ನನಗೂ ಈ ಪ್ರಪಂಚಕ್ಕೂ ಏನು ಸಂಬಂಧ? ನಾನು ಈ ಪ್ರಪಂಚದಲ್ಲಿ ಒಬ್ಬ ಸವಾರನಂತೆ (ಜೀವಿಸಬೇಕಾದವನು). ಅವನು (ಸ್ವಲ್ಪ ಹೊತ್ತು) ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು, ನಂತರ ಅದನ್ನು ಬಿಟ್ಟು ಹೊರಟುಹೋಗುತ್ತಾನೆ
ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಚಾಪೆಯ ಮೇಲೆ ಮಲಗಿದ್ದರು. ಅವರು ಎದ್ದಾಗ, ಅದು (ಚಾಪೆ) ಅವರ ಪಾರ್ಶ್ವದ ಮೇಲೆ ಅಚ್ಚು ಮೂಡಿಸಿತ್ತು. ಆಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ,…

