افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#8883[صحيح]
HadeethEnc · 1.36.0

ಯಾವುದೇ ಮನುಷ್ಯನು ಇನ್ನೊಬ್ಬನನ್ನು ಫಾಸಿಕ್ (ದುಷ್ಕರ್ಮಿ) ಎಂದು ಆರೋಪಿಸಬಾರದು, ಅಥವಾ ಸತ್ಯನಿಷೇಧಿಯೆಂದು ಆರೋಪಿಸಬಾರದು. ಏಕೆಂದರೆ, ಆ ವ್ಯಕ್ತಿ ಅವನು ಹೇಳಿದಂತೆ ಇಲ್ಲದಿದ್ದರೆ, ಅದು ಹೇಳಿದವನಿಗೆ ಮರಳುತ್ತದೆ

Available translations

Choose an available translation of this Hadeeth

01

Hadeeth text

ಅಬೂ ದರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾವುದೇ ಮನುಷ್ಯನು ಇನ್ನೊಬ್ಬನನ್ನು ಫಾಸಿಕ್ (ದುಷ್ಕರ್ಮಿ) ಎಂದು ಆರೋಪಿಸಬಾರದು, ಅಥವಾ ಸತ್ಯನಿಷೇಧಿಯೆಂದು ಆರೋಪಿಸಬಾರದು. ಏಕೆಂದರೆ, ಆ ವ್ಯಕ್ತಿ ಅವನು ಹೇಳಿದಂತೆ ಇಲ್ಲದಿದ್ದರೆ, ಅದು ಹೇಳಿದವನಿಗೆ ಮರಳುತ್ತದೆ."
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸುವುದೇನೆಂದರೆ, ಯಾರಾದರೂ ಇನ್ನೊಬ್ಬ ವ್ಯಕ್ತಿಯನ್ನು "ನೀನು ದುಷ್ಕರ್ಮಿ" ಅಥವಾ "ನೀನು ಸತ್ಯನಿಷೇಧಿ" ಎಂದು ಹೇಳಿದಾಗ, ಆತ ಇವನು ಹೇಳಿದಂತೆ ಇಲ್ಲದಿದ್ದರೆ, ಇವನು ಹೇಳಿದ್ದಕ್ಕೆ ಇವನೇ ಅರ್ಹನಾಗುತ್ತಾನೆ, ಮತ್ತು ಇವನು ಹೇಳಿದ್ದು ಇವನಿಗೇ ಮರಳುತ್ತದೆ. ಇನ್ನು ಆತ ಇವನು ಹೇಳಿದಂತೆ ಇದ್ದರೆ, ಇವನು ಹೇಳಿದ್ದು ಇವನಿಗೆ ಮರಳುವುದಿಲ್ಲ. ಏಕೆಂದರೆ ಇವನು ಹೇಳಿದ್ದು ಸತ್ಯವಾಗಿತ್ತು.
03

Benefits

ಸ್ಪಷ್ಟ ಧಾರ್ಮಿಕ ಪುರಾವೆಯಿಲ್ಲದೆ ಜನರ ಮೇಲೆ ಸತ್ಯನಿಷೇಧ (ಕುಫ್ರ್) ಅಥವಾ ದುಷ್ಕರ್ಮ (ಫಿಸ್ಕ್) ಆರೋಪಿಸುವುದನ್ನು ನಿಷೇಧಿಸಲಾಗಿದೆ.
ಜನರ ಬಗ್ಗೆ ತೀರ್ಪು ನೀಡುವ ಮೊದಲು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇಬ್ನ್ ದಕೀಕುಲ್ ಈದ್ ಹೇಳಿದರು: "ಒಬ್ಬ ಮುಸಲ್ಮಾನನ್ನು ಸತ್ಯನಿಷೇಧಿ ಎಂದು ಅನ್ಯಾಯವಾಗಿ ಘೋಷಿಸುವವರಿಗೆ, ಇದು ಗಂಭೀರ ಎಚ್ಚರಿಕೆಯಾಗಿದೆ. ಇದು ಆರೋಪದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ."
ಇಬ್ನ್ ಹಜರ್ ಅಸ್ಕಲಾನಿ ಹೇಳಿದರು: "ಆದರೆ, ಒಬ್ಬನನ್ನು ನೀನು ದುಷ್ಕರ್ಮಿ ಎಂದು ಆರೋಪಿಸುವುದರಿಂದ ಅವನು ದುಷ್ಕರ್ಮಿ ಅಥವಾ ಸತ್ಯನಿಷೇಧಿಯಾಗುವುದಿಲ್ಲ ಎಂಬುದು ಅವನು ಒಂದು ದೃಷ್ಟಿಯಿಂದ ಪಾಪಿಯಾಗುವುದಿಲ್ಲ ಎಂದರ್ಥವಲ್ಲ. ಬದಲಿಗೆ ಈ ವಿಷಯವನ್ನು ವಿವರಿಸಬೇಕಾಗುತ್ತದೆ: ಒಬ್ಬ ವ್ಯಕ್ತಿಯ ತಪ್ಪುಗಳನ್ನು ತಿಳಿಸಿಕೊಟ್ಟು ಅವನಿಗೆ ಅಥವಾ ಇತರರಿಗೆ ಬುದ್ಧಿವಾದ ಹೇಳುವುದಾದರೆ ಅದಕ್ಕೆ ಅನುಮತಿಯಿದೆ. ಆದರೆ ಒಬ್ಬ ವ್ಯಕ್ತಿಯನ್ನು ಅವಮಾನಿಸಲು, ಅವನ ತಪ್ಪನ್ನು ಬಹಿರಂಗಗೊಳಿಸಲು ಮತ್ತು ಅವನಿಗೆ ತೊಂದರೆ ನೀಡುವುದನ್ನು ಮಾತ್ರ ಉದ್ದೇಶಿಸಿದ್ದರೆ, ಅದಕ್ಕೆ ಅನುಮತಿಯಿಲ್ಲ. ಏಕೆಂದರೆ ಬುದ್ಧಿವಾದ ಹೇಳುವಾಗ, ದೋಷಗಳನ್ನು (ಇತರರಿಗೆ ತಿಳಿಯದಂತೆ) ಮರೆಮಾಚಬೇಕು, ತಿಳುವಳಿಕೆ ನೀಡಬೇಕು ಮತ್ತು ಉತ್ತಮ ಉಪದೇಶ ನೀಡಬೇಕು. ಮೃದುವಾಗಿ ಅದನ್ನು ಮಾಡಲು ಸಾಧ್ಯವಿದ್ದರೆ ಹಿಂಸಾತ್ಮಕವಾಗಿ ಅದನ್ನು ಮಾಡಬಾರದು. ಏಕೆಂದರೆ ಅದು ತಪ್ಪಾದ ಕೆಲಸದಲ್ಲಿ ಮುಂದುವರಿಯಲು ಮತ್ತು ಪಟ್ಟುಹಿಡಿಯಲು ಕಾರಣವಾಗಬಹುದು. ಜನರಲ್ಲಿ ಹೆಚ್ಚಿನವರ ಸ್ವಭಾವದಲ್ಲಿ ಈ ಅಂಶವನ್ನು ಕಾಣಬಹುದು. ವಿಶೇಷವಾಗಿ ಬುದ್ಧಿವಾದ ಹೇಳುವವನು ಬುದ್ಧಿವಾದ ಸ್ವೀಕರಿಸುವವನಿಗಿಂತ ಕೆಳಗಿನ ಸ್ಥಾನದಲ್ಲಿದ್ದರೆ.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...