ಖಂಡಿತವಾಗಿಯೂ ಅಲ್ಲಾಹು ನಿಮಗೆ ಮೂರು ವಿಷಯಗಳನ್ನು ಇಷ್ಟಪಡುತ್ತಾನೆ ಮತ್ತು ನಿಮಗೆ ಮೂರು ವಿಷಯಗಳನ್ನು ದ್ವೇಷಿಸುತ್ತಾನೆ
Choose an available translation of this Hadeeth
Hadeeth text
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ನಿಮಗೆ ಮೂರು ವಿಷಯಗಳನ್ನು ಇಷ್ಟಪಡುತ್ತಾನೆ ಮತ್ತು ನಿಮಗೆ ಮೂರು ವಿಷಯಗಳನ್ನು ದ್ವೇಷಿಸುತ್ತಾನೆ. ಅವನು ನಿಮಗೆ ಇಷ್ಟಪಡುವ ವಿಷಯಗಳೆಂದರೆ: ನೀವು ಅವನನ್ನು (ಮಾತ್ರ) ಆರಾಧಿಸುವುದು ಹಾಗೂ ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡದಿರುವುದು, ನೀವೆಲ್ಲರೂ ಒಗ್ಗೂಡಿ ಅಲ್ಲಾಹನ ಹಗ್ಗವನ್ನು (ಧರ್ಮವನ್ನು) ಗಟ್ಟಿಯಾಗಿ ಹಿಡಿದುಕೊಳ್ಳುವುದು ಮತ್ತು ನೀವು ಭಿನ್ನರಾಗದಿರುವುದು. ಅವನು ನಿಮಗೆ ದ್ವೇಷಿಸುವ ವಿಷಯಗಳೆಂದರೆ: 'ಹೀಗೆ ಹೇಳಲಾಯಿತು ಹಾಗೆ ಹೇಳಲಾಯಿತು' ಎಂಬ ಅನಗತ್ಯ ಮಾತುಗಳನ್ನು ಹೇಳುವುದು, ಅತಿಯಾದ ಪ್ರಶ್ನೆಗಳನ್ನು ಕೇಳುವುದು, ಮತ್ತು ಸಂಪತ್ತನ್ನು ವ್ಯರ್ಥ ಮಾಡುವುದು".
Explanation
Benefits
ಅಲ್ಲಾಹನ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಪ್ರೋತ್ಸಾಹಿಸಲಾಗಿದೆ; ಏಕೆಂದರೆ ಅದರಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯವಿದೆ.
ಜಮಾಅತ್ (ಸಂಘಟಿತ) ಅನ್ನು ಪ್ರೋತ್ಸಾಹಿಸಲಾಗಿದೆ. ಅದಕ್ಕೆ ಅಂಟಿಕೊಂಡಿರಲು ಹಾಗೂ ಒಗ್ಗಟ್ಟಾಗಿರಲು ಆದೇಶಿಸಲಾಗಿದೆ. ಅದರ ವಿರುದ್ಧವಾದ ಭಿನ್ನಾಭಿಪ್ರಾಯ ಮತ್ತು ಒಳಜಗಳಗಳನ್ನು ನಿಷೇಧಿಸಲಾಗಿದೆ.
ಸಂಬಂಧಿಸದ ವಿಷಯಗಳಲ್ಲಿ ಅತಿಯಾಗಿ ಮಾತನಾಡುವುದನ್ನು ನಿಷೇಧಿಸಲಾಗಿದೆ; ಏಕೆಂದರೆ ಅದು ಅನುಮತಿಯಿರುವ ವಿಷಯದಲ್ಲಾಗಿದ್ದರೆ ಅದರಿಂದ ಸಮಯವು ವ್ಯರ್ಥವಾಗುತ್ತದೆ, ಮತ್ತು ಅದು ನಿಷಿದ್ಧವಾದ ವಿಷಯದಲ್ಲಾಗಿದ್ದರೆ ಅದರಲ್ಲಿ ಅನೇಕ ಪಾಪಗಳಿರುತ್ತವೆ.
ಜನರ (ಖಾಸಗಿ) ವಿಷಯಗಳ ಬಗ್ಗೆ ಚರ್ಚಿಸುವುದು, ಅವರ ಪರಿಸ್ಥಿತಿಗಳನ್ನು ತನಿಖೆ ಮಾಡುವುದು ಮತ್ತು ಅವರ ಮಾತು ಹಾಗೂ ಕೃತ್ಯಗಳನ್ನು ಇತರರಿಗೆ ವರದಿ ಮಾಡುವುದನ್ನು ತ್ಯಜಿಸಬೇಕೆಂದು ತಿಳಿಸಲಾಗಿದೆ.
ಜನರ ಮುಂದೆ ಅತಿಯಾಗಿ ಕೈಯೊಡ್ಡುವುದನ್ನು ನಿಷೇಧಿಸಲಾಗಿದೆ.
ಸಂಪತ್ತನ್ನು ವ್ಯರ್ಥ ಮಾಡುವುದನ್ನು ನಿಷೇಧಿಸಲಾಗಿದೆ. ಸಂಪತ್ತನ್ನು ಸಂರಕ್ಷಿಸಲು ಮತ್ತು ಪ್ರಯೋಜನಕಾರಿ ವಿಷಯಗಳಲ್ಲಿ ತೊಡಗಿಸಲು ಪ್ರೋತ್ಸಾಹಿಸಲಾಗಿದೆ.
Attribution
Categories
Share hadeeth
Sharing options · 0 Total shares

