ಅಲ್ಲಾಹು ಹೇಳುತ್ತಾನೆ: ಪುನರುತ್ಥಾನದ ದಿನ ಮೂರು ವಿಧದ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ಹೇಳುತ್ತಾನೆ: ಪುನರುತ್ಥಾನದ ದಿನ ಮೂರು ವಿಧದ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ: ನನ್ನ ಹೆಸರಿನಲ್ಲಿ ಪ್ರಮಾಣ ಮಾಡಿ (ಒಪ್ಪಂದ ಮಾಡಿಕೊಂಡು) ನಂತರ ದ್ರೋಹ ಮಾಡಿದವನು; ಸ್…

