ಬದಲಾಗಿ ನೀವು ಹೀಗೆ ಹೇಳಿರಿ: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ'
Choose an available translation of this Hadeeth
Hadeeth text
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), “ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದೇ. ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ಬಹಿರಂಗಪಡಿಸಿದರೂ ಅಥವಾ ಮುಚ್ಚಿಟ್ಟರೂ ಅಲ್ಲಾಹು ಅದರ ಬಗ್ಗೆ ನಿಮ್ಮನ್ನು ವಿಚಾರಣೆ ನಡೆಸುತ್ತಾನೆ. ತಾನು ಇಚ್ಛಿಸಿದವರನ್ನು ಅವನು ಕ್ಷಮಿಸುತ್ತಾನೆ ಮತ್ತು ತಾನು ಇಚ್ಛಿಸಿದವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಎಲ್ಲದರಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ” [ಅಲ್-ಬಕರ: 284] ಎಂಬ ಕುರ್‌ಆನ್ ವಚನವು ಅವತೀರ್ಣವಾದಾಗ, ಅದು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಹಚರರಿಗೆ (ಸಹಾಬಾಗಳಿಗೆ) ಬಹಳ ಕಷ್ಟವೆನಿಸಿತು. ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಮೊಣಕಾಲೂರಿ ಕುಳಿತು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನಮಗೆ ನಮಾಝ್, ಉಪವಾಸ, ಜಿಹಾದ್ ಮತ್ತು ದಾನದಂತಹ ನಮಗೆ ನಿರ್ವಹಿಸಲು ಸಾಧ್ಯವಾಗುವ ಕರ್ಮಗಳನ್ನು ನಮಗೆ ವಿಧಿಸಲಾಗಿದೆ (ನಾವು ಅದನ್ನು ಪಾಲಿಸುತ್ತಿದ್ದೇವೆ). ಆದರೆ ಈಗ ನಿಮಗೆ ಈ ವಚನ ಅವತೀರ್ಣವಾಗಿದೆ, ಮತ್ತು ಇದನ್ನು ಪಾಲಿಸಲು ನಮಗೆ ಸಾಧ್ಯವಾಗುತ್ತಿಲ್ಲ." ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮಗಿಂತ ಹಿಂದಿನ ಎರಡು ವೇದಗ್ರಂಥಗಳ ಅನುಯಾಯಿಗಳು (ಯಹೂದಿ ಮತ್ತು ಕ್ರೈಸ್ತರು) 'ನಾವು ಕೇಳಿದೆವು ಮತ್ತು ಅವಿಧೇಯತೆ ತೋರಿದೆವು' ಎಂದು ಹೇಳಿದಂತೆ ನೀವೂ ಹೇಳಲು ಬಯಸುವಿರಾ? ಬದಲಾಗಿ ನೀವು ಹೀಗೆ ಹೇಳಿರಿ: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ'." ಆಗ ಅವರು (ಸಹಾಬಾಗಳು): "ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ" ಎಂದು ಹೇಳಿದರು. ಜನರೆಲ್ಲರೂ ಇದನ್ನು ಪಠಿಸಿದಾಗ, ಅವರ ನಾಲಿಗೆಗಳು ಇದಕ್ಕೆ ಒಗ್ಗಿಕೊಂಡವು (ಅವರು ವಿನಮ್ರರಾದರು). ಆಗ ಅದರ ಬೆನ್ನಲ್ಲೇ ಅಲ್ಲಾಹು (ಈ ವಚನವನ್ನು) ಅವತೀರ್ಣಗೊಳಿಸಿದನು: ‘ಪ್ರವಾದಿಯವರು ತಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ತಮಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದಾರೆ ಮತ್ತು ಸತ್ಯವಿಶ್ವಾಸಿಗಳು ಕೂಡ. ಅವರೆಲ್ಲರೂ ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ (ದೇವದೂತರಲ್ಲಿ), ಅವನ ಗ್ರಂಥಗಳಲ್ಲಿ ಮತ್ತು ಅವನ ಪ್ರವಾದಿಗಳಲ್ಲಿ ವಿಶ್ವಾಸವಿಟ್ಟಿದ್ದಾರೆ. ನಾವು ಅವನ ಪ್ರವಾದಿಗಳ ಪೈಕಿ ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ (ಎಂದು ಅವರು ಹೇಳುತ್ತಾರೆ). ಮತ್ತು ಅವರು ಹೇಳಿದರು: 'ನಾವು ಕೇಳಿದೆವು ಮತ್ತು ವಿಧೇಯರಾದೆವು. ಓ ನಮ್ಮ ಪರಿಪಾಲಕನೇ, ನಿನ್ನ ಕ್ಷಮೆಯನ್ನು ಯಾಚಿಸುತ್ತೇವೆ ಮತ್ತು ನಿನ್ನ ಬಳಿಗೇ ಮರಳಲಿಕ್ಕಿದೆ' [ಅಲ್-ಬಕರ: 285]. ಅವರು ಹಾಗೆ ಮಾಡಿದಾಗ, ಅಲ್ಲಾಹು ಆ (ಹಿಂದಿನ ಕಠಿಣ) ಆಜ್ಞೆಯನ್ನು ರದ್ದುಪಡಿಸಿ ಈ ವಚನವನ್ನು ಅವತೀರ್ಣಗೊಳಿಸಿದನು: “ಅಲ್ಲಾಹು ಯಾವುದೇ ಆತ್ಮಕ್ಕೆ ಅದರ ಸಾಮರ್ಥ್ಯಕ್ಕಿಂತ ಮೀರಿದ ಹೊರೆಯನ್ನು ಹೊರಿಸುವುದಿಲ್ಲ. ಅದು ಸಂಪಾದಿಸಿದ ಒಳಿತು ಅದಕ್ಕೇ ಸಿಗುವುದು ಮತ್ತು ಅದು ಮಾಡಿದ ಕೆಡುಕು ಅದರ ಮೇಲೆಯೇ ಇರುವುದು. 'ಓ ನಮ್ಮ ಪರಿಪಾಲಕನೇ, ನಾವು ಮರೆತರೆ ಅಥವಾ ತಪ್ಪೆಸಗಿದರೆ ನಮ್ಮನ್ನು ಹಿಡಿಯಬೇಡ (ಶಿಕ್ಷಿಸಬೇಡ)' [ಅಲ್-ಬಕರ: 286].” ಆಗ ಅಲ್ಲಾಹು (ಅದಕ್ಕೆ ಉತ್ತರವಾಗಿ): "ಹೌದು (ನಾನು ಒಪ್ಪಿದ್ದೇನೆ)" ಎಂದು ಹೇಳಿದನು. 'ಓ ನಮ್ಮ ಪರಿಪಾಲಕನೇ, ನಮ್ಮ ಪೂರ್ವಿಕರ ಮೇಲೆ ಹೊರಿಸಿದಂತಹ (ಕಠಿಣವಾದ) ಭಾರವನ್ನು ನಮ್ಮ ಮೇಲೆ ಹೊರಿಸಬೇಡ' [ಅಲ್-ಬಕರ: 286]. ಆಗ ಅಲ್ಲಾಹು: "ಹೌದು" ಎಂದು ಹೇಳಿದನು. 'ಓ ನಮ್ಮ ಪರಿಪಾಲಕನೇ, ನಮಗೆ ಹೊರಲು ಸಾಧ್ಯವಿಲ್ಲದ ಹೊರೆಯನ್ನು ನಮ್ಮ ಮೇಲೆ ಹೊರಿಸಬೇಡ' [ಅಲ್-ಬಕರ: 286]. ಆಗ ಅಲ್ಲಾಹು: "ಹೌದು" ಎಂದು ಹೇಳಿದನು. 'ಮತ್ತು ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನೇ ನಮ್ಮ ರಕ್ಷಕ. ಸತ್ಯನಿಷೇಧಿಗಳ ವಿರುದ್ಧ ನಮಗೆ ಸಹಾಯ ನೀಡು' [ಅಲ್-ಬಕರ: 286]. ಆಗ ಅಲ್ಲಾಹು: "ಹೌದು (ನಾನು ಹಾಗೆ ಮಾಡಿದ್ದೇನೆ)" ಎಂದು ಹೇಳಿದನು.
Explanation
Benefits
ಕುರ್‌ಆನ್‌ನಲ್ಲಿ 'ನಸ್ಖ್' (ರದ್ದುಪಡಿಸುವುದು) ಇದೆ ಎಂದು ದೃಢೀಕರಿಸಲಾಗಿದೆ. ಅಂದರೆ ಕುರ್‌ಆನ್‌ನಲ್ಲಿ ಕೆಲವು ಭಾಗಗಳನ್ನು ಪಠಿಸಲಾಗುತ್ತದೆ, ಆದರೆ ಅದರ ವಿಧಿಯು ರದ್ದುಗೊಂಡಿರುತ್ತದೆ, ಆದ್ದರಿಂದ ಅದರಂತೆ ಕಾರ್ಯನಿರ್ವಹಿಸಲಾಗುವುದಿಲ್ಲ.
ಸಹಾಬಾಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಶ್ರೇಷ್ಠತೆಯನ್ನು, ಮತ್ತು ಅವರು ಅಲ್ಲಾಹನ ಆಜ್ಞೆಗೆ ಶರಣಾಗುತ್ತಿದ್ದರು ಹಾಗೂ ಅವನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞೆಯನ್ನು ಪಾಲಿಸುತ್ತಿದ್ದರು ಎಂಬುದನ್ನು ತಿಳಿಸಲಾಗಿದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಬಗ್ಗೆ ಹೊಂದಿದ್ದ ತೀವ್ರ ಕಾಳಜಿ ಯನ್ನು ತಿಳಿಸಲಾಗಿದೆ. ಅಲ್ಲಾಹನ ಆಜ್ಞೆಗಳನ್ನು ತಿರಸ್ಕರಿಸುವ ಮೂಲಕ ತಮ್ಮ ಸಮುದಾಯವು ಹಿಂದಿನ ಸಮುದಾಯಗಳ ದಾರಿಯನ್ನು ಹಿಡಿಯಬಾರದು ಎಂದು ಅವರು ಬಯಸುತ್ತಿದ್ದರು.
ಅಲ್ಲಾಹನ ಆಜ್ಞೆಗೆ ಶರಣಾಗುವುದು ಕಡ್ಡಾಯವಾಗಿದೆ ಮತ್ತು ಅವನ ಆಜ್ಞೆಯ ವಿರುದ್ಧ ಆಕ್ಷೇಪ ಎತ್ತುವ ಬಗ್ಗೆ ಎಚ್ಚರದಿಂದಿರಬೇಕು. ಏಕೆಂದರೆ ಆಕ್ಷೇಪಿಸುವುದು ವೇದಗ್ರಂಥದವರನ್ನು (ಅಹ್ಲುಲ್ ಕಿತಾಬ್) ಹೋಲುವಂತಾಗುತ್ತದೆ.
ಹಿಂದಿನ ಸಮುದಾಯಗಳಿಗಿಂತ ಈ ಸಮುದಾಯಕ್ಕೆ ಇರುವ ಶ್ರೇಷ್ಠತೆಯನ್ನು ಇದು ತೋರಿಸುತ್ತದೆ. ಅವರು ತಮ್ಮ ಪ್ರವಾದಿಗಳೊಂದಿಗೆ "ನಾವು ಕೇಳಿದೆವು ಮತ್ತು ಅವಿಧೇಯತೆ ತೋರಿದೆವು" ಎಂದರು. ಆದರೆ ಈ ಸಮುದಾಯದವರು "ನಾವು ಕೇಳಿದೆವು ಮತ್ತು ವಿಧೇಯರಾದೆವು" ಎಂದರು.
ಈ ಸಮುದಾಯದ ಮೇಲಿದ್ದ ಸಂಕಷ್ಟವನ್ನು ತೆಗೆದುಹಾಕಿರುವುದು ಇದರ ಶ್ರೇಷ್ಠತೆಯಾಗಿದೆ. ಮರೆವು ಮತ್ತು (ತಿಳಿಯದೆ ಮಾಡಿದ) ತಪ್ಪುಗಳಿಗೆ ಶಿಕ್ಷಿಸದಿರಲು ಕೋರಿದ ಪ್ರಾರ್ಥನೆಯನ್ನು ಸ್ವೀಕರಿಸಲಾಗಿದೆ. ಹಿಂದಿನವರ ಮೇಲಿದ್ದಂತಹ ಭಾರವಾದ ಹೊರೆಗಳನ್ನು ಇವರ ಮೇಲಿಂದ ತೆಗೆಯಲಾಗಿದೆ ಮತ್ತು ಇವರಿಗೆ ಹೊರಲಾರದ ಹೊರೆಯನ್ನು ಹೊರಿಸಲಾಗಿಲ್ಲ.
ಅಲ್ಲಾಹು ನಮಗೆ ಹೊರಲು ಸಾಧ್ಯವಿಲ್ಲದ ಹೊರೆಯನ್ನು ನಮ್ಮ ಮೇಲೆ ಹೊರಿಸುವುದಿಲ್ಲ ಮತ್ತು ನಮ್ಮ ಸಾಮರ್ಥ್ಯಕ್ಕೆ ಮೀರಿದ್ದನ್ನು ವಿಧಿಸುವುದಿಲ್ಲ. ನಮ್ಮ ಎದೆಯಲ್ಲಿ ಮೂಡುವ ಕೆಟ್ಟ ಆಲೋಚನೆಗಳಿಗೆ ನಾವು ಒಲವು ತೋರಿಸದಿದ್ದರೆ, ಅದರಲ್ಲಿ ನೆಮ್ಮದಿ ಕಂಡುಕೊಳ್ಳದಿದ್ದರೆ ಮತ್ತು ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವು ನಮಗೆ ಹಾನಿ ಮಾಡುವುದಿಲ್ಲ.
ಈ ಪ್ರಾರ್ಥನೆಯನ್ನು ಅಲ್ಲಾಹು, ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಸತ್ಯವಿಶ್ವಾಸಿಗಳಿಂದ ಉಲ್ಲೇಖಿಸಿ, ತನ್ನ ಗ್ರಂಥದಲ್ಲಿ ಇರಿಸಿದ್ದಾನೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಸಹಾಬಾಗಳ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಂತರ ಬರುವವರು ಇದನ್ನು ಪ್ರಾರ್ಥಿಸಲಿ ಎಂಬುದು ಇದರ ಉದ್ದೇಶವಾಗಿದೆ. ಇದು ಕಂಠಪಾಠ ಮಾಡಬೇಕಾದ ಮತ್ತು ಹೆಚ್ಚಾಗಿ ಪ್ರಾರ್ಥಿಸಬೇಕಾದ ಪ್ರಾರ್ಥನೆಯಾಗಿದೆ.
Attribution
Categories
Share hadeeth
Sharing options · 0 Total shares

