ಜನರು ದಬ್ಬಾಳಿಕೆ ಮಾಡುವವನನ್ನು ನೋಡಿಯೂ ಅವನನ್ನು ತಡೆಯದಿದ್ದರೆ, ಅಲ್ಲಾಹು ತನ್ನ ಕಡೆಯ ಶಿಕ್ಷೆಯಿಂದ ಅವರೆಲ್ಲರನ್ನೂ ಆವರಿಸಿಕೊಳ್ಳಬಹುದು
ಅಬೂಬಕರ್ ಸಿದ್ದೀಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಓ ಜನರೇ! ನೀವು ಈ ವಚನವನ್ನು ಪಠಿಸುತ್ತೀರಿ: "ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಜಾಗರೂಕರಾಗಿರಿ. ನೀವು ಸನ್ಮಾರ್ಗಿಗಳಾದರೆ, ದುರ್ಮಾರ್ಗದಲ್ಲಿರುವವರು ನಿಮಗೆ ಯಾವುದೇ ತೊಂದರೆ ಮಾಡಲಾರರು." ಆದರೆ, ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವ…

