HadeethEnc · 1.36.0
ಓ ಅಲ್ಲಾಹ್, ನಾನೊಬ್ಬ ಮನುಷ್ಯ ಮಾತ್ರ. ಆದ್ದರಿಂದ ಮುಸ್ಲಿಮರ ಪೈಕಿ ಯಾವ ವ್ಯಕ್ತಿಯನ್ನಾದರೂ ನಾನು ಬೈದಿದ್ದರೆ, ಅಥವಾ ಶಪಿಸಿದ್ದರೆ, ಅಥವಾ (ಚಾವಟಿಯಿಂದ) ಹೊಡೆದಿದ್ದರೆ, ಅದನ್ನು ಅವನಿಗೆ ಶುದ್ಧೀಕರಣ ಮತ್ತು ಕರುಣೆಯನ್ನಾಗಿ ಮಾಡು
Available translations
Choose an available translation of this Hadeeth
01
Hadeeth text
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ನಾನೊಬ್ಬ ಮನುಷ್ಯ ಮಾತ್ರ. ಆದ್ದರಿಂದ ಮುಸ್ಲಿಮರ ಪೈಕಿ ಯಾವ ವ್ಯಕ್ತಿಯನ್ನಾದರೂ ನಾನು ಬೈದಿದ್ದರೆ, ಅಥವಾ ಶಪಿಸಿದ್ದರೆ, ಅಥವಾ (ಚಾವಟಿಯಿಂದ) ಹೊಡೆದಿದ್ದರೆ, ಅದನ್ನು ಅವನಿಗೆ ಶುದ್ಧೀಕರಣ ಮತ್ತು ಕರುಣೆಯನ್ನಾಗಿ ಮಾಡು."
02
Explanation
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಪ್ರಾರ್ಥಿಸಿದರು: "ಓ ಅಲ್ಲಾಹ್, ನಾನು ಕೇವಲ ಒಬ್ಬ ಮನುಷ್ಯ. ಮನುಷ್ಯರಿಗೆ ಕೋಪ ಬರುವಂತೆ ನನಗೂ ಕೋಪ ಬರುತ್ತದೆ. ಆದ್ದರಿಂದ ನಾನು ಯಾವ ವಿಶ್ವಾಸಿಗೆ ತೊಂದರೆ ನೀಡಿದ್ದೇನೆಯೋ, ಅಥವಾ ಬೈದಿದ್ದೇನೆಯೋ, ಅಥವಾ ನಿಂದಿಸಿದ್ದೇನೆಯೋ, ಅಥವಾ ಶಪಿಸಿದ್ದೇನೆಯೋ (ನಿನ್ನ ಕರುಣೆಯಿಂದ ದೂರವಾಗಲಿ ಎಂದು ಪ್ರಾರ್ಥಿಸಿದ್ದೇನೆಯೋ), ಅಥವಾ ಚಾವಟಿಯಿಂದ ಹೊಡೆದಿದ್ದೇನೆಯೋ, ಅದನ್ನು ಅವನಿಗೆ ಶುದ್ಧೀಕರಣ, ಸಾಮೀಪ್ಯ, ಪರಿಶುದ್ಧಿ, ಪ್ರಾಯಶ್ಚಿತ್ತ ಮತ್ತು ನೀನು ತೋರುವ ಕರುಣೆಯನ್ನಾಗಿ ಮಾಡು."
03
Benefits
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಾನ್ ನಡವಳಿಕೆಯನ್ನು ತಿಳಿಸಲಾಗಿದೆ.
ಇಬ್ನ್ ಹಜರ್ ಹೇಳುತ್ತಾರೆ: ಈ ಹದೀಸ್ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲೆ ಹೊಂದಿದ್ದ ಪರಿಪೂರ್ಣ ಕರುಣೆ, ಅವರ ಸುಂದರ ನಡವಳಿಕೆ ಮತ್ತು ಉದಾತ್ತ ವ್ಯಕ್ತಿತ್ವವನ್ನು ತೋರಿಸುತ್ತದೆ. ಏಕೆಂದರೆ, ತಮ್ಮಿಂದ ಸಂಭವಿಸಿದ (ಕಠಿಣ) ವರ್ತನೆಗೆ ಪ್ರತಿಯಾಗಿ, ಆ ವ್ಯಕ್ತಿಗೆ ಪರಿಹಾರ ಮತ್ತು ಗೌರವ ಸಿಗಬೇಕೆಂದು ಅವರು ಉದ್ದೇಶಿಸಿದ್ದಾರೆ.
ನವವಿ ಹೇಳುತ್ತಾರೆ: "ಶಾಪಕ್ಕೆ ಅಥವಾ ಬೈಗುಳಕ್ಕೆ ಅರ್ಹನಲ್ಲದವನಿಗೆ ಪ್ರವಾದಿಯವರು ಹೇಗೆ ಶಪಿಸುತ್ತಾರೆ ಅಥವಾ ಬೈಯುತ್ತಾರೆ?" ಎಂದು ಕೇಳಿದರೆ, ಅದಕ್ಕೆ ವಿದ್ವಾಂಸರು ನೀಡಿದ ಉತ್ತರ ಹೀಗಿದೆ (ಸಂಕ್ಷಿಪ್ತವಾಗಿ ಎರಡು ಕಾರಣಗಳು): 1. ಒಬ್ಬ ವ್ಯಕ್ತಿ ಅಲ್ಲಾಹನ ದೃಷ್ಟಿಯಲ್ಲಿ (ಅಂತರಾಳದಲ್ಲಿ) ಅದಕ್ಕೆ ಅರ್ಹನಾಗಿರುವುದಿಲ್ಲ, ಆದರೆ ಬಾಹ್ಯವಾಗಿ ನೋಡುವಾಗ ಅರ್ಹನಂತೆ ಕಾಣುತ್ತಾನೆ (ದೋಷಿಯಂತೆ ಕಾಣುತ್ತಾನೆ). ಶರೀಅತ್‌ನ ಪ್ರಕಾರ ಬಾಹ್ಯ ವಿಷಯಗಳ ಆಧಾರದಲ್ಲಿ ತೀರ್ಪು ನೀಡಲು ಪ್ರವಾದಿಯವರಿಗೆ ಆದೇಶಿಸಲಾಗಿದೆ, ಆದರೆ ಅಲ್ಲಾಹು ಅಂತರಾಳದ ವಿಷಯಗಳನ್ನು ನೋಡಿಕೊಳ್ಳುತ್ತಾನೆ. (ಆದ್ದರಿಂದ ಪ್ರವಾದಿಯವರು ಬಾಹ್ಯ ನೋಟದ ಆಧಾರದ ಮೇಲೆ ಗದರಿಸಿರಬಹುದು). 2. ಪ್ರವಾದಿಯವರು ಬೈದಿದ್ದು ಅಥವಾ ಶಪಿಸಿದ್ದು ಉದ್ದೇಶಪೂರ್ವಕವಾಗಿರಲಿಲ್ಲ. ಬದಲಾಗಿ, ಅರಬ್ಬರ ರೂಢಿಯಂತೆ ಮಾತಿನ ಭರದಲ್ಲಿ ಉದ್ದೇಶವಿಲ್ಲದೆ ಬರುವ ಮಾತುಗಳಾಗಿದ್ದವು (ಉದಾಹರಣೆಗೆ: 'ನಿನ್ನ ಬಲಗೈಗೆ ಮಣ್ಣಾಗಲಿ', 'ನಿನಗೆ ಸಂತಾನವಿಲ್ಲದೆ ಹೋಗಲಿ', ಈ ಹದೀಸ್‌ನಲ್ಲಿರುವಂತೆ 'ನಿನ್ನ ವಯಸ್ಸು ಹೆಚ್ಚಾಗದಿರಲಿ' ಅಥವಾ ಮುಆವಿಯ ಅವರ ಹದೀಸ್‌ನಲ್ಲಿರುವಂತೆ 'ಅಲ್ಲಾಹು ನಿನ್ನ ಹೊಟ್ಟೆಯನ್ನು ತುಂಬಿಸದಿರಲಿ' ಇತ್ಯಾದಿ). ಇವುಗಳ ಮೂಲಕ ಅವರು ನಿಜವಾದ ಶಾಪವನ್ನು ಉದ್ದೇಶಿಸಿರಲಿಲ್ಲ. ಆದರೂ ಆ ಮಾತುಗಳು ಪ್ರಾರ್ಥನೆ ಸ್ವೀಕರಿಸಲ್ಪಡುವ ಗಳಿಗೆಯಲ್ಲಿ ಆಡಲ್ಪಟ್ಟಿರಬಹುದು ಎಂದು ಪ್ರವಾದಿಯವರು ಭಯಪಟ್ಟರು. ಆದ್ದರಿಂದ ಅದನ್ನು ಆ ವ್ಯಕ್ತಿಗೆ ಕರುಣೆ, ಪ್ರಾಯಶ್ಚಿತ್ತ, ಸಾಮೀಪ್ಯ, ಶುದ್ಧೀಕರಣ ಮತ್ತು ಪ್ರತಿಫಲವನ್ನಾಗಿ ಮಾಡುವಂತೆ ತಮ್ಮ ರಬ್ಬ್ (ಪರಿಪಾಲಕ) ನಲ್ಲಿ ಪ್ರಾರ್ಥಿಸಿದರು. ಇದು ಅವರಿಂದ ಬಹಳ ಅಪರೂಪವಾಗಿ ಮತ್ತು ವಿರಳವಾಗಿ ಸಂಭವಿಸುತ್ತಿತ್ತು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಶ್ಲೀಲವಾಗಿ ಮಾತನಾಡುವವರಾಗಲಿ, ಅತಿಯಾಗಿ ಬೈಯುವವರಾಗಲಿ, ಶಪಿಸುವವರಾಗಲಿ ಅಥವಾ ಸ್ವಂತಕ್ಕಾಗಿ ಸೇಡು ತೀರಿಸಿಕೊಳ್ಳುವವರಾಗಲಿ ಆಗಿರಲಿಲ್ಲ.”

Attribution
[متفق عليه]
Categories
Share
Share hadeeth
Sharing options · 0 Total shares