HadeethEnc · 1.36.0
ಅವರಲ್ಲಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಠಣದ ಬಗ್ಗೆ ಕೇಳಲಾಯಿತು
Available translations
Choose an available translation of this Hadeeth
01
Hadeeth text
ಇಬ್ನ್ ಅಬೀ ಮುಲೈಕಾ ರಿಂದ ವರದಿ: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿಯರ ಪೈಕಿ ಒಬ್ಬರಿಂದ - (ಈ ಬಗ್ಗೆ ಅಬೂ ಆಮಿರ್ ಹೇಳುತ್ತಾರೆ: ನಾಫಿಅ್ ಹೇಳಿದರು: 'ಅದು ಹಫ್ಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಎಂದು ನಾನು ಭಾವಿಸುತ್ತೇನೆ') - ವರದಿಯಾಗಿದೆ: "ಅವರಲ್ಲಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಠಣದ ಬಗ್ಗೆ ಕೇಳಲಾಯಿತು. ಆಗ ಅವರು ಹೇಳಿದರು: 'ನಿಮಗೆ ಅದು (ಅದೇ ರೀತಿಯಲ್ಲಿ ಪಠಿಸಲು) ಸಾಧ್ಯವಾಗುವುದಿಲ್ಲ'. ಆಗ ಅವರಲ್ಲಿ ಹೇಳಲಾಯಿತು: 'ನಮಗೆ ಅದರ ಬಗ್ಗೆ ತಿಳಿಸಿ (ಓದಿ ತೋರಿಸಿ)'. ಆಗ ಅವರು ನಿಧಾನವಾಗಿ ಮತ್ತು ಸ್ಪಷ್ಟವಾಗಿ ಪಠಿಸಿದರು.ಅಬೂ ಆಮಿರ್ ಹೇಳುತ್ತಾರೆ: ನಾಫಿಅ್ ಹೇಳಿದರು: ನಂತರ ಇಬ್ನ್ ಅಬೀ ಮುಲೈಕಾ ನಮಗಾಗಿ ಅದನ್ನು (ಹಫ್ಸಾ ಓದಿದಂತೆ) ಓದಿ ತೋರಿಸಿದರು: “ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್” [ಅಲ್-ಫಾತಿಹಾ: 2], ನಂತರ ನಿಲ್ಲಿಸಿದರು. “ಅರ್ರಹ್ಮಾನಿ ರ್ರಹೀಮ್” [ಅಲ್-ಫಾತಿಹಾ: 3], ನಂತರ ನಿಲ್ಲಿಸಿದರು. “ಮಾಲಿಕಿ ಯೌಮಿದ್ದೀನ್”."
02
Explanation
ಸತ್ಯವಿಶ್ವಾಸಿಗಳ ಮಾತೆ ಹಫ್ಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ, "ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನ್ ಪಠಣ ಹೇಗಿತ್ತು?" ಎಂದು ಕೇಳಲಾಯಿತು. ಅದಕ್ಕೆ ಅವರು: "ನಿಮಗೆ ಅಂತಹ ಪಠಣ ಮಾಡಲು ಸಾಧ್ಯವಾಗುವುದಿಲ್ಲ" ಎಂದು ಹೇಳಿದರು. ಆಗ ಅವರಿಗೆ: "ನಮಗೆ ತಿಳಿಸಿ" ಎಂದು ಹೇಳಲಾಯಿತು. ನಾಫಿಅ್ ಹೇಳುತ್ತಾರೆ: ಆಗ ಇಬ್ನ್ ಅಬೀ ಮುಲೈಕಾ ನಮಗೆ ನಿಧಾನಗತಿಯಲ್ಲಿ ಪಠಿಸಿದರು; ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಠಣದ ರೀತಿಯನ್ನು ವಿವರಿಸಲು ಮತ್ತು ಸಾದೃಶ್ಯಪಡಿಸಲು ಅವರು ಹೀಗೆ ಓದಿದರು: "ಅಲ್-ಹಮ್ದು ಲಿಲ್ಲಾಹಿ ರಬ್ಬಿಲ್ ಆಲಮೀನ್", ನಂತರ ಪಠಣವನ್ನು ನಿಲ್ಲಿಸಿದರು (ವಿರಾಮ ನೀಡಿದರು), "ಅರ್ರಹ್ಮಾನಿ ರ್ರಹೀಮ್", ನಂತರ ಪಠಣವನ್ನು ನಿಲ್ಲಿಸಿದರು, "ಮಾಲಿಕಿ ಯೌಮಿದ್ದೀನ್".
03
Benefits
ಕುರ್‌ಆನ್ ಪಠಿಸುವಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಧಾನವನ್ನು ಇದು ತಿಳಿಸುತ್ತದೆ.
ಪ್ರವಾದಿಯವರ ಪಠಣ ಹೇಗಿತ್ತು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಡಲಾಗಿದೆ.
ಕುರ್‌ಆನ್ ಅನ್ನು 'ತರಸ್ಸುಲ್' ಆಗಿ (ನಿಧಾನವಾಗಿ ಮತ್ತು ಸ್ಪಷ್ಟವಾಗಿ) ಓದುವುದು ನಿಯಮಗೊಳಿಸಲಾಗಿದೆ. ಇದು ಕುರ್‌ಆನ್ ಬಗ್ಗೆ ಚಿಂತನೆ ನಡೆಸಲು ಹೆಚ್ಚು ಸಹಕಾರಿಯಾಗಿದೆ.
ಸಜ್ಜನ ಪೂರ್ವಿಕರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿಯವರ ಕರ್ಮಗಳ ಬಗ್ಗೆ ಹೊಂದಿದ್ದ ಆಸಕ್ತಿಯನ್ನು ತಿಳಿಸಲಾಗಿದೆ.
'ತಜ್ವೀದ್' (ಕುರ್‌ಆನ್ ಪಠಣ ಶಾಸ್ತ್ರ) ಮತ್ತು ಕುರ್‌ಆನ್ ಜ್ಞಾನಗಳನ್ನು ತಿಳಿದುಕೊಳ್ಳುವ ಮಹತ್ವವನ್ನು ತಿಳಿಸಲಾಗಿದೆ.

Attribution
[رواه أحمد]
Categories
Share
Share hadeeth
Sharing options · 0 Total shares