ಖಂಡಿತವಾಗಿಯೂ ಅಲ್ಲಾಹು ಅದರ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ. ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ ಮುಕ್ತಗೊಳಿಸಿದ್ದಾನೆ
Choose an available translation of this Hadeeth
Hadeeth text
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಬ್ಬ ಬಡ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ನನ್ನ ಬಳಿಗೆ ಬಂದಳು. ನಾನು ಅವಳಿಗೆ ಮೂರು ಖರ್ಜೂರಗಳನ್ನು ತಿನ್ನಲು ಕೊಟ್ಟೆನು. ಅವಳು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಖರ್ಜೂರವನ್ನು ಕೊಟ್ಟಳು. ಇನ್ನೊಂದು ಖರ್ಜೂರವನ್ನು ತಾನು ತಿನ್ನಲು ತನ್ನ ಬಾಯಿಯ ಕಡೆಗೆ ಎತ್ತಿದಳು. ಆಗ ಅವಳ ಇಬ್ಬರು ಹೆಣ್ಣು ಮಕ್ಕಳು ಅವಳಿಂದ ಆ (ಮೂರನೇ) ಖರ್ಜೂರವನ್ನು ಕೇಳಿದರು. ಆಗ ಅವಳು ತಾನು ತಿನ್ನಬೇಕೆಂದಿದ್ದ ಖರ್ಜೂರವನ್ನು ಎರಡು ಭಾಗ ಮಾಡಿ ಅವರಿಬ್ಬರಿಗೆ ಹಂಚಿದಳು. ಅವಳ ಈ ಕಾರ್ಯವು ನನಗೆ ಬಹಳ ಆಶ್ಚರ್ಯವನ್ನುಂಟುಮಾಡಿತು. ಅವಳು ಮಾಡಿದ್ದನ್ನು ನಾನು ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದೆನು. ಆಗ ಅವರು ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ಅದರ ಕಾರಣದಿಂದ ಅವಳಿಗೆ ಸ್ವರ್ಗವನ್ನು ಕಡ್ಡಾಯಗೊಳಿಸಿದ್ದಾನೆ. ಅಥವಾ ಅದರ ಕಾರಣದಿಂದ ಅವಳನ್ನು ನರಕದಿಂದ ಮುಕ್ತಗೊಳಿಸಿದ್ದಾನೆ".
Explanation
Benefits
ತಾಯಂದಿರಿಗೆ ಮಕ್ಕಳ ಮೇಲಿರುವ ಅತಿಯಾದ ಕರುಣೆ ಮತ್ತು ಅವರು ಕಷ್ಟಕ್ಕೊಳಗಾಗಬಹುದೆಂಬ ಭಯವನ್ನು ತಿಳಿಸಲಾಗಿದೆ.
ತನಗಿಂತ ಇತರರಿಗೆ ಆದ್ಯತೆ ನೀಡುವುದರ, ಚಿಕ್ಕ ಮಕ್ಕಳ ಮೇಲೆ ಕರುಣೆ ತೋರುವುದರ, ಮತ್ತು ಹೆಣ್ಣು ಮಕ್ಕಳೊಂದಿಗೆ ಹೆಚ್ಚಿನ ಉಪಕಾರ ಮತ್ತು ಮೃದುತ್ವದಿಂದ ವರ್ತಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಇವು ಸ್ವರ್ಗ ಪ್ರವೇಶಿಸುವ ಮತ್ತು ನರಕದಿಂದ ಮುಕ್ತಿ ಹೊಂದುವ ಕಾರಣಗಳಾಗಿವೆ.
ಸಣ್ಣ ಪ್ರಮಾಣವು ಅದು ತುಚ್ಛವಾಗಿದೆಯೆಂಬ ಕಾರಣದಿಂದ ದಾನ ಮಾಡದಂತೆ ತಡೆಯಬಾರದು. ಬದಲಿಗೆ, ದಾನ ಮಾಡುವವನು ತನಗೆ ಸಾಧ್ಯವಾದಷ್ಟನ್ನು, ಅದು ಕಡಿಮೆಯಿರಲಿ ಅಥವಾ ಹೆಚ್ಚಿರಲಿ, ದಾನ ಮಾಡಬೇಕು.
ಇದರಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಗಳ ಸ್ಥಿತಿ, ಮತ್ತು ಅವರ ಹಾಗೂ ಅವರ ಕುಟುಂಬದ ಜೀವನ ಹೇಗಿತ್ತು ಎಂಬುದು ತಿಳಿದುಬರುತ್ತದೆ – ಅವರ ಮನೆಯಲ್ಲಿ ಒಂದು ಅಥವಾ ಮೂರು ಖರ್ಜೂರಗಳನ್ನು ಹೊರತುಪಡಿಸಿ ತಿನ್ನಲು ಬೇರೇನೂ ಇರಲಿಲ್ಲ.
Attribution
Categories
Share hadeeth
Sharing options · 0 Total shares

