ಖಂಡಿತವಾಗಿಯೂ ಸರ್ವಶಕ್ತನಾದ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು: “ಯಾರು ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡುವುದಿಲ್ಲವೋ, ಅವರೇ ಸತ್ಯನಿಷೇಧಿಗಳು”
Choose an available translation of this Hadeeth
Hadeeth text
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಖಂಡಿತವಾಗಿಯೂ ಸರ್ವಶಕ್ತನಾದ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು: “ಯಾರು ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡುವುದಿಲ್ಲವೋ, ಅವರೇ ಸತ್ಯನಿಷೇಧಿಗಳು” [ಅಲ್-ಮಾಯಿದ: 44], “ಅವರೇ ಅಕ್ರಮಿಗಳು” [ಅಲ್-ಮಾಯಿದ: 45], ಮತ್ತು “ಅವರೇ ದುಷ್ಕರ್ಮಿಗಳು” [ಅಲ್-ಮಾಯಿದ: 47]. ಇಬ್ನ್ ಅಬ್ಬಾಸ್ ಹೇಳಿದರು: ಅಲ್ಲಾಹು ಈ ವಚನಗಳನ್ನು ಯಹೂದಿಗಳ ಎರಡು ಪಂಗಡಗಳ ವಿಷಯದಲ್ಲಿ ಅವತೀರ್ಣಗೊಳಿಸಿದನು. ಜಾಹಲಿಯ್ಯಾ ಕಾಲದಲ್ಲಿ (ಅಜ್ಞಾನದ ಕಾಲದಲ್ಲಿ) ಆ ಎರಡು ಪಂಗಡಗಳಲ್ಲಿ ಒಂದು ಇನ್ನೊಂದರ ಮೇಲೆ ಪ್ರಭುತ್ವ ಸಾಧಿಸಿತ್ತು. ಎಷ್ಟರಮಟ್ಟಿಗೆಂದರೆ, ದುರ್ಬಲ ಪಂಗಡದ ವ್ಯಕ್ತಿಯನ್ನು ಪ್ರಭಲ ಪಂಗಡದವರು ಕೊಂದರೆ, ಅದರ ಪರಿಹಾರವು ಐವತ್ತು 'ವಸ್ಕ್' ಆಗಿರಬೇಕು. ಆದರೆ, ದುರ್ಬಲ ಪಂಗಡದ ವ್ಯಕ್ತಿಯನ್ನು ಪ್ರಬಲ ಪಂಗಡದವರು ಕೊಂದರೆ, ಅದರ ಪರಿಹಾರವು ನೂರು 'ವಸ್ಕ್' ಆಗಿರಬೇಕು ಎಂದು ಅವರು ಒಪ್ಪಂದ ಮಾಡಿಕೊಂಡಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬರುವವರೆಗೂ ಅವರು ಇದೇ ಸ್ಥಿತಿಯಲ್ಲಿದ್ದರು. ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಗಮನದಿಂದ ಆ ಎರಡೂ ಪಂಗಡಗಳು ತಗ್ಗಿಬಗ್ಗಿದವು. ಆ ದಿನಗಳಲ್ಲಿ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇನ್ನೂ ಅವರ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿರಲಿಲ್ಲ ಮತ್ತು ಅವರನ್ನು ಇನ್ನೂ ತಮ್ಮ ಅಧೀನಕ್ಕೆ ತೆಗೆದುಕೊಂಡಿರಲಿಲ್ಲ. ಅದು ಶಾಂತಿ ಒಪ್ಪಂದದ ಸಮಯವಾಗಿತ್ತು. ಹೀಗಿರುವಾಗ, ದುರ್ಬಲ ಪಂಗಡದವರು ಪ್ರಬಲ ಪಂಗಡದ ಒಬ್ಬ ವ್ಯಕ್ತಿಯನ್ನು ಕೊಂದರು. ಆಗ ಪ್ರಬಲ ಪಂಗಡದವರು ದುರ್ಬಲ ಪಂಗಡದವರಿಗೆ ಸಂದೇಶ ಕಳುಹಿಸಿ, "(ಒಪ್ಪಂದದಂತೆ) ನಮಗೆ ನೂರು ವಸ್ಕ್ ಕಳುಹಿಸಿರಿ" ಎಂದು ಹೇಳಿದರು. ಆಗ ದುರ್ಬಲ ಪಂಗಡದವರು ಹೇಳಿದರು: "ಒಂದೇ ಧರ್ಮ, ಒಂದೇ ವಂಶ ಮತ್ತು ಒಂದೇ ಊರನ್ನು ಹೊಂದಿರುವ ಎರಡು ಬುಡಕಟ್ಟುಗಳ ನಡುವೆ, ಕೆಲವರಿಗೆ ನೀಡಬೇಕಾದ ರಕ್ತಪರಿಹಾರವು ಇನ್ನು ಕೆಲವರಿಗೆ ನೀಡಬೇಕಾದ ರಕ್ತಪರಿಹಾರಕ್ಕಿಂತ ಅರ್ಧದಷ್ಟಿರುವುದು ನ್ಯಾಯವೇ? ನಾವು ಹಿಂದೆ ನಿಮಗೆ ಇದನ್ನು ನೀಡುತ್ತಿದ್ದುದು, ನಮ್ಮ ಮೇಲೆ ನಿಮಗಿದ್ದ ದಬ್ಬಾಳಿಕೆ ಮತ್ತು ನಿಮ್ಮ ಭಯದಿಂದಾಗಿ ಮಾತ್ರ. ಆದರೆ ಈಗ ಮುಹಮ್ಮದ್ ರವರು ಬಂದಿರುವುದರಿಂದ, ನಾವು ನಿಮಗೆ ಅದನ್ನು ನೀಡುವುದಿಲ್ಲ." ಇದರಿಂದಾಗಿ ಅವರ ನಡುವೆ ಯುದ್ಧ ಭುಗಿಲೇಳುವ ಪರಿಸ್ಥಿತಿ ಉಂಟಾಯಿತು. ನಂತರ ಅವರು ಅಲ್ಲಾಹನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ನಡುವೆ ನ್ಯಾಯಾಧೀಶರನ್ನಾಗಿ ಮಾಡಲು ಒಪ್ಪಿಕೊಂಡರು. ಆಗ ಪ್ರಬಲ ಪಂಗಡದವರು ಯೋಚಿಸಿ (ತಮ್ಮವರಿಗೆ) ಹೇಳಿದರು: "ಅಲ್ಲಾಹನ ಆಣೆ, ನೀವು ಅವರಿಗೆ ನೀಡುವುದಕ್ಕಿಂತ ಎರಡರಷ್ಟು ಪರಿಹಾರವನ್ನು ಅವರು ನಿಮಗೆ ನೀಡುವಂತೆ ಮುಹಮ್ಮದ್ ರವರು ಮಾಡುವುದಿಲ್ಲ. ಅವರು (ದುರ್ಬಲ ಪಂಗಡದವರು) ಹೇಳಿದ್ದು ನಿಜ; ಅವರು ನಮಗೆ ಅದನ್ನು ನೀಡುತ್ತಿದ್ದುದು ಕೇವಲ ನಮ್ಮ ದಬ್ಬಾಳಿಕೆ ಮತ್ತು ಬಲವಂತದಿಂದಾಗಿ ಮಾತ್ರ. ಆದ್ದರಿಂದ, ಮುಹಮ್ಮದ್ ರವರ ಅಭಿಪ್ರಾಯ ಏನೆಂದು ತಿಳಿದುಕೊಳ್ಳಲು, ಯಾರಿಗೂ ತಿಳಿಯದಂತೆ ರಹಸ್ಯವಾಗಿ ಅವರ ಬಳಿಗೆ ಕಳುಹಿಸಿ. ಅವರು ನೀವು ಬಯಸಿದ್ದನ್ನು (100 ವಸ್ಕ್) ನೀಡುವುದಾದರೆ ಅವರನ್ನು ನ್ಯಾಯಾಧೀಶರನ್ನಾಗಿ ಮಾಡಿ. ಒಂದು ವೇಳೆ ಅವರು ನೀವು ಬಯಸುವುದನ್ನು ನೀಡದಿದ್ದರೆ, ಎಚ್ಚರದಿಂದಿರಿ ಮತ್ತು ಅವರನ್ನು ನ್ಯಾಯಾಧೀಶರನ್ನಾಗಿ ಮಾಡಬೇಡಿ." ಹೀಗೆ ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಭಿಪ್ರಾಯವೇನೆಂದು ತಿಳಿದುಕೊಳ್ಳಲು ಕೆಲವು ಕಪಟವಿಶ್ವಾಸಿಗಳನ್ನು ರಹಸ್ಯವಾಗಿ ಕಳುಹಿಸಿದರು. ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದಾಗ, ಅಲ್ಲಾಹು ತನ್ನ ಸಂದೇಶವಾಹಕರಿಗೆ ಅವರ ಸಂಪೂರ್ಣ ವಿಷಯವನ್ನು ಮತ್ತು ಅವರು ಏನೆಲ್ಲಾ ಬಯಸಿದ್ದರು ಎಂಬುದನ್ನು ತಿಳಿಸಿದನು. ಆಗ ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದನು: “ಓ ಪ್ರವಾದಿಯವರೇ, 'ನಾವು ವಿಶ್ವಾಸವಿಟ್ಟಿದ್ದೇನೆ' ಎಂದು (ಬಾಯಿಂದ) ಹೇಳುವವರ ಪೈಕಿ ಸತ್ಯನಿಷೇಧದ ಕಡೆಗೆ ಧಾವಿಸುವವರ ಬಗ್ಗೆ ನೀವು ದುಃಖಿಸಬೇಡಿ…” [ಅಲ್-ಮಾಯಿದ: 41] ಎಂಬಲ್ಲಿಂದ “ಯಾರು ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡುವುದಿಲ್ಲವೋ, ಅವರೇ ದುಷ್ಕರ್ಮಿಗಳು” [ಅಲ್-ಮಾಯಿದ: 47] ಎಂಬಲ್ಲಿಯವರೆಗೆ. ನಂತರ ಅವರು (ಇಬ್ನ್ ಅಬ್ಬಾಸ್) ಆ ಎರಡು ಪಂಗಡಗಳ ಬಗ್ಗೆ ಹೇಳಿದರು: ಅಲ್ಲಾಹನ ಆಣೆ, ಅಲ್ಲಾಹು ಈ ವಚನಗಳನ್ನು ಅವತೀರ್ಣಗೊಳಿಸಿದ್ದು ಅವರ ಬಗ್ಗೆಯೇ ಆಗಿದೆ, ಮತ್ತು ಅಲ್ಲಾಹು ಉದ್ದೇಶಿಸಿರುವುದು ಅವರಿಬ್ಬರನ್ನೇ ಆಗಿದೆ.
Explanation
Benefits
ಯಹೂದಿಗಳ ವಂಚನೆ ಮತ್ತು ಅವರು ಸ್ವತಃ ತಮ್ಮ ಮೇಲೆಯೇ ಮಾಡಿಕೊಳ್ಳುತ್ತಿದ್ದ ಅನ್ಯಾಯವನ್ನು ತಿಳಿಸಲಾಗಿದೆ.
ಯಹೂದಿಗಳಿಗೆ ಇಹಲೋಕದಲ್ಲಿ ಅವಮಾನ ಮತ್ತು ಪರಲೋಕದಲ್ಲಿ ಕಠಿಣ ಶಿಕ್ಷೆಯಿದೆ ಎಂದು ಅಲ್ಲಾಹು ತಿಳಿಸಿದ್ದಾನೆ.
ಅಲ್ಲಾಹು ಅವತೀರ್ಣಗೊಳಿಸಿದ ಪ್ರಕಾರ ತೀರ್ಪು ನೀಡದಿರುವುದು ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೀರ್ಪಿಗೆ ಒಪ್ಪದಿರುವುದು ಸತ್ಯನಿಷೇಧ, ಅಕ್ರಮ ಮತ್ತು ದುಷ್ಕರ್ಮವಾಗಿದೆ ಎಂಬುದಕ್ಕೆ ಇದರಲ್ಲಿ ಪುರಾವೆಯಿದೆ.
ಕಪಟವಿಶ್ವಾಸಿಗಳ ಅಪಾಯವನ್ನು ಮತ್ತು ಯಹೂದಿಗಳೊಂದಿಗೆ ಅವರಿಗಿದ್ದ ಸಹಕಾರವನ್ನು ತಿಳಿಸಲಾಗಿದೆ.
Attribution
Categories
Share hadeeth
Sharing options · 0 Total shares

