HadeethEnc · 1.36.0
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಠಣ (ಓದುವ ರೀತಿ) ಹೇಗಿತ್ತು?" ಎಂದು ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕೇಳಲಾಯಿತು. ಅವರು ಹೇಳಿದರು: "ಅದು ದೀರ್ಘವಾಗಿ (ಎಳೆದು ಓದುವಂತಹುದು) ಆಗಿತ್ತು
Available translations
Choose an available translation of this Hadeeth
01
Hadeeth text
ಕತಾದ ರಿಂದ ವರದಿ: ಅವರು ಹೇಳಿದರು: "ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪಠಣ (ಓದುವ ರೀತಿ) ಹೇಗಿತ್ತು?" ಎಂದು ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಕೇಳಲಾಯಿತು. ಅವರು ಹೇಳಿದರು: "ಅದು ದೀರ್ಘವಾಗಿ (ಎಳೆದು ಓದುವಂತಹುದು) ಆಗಿತ್ತು". ನಂತರ ಅವರು: “ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್” ಎಂದು ಪಠಿಸಿದರು. ಅವರು 'ಬಿಸ್ಮಿಲ್ಲಾಹ್' ಎಂಬುದನ್ನು ದೀರ್ಘಗೊಳಿಸಿದರು (ಎಳೆದರು), 'ಅರ್ರಹ್ಮಾನ್' ಎಂಬುದನ್ನು ದೀರ್ಘಗೊಳಿಸಿದರು ಮತ್ತು 'ಅರ್ರಹೀಮ್' ಎಂಬುದನ್ನು ದೀರ್ಘಗೊಳಿಸಿದರು.
02
Explanation
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನ್ ಪಠಣ ಹೇಗಿತ್ತು ಎಂದು ಕೇಳಲಾಯಿತು. ಆಗ ಅವರು: "ಅವರು ತಮ್ಮ ಪಠಣದಲ್ಲಿ ಸ್ವರವನ್ನು ದೀರ್ಘಗೊಳಿಸುತ್ತಿದ್ದರು" ಎಂದು ಹೇಳಿದರು. ಅಂದರೆ, ಅವರು 'ಅಲ್ಲಾಹ್' ಪದದಲ್ಲಿರುವ 'ಲಾಮ್' ಅಕ್ಷರವನ್ನು, 'ಅರ್ರಹ್ಮಾನ್' ಪದದಲ್ಲಿರುವ 'ಮೀಮ್' ಅಕ್ಷರವನ್ನು ಮತ್ತು 'ಅರ್ರಹೀಮ್' ಪದದಲ್ಲಿರುವ 'ಹಾ'ಅಕ್ಷರವನ್ನು ಎಳೆದು ಓದುತ್ತಿದ್ದರು.
03
Benefits
ಮದ್ದ್ (ದೀರ್ಘಗೊಳಿಸುವಿಕೆ) ಎಂದರೆ, ದೀರ್ಘಗೊಳಿಸುವ ಅಕ್ಷರಗಳಾದ ಅಲಿಫ್, ವಾವ್ ಮತ್ತು ಯಾ ಗಳನ್ನು, ಅವು 'ಸುಕೂನ್' ಆಗಿದ್ದು, ಅವುಗಳ ಹಿಂದೆ ಅದಕ್ಕೆ ಹೊಂದಿಕೆಯಾಗುವ ಸ್ವರವಿದ್ದಾಗ ದೀರ್ಘಗೊಳಿಸಿ ಓದುವುದಾಗಿದೆ.
ಕುರ್‌ಆನ್ ಪಠಿಸುವಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಧಾನವನ್ನು ಇದು ತಿಳಿಸುತ್ತದೆ.
ಪ್ರವಾದಿಯವರ ಪಠಣ ಹೇಗಿತ್ತು ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಲಾಗಿದೆ.
ಅಸ್ಸಿಂದಿ ಹೇಳುತ್ತಾರೆ: "ಸ್ವರವನ್ನು ದೀರ್ಘಗೊಳಿಸುತ್ತಿದ್ದರು" ಎಂದರೆ, ದೀರ್ಘಗೊಳಿಸಲು ಸಾಧ್ಯವಿರುವ ಅಕ್ಷರಗಳನ್ನು ಎಳೆದು ಓದುತ್ತಿದ್ದರು. ಇದು ಕುರ್‌ಆನ್ ಬಗ್ಗೆ ಆಳವಾಗಿ ಚಿಂತನೆ ನಡೆಸಲು ಮತ್ತು ಉಪದೇಶ ಪಡೆಯುವವರಿಗೆ ನೆನಪಿಸಿಕೊಳ್ಳಲು ಸಹಾಯ ಮಾಡುತ್ತದೆ.
'ತಜ್ವೀದ್' (ಕುರ್‌ಆನ್ ಪಠಣ ಶಾಸ್ತ್ರ) ಮತ್ತು ಕುರ್‌ಆನ್ ವಿಜ್ಞಾನಗಳನ್ನು (ಉಲೂಮುಲ್ ಕುರ್‌ಆನ್) ತಿಳಿದುಕೊಳ್ಳುವ ಮಹತ್ವವನ್ನು ತಿಳಿಸಲಾಗಿದೆ.
ವಿಷಯಗಳನ್ನು ಅರ್ಥಮಾಡಿಕೊಳ್ಳಲು ವಿದ್ವಾಂಸರನ್ನು ಸಂಪರ್ಕಿಸಬೇಕು. ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಲ್ಲಿ ಪ್ರಶ್ನೆಯನ್ನು ಕೇಳಿದಾಗ ಅವರು ಪ್ರಶ್ನಿಸಿದವರಿಗೆ ಸ್ಪಷ್ಟವಾಗಿ ವಿವರಿಸಿದರು.

Attribution
[رواه البخاري]
Categories
Share
Share hadeeth
Sharing options · 0 Total shares