ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ (ಸುತ್ತಲಿನ) ಕೂದಲನ್ನು ಬೋಳಿಸುವುದು – ಇವುಗಳಲ್ಲಿ ನಾವು ನಲವತ್ತು ರಾತ್ರಿಗಳಿಗಿಂತ ಹೆಚ್ಚು ಕಾಲ (ಅವುಗಳನ್ನು ಹಾಗೆಯೇ) ಬಿಡಬಾರದೆಂದು ನಮಗೆ ಸಮಯವನ್ನು ನಿಗದಿಪಡಿಸಲಾಗಿದೆ
Choose an available translation of this Hadeeth
Hadeeth text
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಮೀಸೆಯನ್ನು ಕತ್ತರಿಸುವುದು, ಉಗುರುಗಳನ್ನು ಕತ್ತರಿಸುವುದು, ಕಂಕುಳಿನ ಕೂದಲನ್ನು ಕೀಳುವುದು, ಮತ್ತು ಗುಪ್ತಾಂಗದ (ಸುತ್ತಲಿನ) ಕೂದಲನ್ನು ಬೋಳಿಸುವುದು – ಇವುಗಳಲ್ಲಿ ನಾವು ನಲವತ್ತು ರಾತ್ರಿಗಳಿಗಿಂತ ಹೆಚ್ಚು ಕಾಲ (ಅವುಗಳನ್ನು ಹಾಗೆಯೇ) ಬಿಡಬಾರದೆಂದು ನಮಗೆ ಸಮಯವನ್ನು ನಿಗದಿಪಡಿಸಲಾಗಿದೆ."
Explanation
Benefits
ಇಬ್ನ್ ಹುಬೈರಾ ಹೇಳುತ್ತಾರೆ: "ಈ ಹದೀಸ್ ಆ ಕಾರ್ಯಗಳನ್ನು ವಿಳಂಬಿಸಲು ಇರುವ ಅಂತಿಮ ಮಿತಿಯಾಗಿದೆ. ಆದರೆ ಈ ಮಿತಿಗಿಂತ ಮುಂಚೆಯೇ ಆ ಕಾರ್ಯಗಳನ್ನು ಮಾಡುವುದು ಉತ್ತಮ."
ಇಸ್ಲಾಂ ಸ್ವಚ್ಛತೆ, ಶುದ್ಧೀಕರಣ ಮತ್ತು ಅಲಂಕಾರಕ್ಕೆ ನೀಡುವ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
ಮೀಸೆಯನ್ನು ಕತ್ತರಿಸುವುದು: ಮೇಲ್ತುಟಿಯ ಮೇಲೆ ಬೆಳೆಯುವ ಕೂದಲಿನ ಸ್ವಲ್ಪ ಭಾಗವನ್ನು ಕತ್ತರಿಸುವುದು.
ಕಂಕುಳಿನ ಕೂದಲನ್ನು ಕೀಳುವುದು: ಅಲ್ಲಿ ಬೆಳೆಯುವ ಕೂದಲನ್ನು ನಿವಾರಿಸುವುದು. ಇದು ತೋಳಿನ ಕೀಲು ಮತ್ತು ಭುಜದ ಕೆಳಗಿರುವ ಸ್ಥಳವಾಗಿದೆ.
ಗುಪ್ತಾಂಗದ ಕೂದಲನ್ನು ಬೋಳಿಸುವುದು: ಇದು ಪುರುಷ ಮತ್ತು ಮಹಿಳೆಯ ಜನನಾಂಗದ ಸುತ್ತಲೂ ಬೆಳೆಯುವ ಒರಟು ಕೂದಲಾಗಿದೆ.
Attribution
Categories
Share hadeeth
Sharing options · 0 Total shares

