ಸೂರ್ಯ ಉದಯವಾಗುವ ಎಲ್ಲಾ ದಿನಗಳಲ್ಲೂ ಮನುಷ್ಯನ ದೇಹದ ಎಲ್ಲಾ ಸಂಧಿಗಳಿಗೂ ದಾನ ನೀಡಬೇಕಾಗಿದೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜನರ ಪ್ರತಿಯೊಂದು ಕೀಲು (ಮೂಳೆಯ ಸಂಧಿ) ಯ ಮೇಲೂ, ಸೂರ್ಯನು ಉದಯಿಸುವ ಪ್ರತಿಯೊಂದು ದಿನವೂ ಸದಕಾ (ದಾನ ಮಾಡುವುದು) ಕಡ್ಡಾಯವಾಗಿದೆ. ಇಬ್ಬರ ನಡುವೆ ನ್ಯಾಯ ತೀರ್ಮ…

