟರು. ಅಬೂ ಖಿಲಾಬ (ವರದಿಗಾರರು) ಹೇಳುತ್ತಾರೆ: ಅವರು ಕಳ್ಳತನ ಮಾಡಿದರು, ಕೊಲೆ ಮಾಡಿದರು, ವಿಶ್ವಾಸವಿಟ್ಟ ನಂತರ ನಿಷೇಧಿಗಳಾದರು, ಮತ್ತು ಅಲ್ಲಾಹು ಹಾಗೂ ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದರು.
03

Benefits

ಭಕ್ಷ್ಯಯೋಗ್ಯ ಪ್ರಾಣಿಗಳ ಮೂತ್ರವು ಶುದ್ಧವಾಗಿದೆ.
ಒಂಟೆಯ ಹಾಲು ಮತ್ತು ಮೂತ್ರದಿಂದ ಔಷಧಿ ಮತ್ತು ಚಿಕಿತ್ಸೆ ಪಡೆಯುವುದು ಸಮ್ಮತವಾಗಿದೆ.
ಪ್ರತೀಕಾರದಲ್ಲಿ ಸಮಾನ ರೂಪವನ್ನು ಪಾಲಿಸುವುದು ಸಮ್ಮತವಾಗಿದೆ. ಅಂಗವಿಕಲ ಮಾಡುವುದನ್ನು ನಿಷೇಧಿಸಿರುವುದು ಪ್ರತೀಕಾರವಲ್ಲದ ಇತರ ಸಂದರ್ಭಗಳಿಗೆ ಅನ್ವಯಿಸುತ್ತದೆ.
ಒಬ್ಬ ವ್ಯಕ್ತಿಯನ್ನು ಕೊಂದಿದ್ದಕ್ಕಾಗಿ ಒಂದು ಗುಂಪನ್ನೇ ಕೊಲ್ಲುವುದು ಸಮ್ಮತವಾಗಿದೆ. ಅವರು ಅವನನ್ನು ಮೋಸದಿಂದ ಕೊಂದಿದ್ದರೂ ಅಥವಾ ದರೋಡೆ ಅಥವಾ ಯುದ್ಧದ ಮೂಲಕ ಕೊಂದಿದ್ದರೂ ಸಹ.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...