ಖಂಡಿತವಾಗಿಯೂ ಕುರ್‌ಆನ್ ಕಂಠಪಾಠ ಮಾಡಿದವನ ಉದಾಹರಣೆಯು, ಕಟ್ಟಿಹಾಕಲಾದ ಒಂಟೆಗಳ ಮಾಲೀಕನಂತಿದೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ, ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆದರೆ, ಅವನು ಅವುಗಳನ್ನು (ಕಟ್ಟು ಬಿಚ್ಚಿ) ಬಿಟ್ಟರೆ, ಅವು (ತಪ್ಪಿಸಿಕೊಂಡು) ಹೊರಟುಹೋಗುತ್ತವೆ
Choose an available translation of this Hadeeth
Hadeeth text
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಕುರ್‌ಆನ್ ಕಂಠಪಾಠ ಮಾಡಿದವನ ಉದಾಹರಣೆಯು, ಕಟ್ಟಿಹಾಕಲಾದ ಒಂಟೆಗಳ ಮಾಲೀಕನಂತಿದೆ. ಅವನು ಅವುಗಳ ಬಗ್ಗೆ ನಿರಂತರ ನಿಗಾ ವಹಿಸಿದರೆ, ಅವುಗಳನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆದರೆ, ಅವನು ಅವುಗಳನ್ನು (ಕಟ್ಟು ಬಿಚ್ಚಿ) ಬಿಟ್ಟರೆ, ಅವು (ತಪ್ಪಿಸಿಕೊಂಡು) ಹೊರಟುಹೋಗುತ್ತವೆ".
Explanation
Benefits
ಕುರ್‌ಆನ್ ಅನ್ನು ನಿರಂತರವಾಗಿ ಪಠಿಸುವುದರಿಂದ ನಾಲಿಗೆಯು ಅದಕ್ಕೆ ಒಪ್ಪಿಕೊಳ್ಳುತ್ತದೆ ಮತ್ತು ಅದನ್ನು ಪಠಿಸುವುದು ಸುಲಭವಾಗುತ್ತದೆ. ಒಂದು ವೇಳೆ ಅದನ್ನು ಪಠಿಸುವುದ್ನು ತ್ಯಜಿಸಿದರೆ, ಪಠಣವು ಭಾರವಾಗುತ್ತದೆ ಮತ್ತು ಕಷ್ಟಕರವಾಗುತ್ತದೆ.
ಖಾದಿ (ಇಯಾದ್) ಹೇಳುತ್ತಾರೆ: "ಕುರ್‌ಆನ್‌ನ ಸಂಗಾತಿ” ಎಂದರೆ, ಅದಕ್ಕೆ ಆಪ್ತನಾಗಿರುವವನು. “ಸಂಗಾತಿತ್ವ” ಎಂದರೆ ಸ್ನೇಹ ಬೆಳೆಸುವುದು. ಈ ಅರ್ಥದಿಂದಲೇ "ಇಂಥವನು ಇಂಥವನ ಸಂಗಾತಿ", "ಸ್ವರ್ಗದ ಸಂಗಾತಿಗಳು" ಮತ್ತು "ನರಕದ ಸಂಗಾತಿಗಳು" ಎಂಬ ಪದಗಳು ಬಂದಿವೆ.
ಉದಾಹರಣೆಗಳನ್ನು ನೀಡುವುದು ಧರ್ಮಪ್ರಚಾರದ ಶೈಲಿಗಳಲ್ಲಿ ಒಂದಾಗಿದೆ.
ಇಬ್ನ್ ಹಜರ್ ಹೇಳುತ್ತಾರೆ: ಇಲ್ಲಿ ಒಂಟೆಗಳನ್ನು ವಿಶೇಷವಾಗಿ ಉಲ್ಲೇಖಿಸಿದ್ದು ಏಕೆಂದರೆ, ಸಾಕುಪ್ರಾಣಿಗಳ ಪೈಕಿ ಅವು ಅತ್ಯಂತ ಹೆಚ್ಚು ತಪ್ಪಿಸಿಕೊಳ್ಳುವ ಸ್ವಭಾವವನ್ನು ಹೊಂದಿವೆ. ಅವೇನಾದರೂ ಒಮ್ಮೆ ತಪ್ಪಿಸಿಕೊಂಡರೆ ಅವುಗಳನ್ನು ಮರಳಿ ಪಡೆಯುವುದು ಕಷ್ಟಕರ.
Attribution
Categories
Share hadeeth
Sharing options · 0 Total shares

