ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನಿಮ್ಮ ಪಾಪಗಳನ್ನು ಅಳಿಸುವ ಮತ್ತು ನಿಮ್ಮ ಪದವಿಗಳನ್ನು ಏರಿಸುವ ಒಂದು ವಿಷಯದ ಬಗ್ಗೆ ನಾನು ನಿಮಗೆ ತಿಳಿಸಿಕೊಡಲೇ?" ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ತಿಳಿಸಿಕೊಡಿ." ಅವರು ಹೇಳಿದರು: "ಕಷ್ಟ ಕಾಲದಲ್ಲಿ ಅತ್ಯುತ್ತಮವಾಗಿ ವುದೂ ನಿರ್ವಹಿಸುವುದು, ಮಸೀದಿಗೆ ಅತ್ಯಧಿಕ ಹೆಜ್ಜೆ ಹಾಕುವುದು ಮತ್ತು ಒಂದು ನಮಾಝ್ ನಿರ್ವಹಿಸಿದ ಬಳಿಕ ಇನ್ನೊಂದು ನಮಾಝನ್ನು ಕಾಯುವುದು. ಇದೇ ರಿಬಾತ್ ಆಗಿದೆ."
Explanation
ಸಹಾಬಿಗಳು ಹೇಳಿದರು: ಹೌದು ನಾವು ಅದನ್ನು ಬಯಸುತ್ತೇವೆ. ಅವರು (ಪ್ರವಾದಿ) ಹೇಳಿದರು:
ಮೊದಲನೆಯದಾಗಿ, ಚಳಿ, ನೀರಿನ ಅಭಾವ, ದೈಹಿಕ ನೋವು ಮುಂತಾದ ಕಷ್ಟಗಳ ಸಂದರ್ಭದಲ್ಲಿ ಪೂರ್ಣವಾಗಿ ವುದೂ ನಿರ್ವಹಿಸಲು ನಿಗಾ ವಹಿಸುವುದು.
ಎರಡನೆಯದಾಗಿ, ಮಸೀದಿಗೆ ಅತ್ಯಧಿಕ ಹೆಜ್ಜೆ ಹಾಕುವುದು. ಹೆಜ್ಜೆ ಎಂದರೆ ಎರಡು ಪಾದಗಳ ನಡುವಿನ ಅಂತರ. ಇದು ಮನೆ ಮಸೀದಿಯಿಂದ ದೂರವಿರುವುದರಿಂದ ಮತ್ತು ಪದೇ ಪದೇ ಮಸೀದಿಗೆ ತೆರಳುವುದರಿಂದ ಸಾಧ್ಯವಾಗುತ್ತದೆ.
ಮೂರನೆಯದಾಗಿ, ನಮಾಝ್‌ನ ಸಮಯವನ್ನು ಕಾಯವುದು, ಹೃದಯವನ್ನು ನಮಾಝಿನೊಂದಿಗೆ ಜೋಡಿಸುವುದು, ಅದಕ್ಕಾಗಿ ಸಿದ್ಧಗೊಳ್ಳುವುದು ಮತ್ತು ಜಮಾಅತ್ ಅನ್ನು ಕಾಯುತ್ತಾ ನಮಾಝ್‌ಗಾಗಿ ಮಸೀದಿಯಲ್ಲಿ ಕುಳಿತುಕೊಳ್ಳುವುದು. ನಮಾಝನ್ನು ನಿರ್ವಹಿಸಿದ ನಂತರ ಅಲ್ಲೇ ಕುಳಿತು ಇನ್ನೊಂದು ನಮಾಝ್‌ಗಾಗಿ ಕಾಯುವುದು.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಈ ವಿಷಯಗಳೇ ನಿಜವಾದ ರಿಬಾತ್ (ಗಡಿಯಲ್ಲಿ ಶತ್ರುಗಳಿಂದ ದೇಶವನ್ನು ಕಾಯುವುದು). ಏಕೆಂದರೆ, ಇದು ಶೈತಾನನು ಮನಸ್ಸನ್ನು ಪ್ರವೇಶಿಸುವ ದಾರಿಗಳನ್ನು ಮುಚ್ಚುತ್ತದೆ, ಸ್ವೇಚ್ಛೆಗಳನ್ನು ನಿಗ್ರಹಿಸುತ್ತದೆ ಮತ್ತು ಶೈತಾನನ ಪಿಸುಮಾತುಗಳನ್ನು ಸ್ವೀಕರಿಸದಂತೆ ಮನಸ್ಸನ್ನು ತಡೆಯುತ್ತದೆ. ಇದರಿಂದ ಅಲ್ಲಾಹನ ಸೈನ್ಯವು ಶೈತಾನನ ಯೋಧರನ್ನು ಸೋಲಿಸುತ್ತದೆ. ಇದೇ ಅತಿದೊಡ್ಡ ಜಿಹಾದ್. ಇದು ಶತ್ರುಗಳ ಪ್ರವೇಶವನ್ನು ತಡೆಯುವುದಕ್ಕಾಗಿ ಗಡಿಯಲ್ಲಿ ಕಾವಲು ಕಾಯವುದರ ಸ್ಥಾನವನ್ನು ಹೊಂದಿದೆ.
Benefits
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತ್ಯುತ್ತಮ ಪ್ರಸ್ತುತಿಯನ್ನು ಮತ್ತು ಅವರು ತಮ್ಮ ಸಹಚರರಿಗೆ ನೀಡಿದ ಸ್ಫೂರ್ತಿಯನ್ನು ತಿಳಿಸಲಾಗಿದೆ. ಅದು ಹೇಗೆಂದರೆ, ಅವರು ಪ್ರಶ್ನೋತ್ತರ ರೂಪದಲ್ಲಿ ಅತಿದೊಡ್ಡ ಪ್ರತಿಫಲದಿಂದಲೇ ಆರಂಭಿಸಿದ್ದಾರೆ. ಇದು ಬೋಧನಾ ಶೈಲಿಗಳಲ್ಲಿ ಒಂದಾಗಿದೆ.
ವಿಷಯವನ್ನು ಪ್ರಶ್ನೋತ್ತರ ರೂಪದಲ್ಲಿ ಪ್ರಸ್ತುತಪಡಿಸುವ ಒಂದು ಪ್ರಯೋಜನವೇನೆಂದರೆ, ಸಂಕ್ಷಿಪ್ತವಾಗಿ ಮತ್ತು ವಿಸ್ತಾರವಾಗಿ ಮಾತನಾಡುವ ನಿಯಮದ ಪ್ರಕಾರ, ಇದರಿಂದ ಮಾತುಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.
ನವವಿ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ) ಹೇಳಿದರು: "ಅದೇ ರಿಬಾತ್" ಎಂದರೆ, ಅದೇ ಅಪೇಕ್ಷಿತ ರಿಬಾತ್ ಎಂದರ್ಥ. ರಿಬಾತ್‌ನ ಮೂಲ ಅರ್ಥವು ಒಂದು ವಸ್ತುವನ್ನು ಹಿಡಿದಿಡುವುದು. ಅಂದರೆ ಮನಸ್ಸನ್ನು ಈ ಅನುಸರಣಾ ಕರ್ಮಗಳಲ್ಲಿ ಹಿಡಿದಿಡುವುದು. ಜಿಹಾದ್ ಎಂದರೆ ಆತ್ಮದ ವಿರುದ್ಧ ಹೋರಾಡುವುದು ಎಂದು ಹೇಳಲಾಗಿರುವಂತೆ ಇದನ್ನು ಅತಿಶ್ರೇಷ್ಠ ರಿಬಾತ್ ಎಂದು ಹೇಳಲಾಗಿರಬಹುದು. ಇದರ ಅರ್ಥ ಇದು ಸುಲಭಸಾಧ್ಯವಾದ ರಿಬಾತ್ ಆಗಿದೆ ಎಂದಾಗಿರಬಹುದು. ಅಂದರೆ, ಇದು ರಿಬಾತ್‌ನ ಅನೇಕ ವಿಧಗಳಲ್ಲಿ ಒಂದಾಗಿದೆ.
"ರಿಬಾತ್" ಅನ್ನು ಪುನರಾವರ್ತಿಸಲಾಗಿದೆ ಮತ್ತು 'ಅಲ್' ಸೇರಿಸಿ "ಅರ್‍ರಿಬಾತ್" ಎಂದು ಹೇಳಲಾಗಿದೆ. ಇದು ಈ ಕರ್ಮಗಳನ್ನು ಗೌರವಿಸುವ ಉದ್ದೇಶದಿಂದಾಗಿದೆ.
Attribution
Categories
Share hadeeth
Sharing options · 0 Total shares

