ತಿಳಿಯಿರಿ! ಖಂಡಿತವಾಗಿಯೂ ಖಮ್ರ್ (ಮದ್ಯ) ವನ್ನು ನಿಷೇಧಿಸಲಾಗಿದೆ
Choose an available translation of this Hadeeth
Hadeeth text
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಬೂ ತಲ್ಹಾ ರವರ ಮನೆಯಲ್ಲಿ ಜನರಿಗೆ ಪಾನೀಯವನ್ನು ಬಡಿಸುವವನಾಗಿದ್ದೆ. ಆ ದಿನಗಳಲ್ಲಿ ಅವರ ಮದ್ಯವು 'ಫದೀಖ್' (ಹಸಿ ಮತ್ತು ಹಣ್ಣಾದ ಖರ್ಜೂರಗಳಿಂದ ತಯಾರಿಸಿದ್ದು) ಆಗಿತ್ತು. ಆಗ ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ಘೋಷಣೆ ಮಾಡುವವನಿಗೆ ಹೀಗೆ ಘೋಷಿಸಲು ಆದೇಶಿಸಿದರು: "ತಿಳಿಯಿರಿ! ಖಂಡಿತವಾಗಿಯೂ ಖಮ್ರ್ (ಮದ್ಯ) ವನ್ನು ನಿಷೇಧಿಸಲಾಗಿದೆ". ವರದಿಗಾರ (ಅನಸ್) ಹೇಳುತ್ತಾರೆ: ಆಗ ಅಬೂ ತಲ್ಹಾ ನನಗೆ ಹೇಳಿದರು: "ಹೋಗು, ಅದನ್ನು ಚೆಲ್ಲಿಬಿಡು". ನಾನು ಹೊರಗೆ ಹೋಗಿ ಅದನ್ನು ಚೆಲ್ಲಿದೆನು. ಆಗ ಅದು ಮದೀನಾದ ಕೇರಿಗಳಲ್ಲಿ ಹರಿಯಿತು. ಆಗ ಕೆಲವು ಜನರು ಹೇಳಿದರು: "(ಇದನ್ನು ನಿಷೇಧಿಸುವ ಮೊದಲು) ಕೆಲವರು (ಯುದ್ಧದಲ್ಲಿ) ಹತರಾಗಿದ್ದಾರೆ ಮತ್ತು ಇದು (ಮದ್ಯ) ಅವರ ಹೊಟ್ಟೆಗಳಲ್ಲಿತ್ತು (ಅವರ ಗತಿಯೇನು?)". ಆಗ ಅಲ್ಲಾಹು (ಈ) ವಚನವನ್ನು ಅವತೀರ್ಣಗೊಳಿಸಿದನು: "ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಿಗೆ, ಅವರು (ಹಿಂದೆ) ಸೇವಿಸಿದ್ದರಲ್ಲಿ ಯಾವುದೇ ದೋಷವಿಲ್ಲ..." [ಸೂರ ಮಾಇದಾ: 93].
Explanation
"ಸತ್ಯವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಿಗೆ, ಅವರು (ಹಿಂದೆ) ಸೇವಿಸಿದ್ದರಲ್ಲಿ ಯಾವುದೇ ದೋಷವಿಲ್ಲ..." [ಸೂರ ಮಾಇದಾ: 93]. ಅಂದರೆ: ಮದ್ಯವನ್ನು ನಿಷೇಧಿಸುವ ಮೊದಲು ಅವರು ಸೇವಿಸಿದ ಮತ್ತು ಕುಡಿದ ಸತ್ಯವಿಶ್ವಾಸಿಗಳಿಗೆ ಅದರಿಂದ ಯಾವುದೇ ಪಾಪವಿಲ್ಲ.
Benefits
ಖಮ್ರ್ (ಮದ್ಯ): ಇದು ಎಲ್ಲಾ ರೀತಿಯ ಮಾದಕ ವಸ್ತುವನ್ನು ಒಳಗೊಳ್ಳುವ ಒಂದು ಸಮಗ್ರ ಪದವಾಗಿದೆ.
ಫದೀಖ್: ಇದು ಬುಸ್ರ್ (ಹಸಿ ಖರ್ಜೂರ) ಮತ್ತು ಹಣ್ಣಾದ ಖರ್ಜೂರಗಳಿಂದ, ಬೆಂಕಿಯ ಸ್ಪರ್ಶವಿಲ್ಲದೆ ತಯಾರಿಸಲಾಗುವ ಪಾನೀಯ. ಬುಸ್ರ್ ಎಂದರೆ ಹಣ್ಣಾಗುವ ಮೊದಲಿನ ಖರ್ಜೂರ.
ಇಬ್ನ್ ಹಜರ್ ಹೇಳುತ್ತಾರೆ: "ಮುಹಲ್ಲಬ್ ಹೇಳಿದರು: ಮದ್ಯವನ್ನು ನಿಷೇಧಿಸಿದ್ದನ್ನು ಸಾರಲು ಮತ್ತು ಅದನ್ನು ತ್ಯಜಿಸಿರುವುದನ್ನು ಜಾಹೀರುಗೊಳಿಸಲು ಅದನ್ನು ದಾರಿಯಲ್ಲಿ ಚೆಲ್ಲಲಾಯಿತು. ದಾರಿಯಲ್ಲಿ ಚೆಲ್ಲವುದರಿಂದ ಉಂಟಾಗುವ (ಸಣ್ಣ) ತೊಂದರೆಗಿಂತ ಈ ಸಾರ್ವಜನಿಕ ಹಿತಾಸಕ್ತಿಯು ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು."
ಅಲ್ಲಾಹುವಿಗೆ ತನ್ನ ದಾಸರ ಮೇಲಿರುವ ಕರುಣೆಯನ್ನು ವಿವರಿಸಲಾಗಿದೆ. ಅವನು ನಿಯಮವನ್ನು ಇಳಿಸುವ ಮೊದಲು ಮಾಡಿದ ಕೃತ್ಯಕ್ಕಾಗಿ ವಿಚಾರಣೆ ನಡೆಸುವುದಿಲ್ಲ.
ಅಲ್ಲಾಹು ಮದ್ಯವನ್ನು ನಿಷೇಧಿಸಿದ್ದಾನೆ. ಏಕೆಂದರೆ ಅದರಲ್ಲಿ ಬುದ್ಧಿ ಮತ್ತು ಸಂಪತ್ತಿಗೆ ಹಾನಿಯುಂಟುಮಾಡುವ ದುಷ್ಪರಿಣಾಮಗಳಿವೆ. ಅದನ್ನು ಕುಡಿದಾಗ ಮನುಷ್ಯನು ಬುದ್ಧಿಯ ಸ್ಥಿಮಿತ ಕಳೆದುಕೊಳ್ಳುವುದರಿಂದ ಅನೇಕ ಪಾಪಗಳನ್ನು ಮಾಡುತ್ತಾನೆ.
Attribution
Categories
Share hadeeth
Sharing options · 0 Total shares

