افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#65114[صحيح]
HadeethEnc · 1.36.0

ಖಂಡಿತವಾಗಿಯೂ ಅಲ್ಲಾಹು ನಿದ್ರಿಸುವುದಿಲ್ಲ, ಮತ್ತು ನಿದ್ರಿಸುವುದು ಅವನಿಗೆ ತಕ್ಕುದಲ್ಲ

Available translations

Choose an available translation of this Hadeeth

01

Hadeeth text

ಅಬೂ ಮೂಸಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಎದ್ದು ನಿಂತರು ಮತ್ತು ಐದು ಮಾತುಗಳನ್ನು ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ನಿದ್ರಿಸುವುದಿಲ್ಲ, ಮತ್ತು ನಿದ್ರಿಸುವುದು ಅವನಿಗೆ ತಕ್ಕುದಲ್ಲ. ಅವನು ತಕ್ಕಡಿಯನ್ನು ತಗ್ಗಿಸುತ್ತಾನೆ ಮತ್ತು ಅದನ್ನು ಏರಿಸುತ್ತಾನೆ. ಹಗಲಿನ ಕರ್ಮಗಳಿಗಿಂತ ಮೊದಲು ರಾತ್ರಿಯ ಕರ್ಮಗಳು ಅವನ ಕಡೆಗೆ ಏರಿಸಲ್ಪಡುತ್ತವೆ, ಮತ್ತು (ಮುಂದಿನ) ರಾತ್ರಿಯ ಕರ್ಮಗಳಿಗಿಂತ ಮೊದಲು ಹಗಲಿನ ಕರ್ಮಗಳು (ಅವನ ಕಡೆಗೆ ಏರಿಸಲ್ಪಡುತ್ತವೆ). ಅವನ ಪರದೆಯು 'ಬೆಳಕಾಗಿದೆ' — ಇನ್ನೊಂದು ವರದಿಯಲ್ಲಿ: ಬೆಂಕಿ ಎಂದಿದೆ — ಒಂದು ವೇಳೆ ಅವನು ಅದನ್ನು (ಪರದೆಯನ್ನು) ಸರಿಸಿದರೆ, ಅವನ ಮುಖದ ಪ್ರಕಾಶವು ಸೃಷ್ಟಿಗಳಲ್ಲಿ ಅವನ ದೃಷ್ಟಿಯು ತಲುಪುವವರೆಗಿನ ಎಲ್ಲವನ್ನೂ ಸುಟ್ಟುಹಾಕುತ್ತಿತ್ತು".
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳ ಮುಂದೆ ಪ್ರವಚನ ನೀಡಲು ನಿಂತರು ಮತ್ತು ಐದು ಪರಿಪೂರ್ಣ ವಾಕ್ಯಗಳನ್ನು ಹೇಳಿದರು, ಅವುಗಳೆಂದರೆ: ಮೊದಲನೆಯದು: ಅಲ್ಲಾಹು ನಿದ್ರಿಸುವುದಿಲ್ಲ. ಎರಡನೆಯದು: ನಿದ್ರೆಯು ಅವನ ಪಾಲಿಗೆ ಅಸಾಧ್ಯವಾದ ವಿಷಯವಾಗಿದೆ; ಏಕೆಂದರೆ ಅವನ ಅಸ್ತಿತ್ವ ಮತ್ತು ಜೀವಂತಿಕೆ ಪರಿಪೂರ್ಣವಾಗಿದೆ. ಮೂರನೆಯದು: ಖಂಡಿತವಾಗಿಯೂ ಅವನು (ಅಲ್ಲಾಹು) ತಕ್ಕಡಿಯನ್ನು ತಗ್ಗಿಸುತ್ತಾನೆ ಮತ್ತು ಅದನ್ನು ಏರಿಸುತ್ತಾನೆ. ದಾಸರ ಕರ್ಮಗಳು ಅವನ ಕಡೆಗೆ ಏರುವಾಗ ಅವುಗಳನ್ನು ತೂಗಲಾಗುತ್ತದೆ, ಮತ್ತು ಭೂಮಿಗೆ ಇಳಿಯುವ ಅವರ ರಿಝ್ಕ್ (ಉಪಜೀವನ/ಆಹಾರ) ಅನ್ನು ತೂಗಲಾಗುತ್ತದೆ. ಆದ್ದರಿಂದ ರಿಝ್ಕ್ ಎಂಬುದು ಪ್ರತಿಯೊಂದು ಸೃಷ್ಟಿಯ ಪಾಲಾಗಿದ್ದು, ಅಲ್ಲಾಹು ಅದನ್ನು ತಗ್ಗಿಸುವ ಮೂಲಕ ಕಡಿಮೆ ಮಾಡುತ್ತಾನೆ ಮತ್ತು ಅದನ್ನು ಏರಿಸುವ ಮೂಲಕ ವಿಸ್ತರಿಸುತ್ತಾನೆ. ನಾಲ್ಕನೆಯದು: ದಾಸರು ರಾತ್ರಿಯಲ್ಲಿ ಮಾಡಿದ ಕರ್ಮಗಳನ್ನು, ಅದರ ನಂತರದ ಹಗಲಿಗಿಂತ ಮೊದಲು ಅವನ ಕಡೆಗೆ ಏರಿಸಲಾಗುತ್ತದೆ. ಮತ್ತು ಹಗಲಿನಲ್ಲಿ ಮಾಡಿದ ಕರ್ಮಗಳನ್ನು, ಅದರ ನಂತರದ ರಾತ್ರಿಗಿಂತ ಮೊದಲು (ಅವನ ಕಡೆಗೆ ಏರಿಸಲಾಗುತ್ತದೆ). ಸಂರಕ್ಷಕ ದೇವದೂತರು ರಾತ್ರಿ ಕಳೆದ ನಂತರ ಹಗಲಿನ ಆರಂಭದಲ್ಲಿ ರಾತ್ರಿಯ ಕರ್ಮಗಳೊಂದಿಗೆ (ಮೇಲೆ) ಏರುತ್ತಾರೆ, ಮತ್ತು ಹಗಲು ಕಳೆದ ನಂತರ ರಾತ್ರಿಯ ಆರಂಭದಲ್ಲಿ ಹಗಲಿನ ಕರ್ಮಗಳೊಂದಿಗೆ ಏರುತ್ತಾರೆ. ಐದನೆಯದು: ಅವನನ್ನು ನೋಡುವುದನ್ನು ತಡೆಯುವ ಅವನ ಅಡ್ಡ ಪರದೆಯು (ಹಿಜಾಬ್) ಬೆಳಕು ಅಥವಾ ಬೆಂಕಿಯಾಗಿದೆ. ಒಂದು ವೇಳೆ ಅವನು ಅದನ್ನು ತೆರೆದರೆ, ಅವನ ಮುಖದ ಪ್ರಕಾಶ (ತೇಜಸ್ಸು) ಸೃಷ್ಟಿಗಳಲ್ಲಿ ಅವನ ದೃಷ್ಟಿ ತಲುಪುವವರೆಗಿನ ಎಲ್ಲವನ್ನೂ ಸುಟ್ಟುಹಾಕುತ್ತಿತ್ತು. 'ಸುಬುಹಾತ್' ಎಂದರೆ ಅವನ ಮುಖದ ಬೆಳಕು, ಗಾಂಭೀರ್ಯ ಮತ್ತು ಸೌಂದರ್ಯವಾಗಿದೆ. ಇದರ ಅರ್ಥವೇನೆಂದರೆ: ಅವನನ್ನು ನೋಡುವುದನ್ನು ತಡೆಯುವ ಅಡೆತಡೆಯನ್ನು, ಅಂದರೆ ಹಿಜಾಬ್ ಅನ್ನು ಅವನು ತೆಗೆದುಹಾಕಿ, ತನ್ನ ಸೃಷ್ಟಿಗಳಿಗೆ ಪ್ರತ್ಯಕ್ಷನಾದರೆ, ಅವನ ಮುಖದ ಪ್ರಕಾಶವು ಅವನ ದೃಷ್ಟಿ ತಲುಪುವವರೆಗಿನ ಸೃಷ್ಟಿಗಳನ್ನು ಸುಟ್ಟುಹಾಕುತ್ತಿತ್ತು; ಅದು ಸಮಸ್ತ ಸೃಷ್ಟಿಗಳಾಗಿವೆ; ಏಕೆಂದರೆ ಅಲ್ಲಾಹನ ದೃಷ್ಟಿಯು ಸರ್ವ ವಸ್ತುಗಳನ್ನು ಆವರಿಸಿಕೊಂಡಿದೆ.
03

Benefits

ಅಲ್ಲಾಹನಿಗೆ ನಿದ್ರೆ ಅಸಾಧ್ಯ ಎಂದು ವಿವರಿಸಲಾಗಿದೆ. ಏಕೆಂದರೆ ಅದು ನ್ಯೂನತೆಗಳಲ್ಲಿ ಒಂದಾಗಿದ್ದು, ಅಲ್ಲಾಹು ನ್ಯೂನತೆಗಳಿಂದ ಮುಕ್ತನಾಗಿದ್ದಾನೆ (ಪವಿತ್ರನಾಗಿದ್ದಾನೆ).
ಅಲ್ಲಾಹು ತಾನು ಇಚ್ಛಿಸಿದವರಿಗೆ ಗೌರವ ನೀಡುತ್ತಾನೆ ಮತ್ತು ತಾನು ಇಚ್ಛಿಸಿದವರನ್ನು ಅವಮಾನಗೊಳಿಸುತ್ತಾನೆ. ಅವನು ತನ್ನ ದಾಸರಲ್ಲಿ ತಾನು ಇಚ್ಛಿಸಿದವರಿಗೆ ಸನ್ಮಾರ್ಗ ನೀಡುತ್ತಾನೆ ಮತ್ತು ತಾನು ಇಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ.
ಪ್ರತಿ ಹಗಲು ಮತ್ತು ಪ್ರತಿ ರಾತ್ರಿ ಕರ್ಮಗಳು (ಅಮಲ್) ಅಲ್ಲಾಹನ ಕಡೆಗೆ ಏರಿಸಲ್ಪಡುತ್ತವೆ. ಇದರಲ್ಲಿ ದಾಸರು ತಮ್ಮ ಹಗಲು ಮತ್ತು ರಾತ್ರಿಗಳಲ್ಲಿ ಅಲ್ಲಾಹನ ಬಗ್ಗೆ ಜಾಗರೂಕರಾಗಿರಲು ಪ್ರೋತ್ಸಾಹವಿದೆ.
ಈ ಹದೀಸ್ ಅಲ್ಲಾಹನ ನ್ಯಾಯ ಮತ್ತು ಅವನ ಸೃಷ್ಟಿಗಳ ವಿಷಯಗಳಲ್ಲಿನ ಅವನ ಆಡಳಿತದ ಸೌಂದರ್ಯವನ್ನು ಸೂಚಿಸುತ್ತದೆ. ನಿಸ್ಸಂದೇಹವಾಗಿ ಇದು ಅವನ ಪರಿಪೂರ್ಣತೆಯ ಗುಣಲಕ್ಷಣಗಳಲ್ಲಿ ಒಂದಾಗಿದೆ.
ಅವನಿಗೆ 'ಹಿಜಾಬ್' (ಪರದೆ) ಇದೆ ಎಂದು ದೃಢೀಕರಿಸಲಾಗಿದೆ. ಅದು ಅವನ ಮತ್ತು ಅವನ ಸೃಷ್ಟಿಗಳ ನಡುವೆ ತಡೆಯಾಗಿರುವ ಬೆಳಕು. ಅದಿಲ್ಲದಿದ್ದರೆ ಅವರು ಸುಟ್ಟುಹೋಗುತ್ತಿದ್ದರು.
ಅಲ್-ಆಜುರ್ರಿ ಹೇಳುತ್ತಾರೆ: "ಸತ್ಯದ ಅನುಯಾಯಿಗಳು (ಅಹ್ಲುಲ್ ಹಕ್) ಅಲ್ಲಾಹನನ್ನು, ಅವನು ತನ್ನನ್ನು ತಾನು ವರ್ಣಿಸಿಕೊಂಡಂತೆಯೇ ವರ್ಣಿಸುತ್ತಾರೆ, ಮತ್ತು ಅವನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು ವರ್ಣಿಸಿದಂತೆ, ಮತ್ತು ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವನನ್ನು ವರ್ಣಿಸಿದಂತೆ ವರ್ಣಿಸುತ್ತಾರೆ. ಇದು ಯಾರು (ಸತ್ಯವನ್ನು) ಅನುಸರಿಸಿದರೋ ಮತ್ತು ಹೊಸದನ್ನು (ಬಿದ್ಅತ್) ಸೃಷ್ಟಿಸಲಿಲ್ಲವೋ ಅಂತಹ ವಿದ್ವಾಂಸರ ಮಝ್‌ಹಬ್ ಆಗಿದೆ". (ಅವರ ಮಾತು ಮುಗಿಯಿತು). ಆದ್ದರಿಂದ 'ಅಹ್ಲುಸ್ಸುನ್ನ'ದವರು (ಸತ್ಯವಿಶ್ವಾಸಿಗಳು), ಅಲ್ಲಾಹು ತನಗಾಗಿ ಸ್ಥಿರಪಡಿಸಿದ ಹೆಸರುಗಳು ಮತ್ತು ಗುಣಲಕ್ಷಣಗಳನ್ನು ಯಾವುದೇ ತಿರುಚುವಿಕೆ (ತಹ್ರೀಫ್), ನಿಷ್ಕ್ರಿಯಗೊಳಿಸುವಿಕೆ (ತಅತೀಲ್), ಸ್ವರೂಪ ನಿರ್ಧಾರ (ತಕ್ಯೀಫ್) ಅಥವಾ ಹೋಲಿಕೆ (ತಮ್ಸೀಲ್) ಇಲ್ಲದೆ ದೃಢೀಕರಿಸುತ್ತಾರೆ. ಅಲ್ಲಾಹು ತನ್ನಿಂದ ನಿರಾಕರಿಸಿದ್ದನ್ನು ಅವರು ಅಲ್ಲಾಹನಿಂದ ನಿರಾಕರಿಸುತ್ತಾರೆ, ಮತ್ತು ನಿರಾಕರಣೆ ಅಥವಾ ದೃಢೀಕರಣವಿಲ್ಲದ ವಿಷಯಗಳ ಬಗ್ಗೆ ಮೌನ ವಹಿಸುತ್ತಾರೆ. ಅಲ್ಲಾಹು ಹೇಳುತ್ತಾನೆ: “ಅವನಂತೆ ಯಾವುದೂ ಇಲ್ಲ ಮತ್ತು ಅವನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ”.
ಅವನ ಗುಣಲಕ್ಷಣವಾಗಿರುವ 'ಬೆಳಕು' (ನೂರ್), ಅವನು ಪರದೆಯಾಗಿ ಮಾಡಿಕೊಂಡಿರುವ ಬೆಳಕಿಗಿಂತ ಭಿನ್ನವಾಗಿದೆ. ಅವನು ಪರದೆಯಾಗಿ ಮಾಡಿಕೊಂಡಿರುವ ಬೆಳಕು ಸೃಷ್ಟಿಸಲ್ಪಟ್ಟ ಬೆಳಕು. ಆದರೆ ಅಲ್ಲಾಹನ (ಸ್ವಂತ) ಬೆಳಕು ಅವನಿಗೆ ಮತ್ತು ಅವನ ಸಾರಕ್ಕೆ ತಕ್ಕುದಾದ ಬೆಳಕಾಗಿದೆ, ಅವನಂತೆ ಯಾವುದೂ ಇಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಂಡಿದ್ದು ಕೇವಲ ಅಲ್ಲಾಹು ಮತ್ತು ಅವನ ದಾಸರ ನಡುವೆ ಇರುವ ಪರದೆಯನ್ನು (ಹಿಜಾಬ್) ಮಾತ್ರ.

Attribution

[رواه مسلم]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...