افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#65849[صحيح]
HadeethEnc · 1.36.0

ಓ ಬಿಲಾಲ್, ಇಸ್ಲಾಮಿನಲ್ಲಿ ನೀನು ಮಾಡಿದ ಕಾರ್ಯಗಳಲ್ಲಿ, ನೀನು ಅತಿ ಹೆಚ್ಚು ನಿರೀಕ್ಷೆ (ಭರವಸೆ) ಇಟ್ಟಿರುವ ಕಾರ್ಯ ಯಾವುದು ಎಂದು ನನಗೆ ಹೇಳು

Available translations

Choose an available translation of this Hadeeth

01

Hadeeth text

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಫಜ್ರ್ ನಮಾಝಿನ ಸಮಯದಲ್ಲಿ ಬಿಲಾಲ್ ರಿಗೆ ಹೇಳಿದರು: "ಓ ಬಿಲಾಲ್, ಇಸ್ಲಾಮಿನಲ್ಲಿ ನೀನು ಮಾಡಿದ ಕಾರ್ಯಗಳಲ್ಲಿ, ನೀನು ಅತಿ ಹೆಚ್ಚು ನಿರೀಕ್ಷೆ (ಭರವಸೆ) ಇಟ್ಟಿರುವ ಕಾರ್ಯ ಯಾವುದು ಎಂದು ನನಗೆ ಹೇಳು. ಏಕೆಂದರೆ, ನಾನು ಸ್ವರ್ಗದಲ್ಲಿ ನನ್ನ ಮುಂದೆ ನಿನ್ನ ಚಪ್ಪಲಿಗಳ ಸದ್ದು (ಹೆಜ್ಜೆಗುರುತಿನ ಶಬ್ದ) ಕೇಳಿದೆನು." ಅವರು (ಬಿಲಾಲ್) ಹೇಳಿದರು: "ನಾನು ರಾತ್ರಿ ಅಥವಾ ಹಗಲಿನ ಯಾವುದೇ ಸಮಯದಲ್ಲಿ ಶುದ್ಧೀಕರಣ (ವುಧೂ) ಮಾಡಿದಾಗಲೆಲ್ಲಾ, ಆ ಶುದ್ಧೀಕರಣದೊಂದಿಗೆ ನನಗೆ ವಿಧಿಸಲಾದಷ್ಟು (ನನ್ನ ಹಣೆಬರಹದಲ್ಲಿ ಬರೆದಷ್ಟು) ನಮಾಝ್ ನಿರ್ವಹಿಸದೇ ಬಿಟ್ಟಿಲ್ಲ. ಇದನ್ನೇ ನಾನು (ನನ್ನ ಕಾರ್ಯಗಳಲ್ಲಿ) ಅತಿ ಹೆಚ್ಚು ನಿರೀಕ್ಷೆಯುಳ್ಳ ಕಾರ್ಯವೆಂದು ಭಾವಿಸುತ್ತೇನೆ."
02

Explanation

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು ಸ್ವರ್ಗದಲ್ಲಿರುವುದಾಗಿ ಕನಸಿನಲ್ಲಿ ಕಂಡರು. ಆಗ ಅವರು ಬಿಲಾಲ್ ಇಬ್ನ್ ರಬಾಹ್ ರಿಗೆ ಹೇಳಿದರು: "ಇಸ್ಲಾಮಿನಲ್ಲಿ ನೀನು ಮಾಡಿದ ಐಚ್ಛಿಕ ಕಾರ್ಯಗಳಲ್ಲಿ (ನಫಿಲ್) ಅತ್ಯಂತ ಹೆಚ್ಚು ಪ್ರತಿಫಲ ನಿರೀಕ್ಷಿಸುವ ಕಾರ್ಯ ಯಾವುದು ಎಂದು ನನಗೆ ತಿಳಿಸು? ಏಕೆಂದರೆ ಸ್ವರ್ಗದಲ್ಲಿ ನನ್ನ ಮುಂದೆ ನಡೆಯುವಾಗ ನಿನ್ನ ಚಪ್ಪಲಿಗಳ ಚಲನೆಯಿಂದ ಉಂಟಾಗುವ ಹಗುರವಾದ ಶಬ್ದವನ್ನು ನಾನು ಕೇಳಿದೆನು." ಬಿಲಾಲ್ ಹೇಳಿದರು: "ನನ್ನ ದೃಷ್ಟಿಯಲ್ಲಿ ಅತಿ ಹೆಚ್ಚು ನಿರೀಕ್ಷೆಯುಳ್ಳ ಕಾರ್ಯವೇನೆಂದರೆ, ನಾನು ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ಯಾವಾಗಲಾದರೂ (ಮಲಮೂತ್ರ ವಿಸರ್ಜನೆ ಇತ್ಯಾದಿಗಳಿಂದ) ವುಧೂ ಮುರಿದರೆ, (ಮತ್ತೆ) ವುಧೂ ಮಾಡುತ್ತೇನೆ. ನಂತರ ಆ ವುಧೂವಿನ ಮೂಲಕ ನನ್ನ ರಬ್ಬ್ ಅಲ್ಲಾಹನಿಗಾಗಿ ನನಗೆ ಸಾಧ್ಯವಾದಷ್ಟು ಸಾಮಾನ್ಯ ನಫಿಲ್ (ಐಚ್ಛಿಕ) ನಮಾಝ್ ನಿರ್ವಹಿಸುತ್ತೇನೆ."
03

Benefits

ಬಿಲಾಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತೋರಿಸಿಕೊಟ್ಟ ಕಾರ್ಯದ ಶ್ರೇಷ್ಠತೆಯನ್ನು ತಿಳಿಸಲಾಗಿದೆ; ಅದೇನೆಂದರೆ, ಶುದ್ಧಿಯಾದಾಗಲೆಲ್ಲಾ (ವುಧೂ ಮಾಡಿದಾಗಲೆಲ್ಲಾ) ನಮಾಝ್ ಮಾಡುವುದು. ಇದು ಸ್ವರ್ಗ ಪ್ರವೇಶಕ್ಕೆ ಕಾರಣವಾಗುವ ಮತ್ತು ಹೆಚ್ಚು ಪ್ರತಿಫಲದ ನಿರೀಕ್ಷೆಯುಳ್ಳ ಕಾರ್ಯವಾಗಿದೆ.
ಪ್ರತಿ ವುಧೂವಿನ ನಂತರ ನಮಾಝ್ ಮಾಡುವುದು ಅಪೇಕ್ಷಿತವಾಗಿದೆ.
ಒಬ್ಬ ಮಾರ್ಗದರ್ಶಕ ಅಥವಾ ಗುರುವು ತನ್ನ ಶಿಷ್ಯನ ಕಾರ್ಯಗಳ ಬಗ್ಗೆ ಕೇಳಬೇಕು; ಅದು ಒಳಿತಾಗಿದ್ದರೆ ಅದರಲ್ಲಿ ಸ್ಥಿರವಾಗಿರಲು ಪ್ರೇರೇಪಿಸಬೇಕು, ಮತ್ತು ಇಲ್ಲದಿದ್ದರೆ ಅದನ್ನು ತಡೆಯಬೇಕು.
ಬಿಲಾಲ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಸ್ವರ್ಗವಾಸಿಗಳಲ್ಲಿ ಸೇರಿದವರು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಕ್ಷಿ ನುಡಿದಿದ್ದಾರೆ.
ಈ ಪ್ರಶ್ನೆಯನ್ನು ಫಜ್ರ್ ನಮಾಝಿನ ವೇಳೆ ಕೇಳಲಾಗಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಕನಸಿನಲ್ಲಿ ಕಂಡಿದ್ದರು ಎಂಬುದನ್ನು ಇದು ಸೂಚಿಸುತ್ತದೆ. ಪ್ರವಾದಿಗಳ ಕನಸು ಸತ್ಯವಾಗಿರುತ್ತದೆ.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...