“ಹಾಜಿಗಳಿಗೆ ನೀರು ಕುಡಿಸುವುದನ್ನು ಮತ್ತು ಮಸ್ಜಿದುಲ್ ಹರಾಮ್ ಅನ್ನು ನಿರ್ವಹಿಸುವುದನ್ನು, ಅಲ್ಲಾಹನ ಮತ್ತು ಪರಲೋಕದ ಮೇಲೆ ವಿಶ್ವಾಸವಿಟ್ಟವರ (ಕಾರ್ಯಕ್ಕೆ) ನೀವು ಸಮಾನವಾಗಿಸಿದಿರೇನು?…” [ತೌಬಾ: 19] ವಚನದ ಕೊನೆಯವರೆಗೆ
ನುಅಮಾನ್ ಇಬ್ನ್ ಬಶೀರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಿಂಬರ್ (ಪ್ರವಚನ ಪೀಠ) ಬಳಿ ಇದ್ದೆ. ಆಗ ಒಬ್ಬ ವ್ಯಕ್ತಿ ಹೇಳಿದರು: "ನಾನು ಇಸ್ಲಾಂ ಸ್ವೀಕರಿಸಿದ ನಂತರ, ಹಾಜಿಗಳಿಗೆ (ಹಜ್ ಯಾತ್ರಿಕರಿಗೆ) ನೀರು ಕುಡ…

