ನಿಮ್ಮಲ್ಲೊಬ್ಬರು ಮಸೀದಿಯನ್ನು ಪ್ರವೇಶಿಸುವಾಗ, 'ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್' (ಓ ಅಲ್ಲಾಹ್! ನಿನ್ನ ದಯೆಯ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಬೇಕು ಮತ್ತು ಹೊರಬರುವಾಗ, 'ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್' (ಓ ಅಲ್ಲಾಹ್! ನಿನ್ನ ಔದಾರ್ಯದಿಂದ ನಾನು ನಿನ್ನಲ್ಲಿ ಬೇಡುತ್ತೇನೆ) ಎಂದು ಹೇಳಬೇಕು
Choose an available translation of this Hadeeth
Hadeeth text
ಅಬೂ ಹುಮೈದ್ ಅಥವಾ ಅಬೂ ಉಸೈದ್ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ಮಸೀದಿಯನ್ನು ಪ್ರವೇಶಿಸುವಾಗ, 'ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್' (ಓ ಅಲ್ಲಾಹ್! ನಿನ್ನ ದಯೆಯ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಬೇಕು ಮತ್ತು ಹೊರಬರುವಾಗ, 'ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್' (ಓ ಅಲ್ಲಾಹ್! ನಿನ್ನ ಔದಾರ್ಯದಿಂದ ನಾನು ನಿನ್ನಲ್ಲಿ ಬೇಡುತ್ತೇನೆ) ಎಂದು ಹೇಳಬೇಕು."
Explanation
Benefits
ಮಸೀದಿಯನ್ನು ಪ್ರವೇಶಿಸುವಾಗ ವಿಶೇಷವಾಗಿ ಕರುಣೆಯ ಬಗ್ಗೆ ಮತ್ತು ಮಸೀದಿಯಿಂದ ಹೊರಬರುವಾಗ ವಿಶೇಷವಾಗಿ ಉದಾರತೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಏಕೆಂದರೆ ಮಸೀದಿಯನ್ನು ಪ್ರವೇಶಿಸುವವನು ಅಲ್ಲಾಹನಿಗೆ ಮತ್ತು ಅವನ ಸ್ವರ್ಗಕ್ಕೆ ಹತ್ತಿರವಾಗಲು ಬಯಸುತ್ತಾನೆ. ಆದ್ದರಿಂದ ಇಲ್ಲಿ ಅಲ್ಲಾಹನ ದಯೆಯನ್ನು ಪ್ರಸ್ತಾಪಿಸಿರುವುದು ಹೆಚ್ಚು ಸೂಕ್ತವಾಗಿದೆ. ಮಸೀದಿಯಿಂದ ಹೊರಬರುವವನು ನಂತರ ಭೂಮಿಯಲ್ಲಿ ಉಪಜೀವನವನ್ನು ಹುಡುಕುತ್ತಾ ಹೊರಡುತ್ತಾನೆ. ಆದ್ದರಿಂದ ಇಲ್ಲಿ ಅಲ್ಲಾಹನ ಉದಾರತೆಯನ್ನು ಪ್ರಸ್ತಾಪಿಸಿರುವುದು ಹೆಚ್ಚು ಸೂಕ್ತವಾಗಿದೆ.
ಮಸೀದಿಯನ್ನು ಪ್ರವೇಶಿಸಲು ಬಯಸಿದಾಗ ಮತ್ತು ಮಸೀದಿಯಿಂದ ಹೊರಬರಲು ಬಯಸಿದಾಗ ಈ ಪ್ರಾರ್ಥನೆಗಳನ್ನು ಪಠಿಸಬೇಕಾಗಿದೆ.
Attribution
Categories
Share hadeeth
Sharing options · 0 Total shares

