ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ
Choose an available translation of this Hadeeth
Hadeeth text
ಸಹ್ಲ್ ಬಿನ್ ಸಅದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ತುಚ್ಚವಾಗಿ ಕಾಣುವ (ಚಿಕ್ಕದೆಂದು ಭಾವಿಸುವ) ಪಾಪಗಳ ಬಗ್ಗೆ ಎಚ್ಚರವಾಗಿರಿ. ಏಕೆಂದರೆ, ತುಚ್ಛವಾಗಿ ಕಾಣುವ ಪಾಪಗಳ ಉದಾಹರಣೆಯು ಒಂದು ಕಣಿವೆಯ ಒಳಭಾಗದಲ್ಲಿ ಇಳಿದುಕೊಂಡ ಒಂದು ಗುಂಪು ಜನರಂತಿದೆ. ಅವರಲ್ಲೊಬ್ಬನು ಒಂದು ಕಡ್ಡಿಯನ್ನು ತಂದನು, ಇನ್ನೊಬ್ಬನು ಒಂದು ಕಡ್ಡಿಯನ್ನು ತಂದನು. ಹೀಗೆ (ಕಡ್ಡಿಗಳನ್ನು ಸಂಗ್ರಹಿಸಿ) ಅವರು ತಮ್ಮ ರೊಟ್ಟಿಯನ್ನು ಬೇಯಿಸಿದರು. ಖಂಡಿತವಾಗಿಯೂ, ತುಚ್ಛವಾಗಿ ಕಾಣುವ ಪಾಪಗಳು, ಯಾವಾಗ ಅವುಗಳಿಗಾಗಿ ಮನುಷ್ಯನು ಹಿಡಿಯಲ್ಪಡುತ್ತಾನೋ (ವಿಚಾರಣೆಗೆ ಒಳಪಡುತ್ತಾನೋ), ಅವು ಅವನನ್ನು ನಾಶಮಾಡುತ್ತವೆ".
Explanation
Benefits
ತುಚ್ಛವಾಗಿ ಕಾಣಲಾಗುವ ಚಿಕ್ಕ ಪಾಪಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಅವುಗಳಿಗೆ ಪ್ರಾಯಶ್ಚಿತ್ತ ನೀಡುವುದಕ್ಕಾಗಿ ತ್ವರೆ ಮಾಡಲು ಪ್ರೋತ್ಸಾಹಿಸಲಾಗಿದೆ.
"ತುಚ್ಛವಾಗಿ ಕಾಣುವ ಪಾಪಗಳು" ಹಲವು ಅರ್ಥಗಳನ್ನು ಒಳಗೊಳ್ಳಬಹುದು: ಮೊದಲನೆಯದು: ದಾಸನು ಮಾಡುವ ಚಿಕ್ಕ ಪಾಪಗಳೆಂದು ಭಾವಿಸಿ ಮಾಡುವ ಪಾಪಗಳು. ಆದರೆ ಅವು ಅಲ್ಲಾಹುವಿನ ಬಳಿ ಮಹಾಪಾಪಗಳಾಗಿರುತ್ತವೆ. ಎರಡನೆಯದು: ದಾಸನು ಮಾಡುವ ಚಿಕ್ಕ ಪಾಪಗಳು. ಅವನು ಅವುಗಳ ಬಗ್ಗೆ ಜಾಗರೂಕತೆ ವಹಿಸುವುದಿಲ್ಲ ಮತ್ತು ಅವುಗಳಿಗಾಗಿ ಪಶ್ಚಾತ್ತಾಪ ಪಡುವುದೂ ಇಲ್ಲ. ಆಗ ಈ ಚಿಕ್ಕ ಪಾಪಗಳು ಒಟ್ಟುಗೂಡಿ ಕೊನೆಗೆ ಅವನನ್ನು ನಾಶಮಾಡುತ್ತವೆ. ಮೂರನೆಯದು: ದಾಸನು ಮಾಡುವ ಚಿಕ್ಕ ಪಾಪಗಳು. ಅವನು ಅವುಗಳ ಬಗ್ಗೆ ಜಾಗರೂಕತೆ ವಹಿಸುವುದಿಲ್ಲ. ಆಗ ಅವು ಅವನನ್ನು ವಿನಾಶಕಾರಿ ಮಹಾಪಾಪಗಳಲ್ಲಿ ಬೀಳಲು ಕಾರಣವಾಗುತ್ತವೆ.
Attribution
Categories
Share hadeeth
Sharing options · 0 Total shares

