ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು
Choose an available translation of this Hadeeth
Hadeeth text
ಝುಬೈರ್ ಇಬ್ನ್ ಅಲ್ಅವ್ವಾಮ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು." [ಅತ್ತಕಾಸುರ್ 102:8] ಎಂಬ ವಚನವು ಅವತೀರ್ಣವಾದಾಗ, ಝುಬೈರ್ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಯಾವ ಅನುಗ್ರಹದ ಬಗ್ಗೆ ನಮ್ಮೊಡನೆ ಪ್ರಶ್ನಿಸಲಾಗುತ್ತದೆ? ನಮ್ಮಲ್ಲಿರುವುದು ಎರಡು ಕಪ್ಪು ವಸ್ತುಗಳು—،ಖರ್ಜೂರ ಮತ್ತು ನೀರು ಮಾತ್ರವಲ್ಲವೇ? ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅದು ಖಂಡಿತವಾಗಿಯೂ ಸಂಭವಿಸುತ್ತದೆ."
Explanation
ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಈಗ ನೀವು ಯಾವ ಸ್ಥಿತಿಯಲ್ಲಿದ್ದೀರೋ ಆ ಅನುಗ್ರಹಗಳ ಬಗ್ಗೆಯೂ ನಿಮ್ಮಲ್ಲಿ ಪ್ರಶ್ನಿಸಲಾಗುವುದು. ಇವೆರಡು (ಖರ್ಜೂರ ಮತ್ತು ನೀರು) ಅಲ್ಲಾಹನ ಅನುಗ್ರಹಗಳಲ್ಲಿ ಸೇರಿದ ಎರಡು ಮಹಾ ಅನುಗ್ರಹಗಳಾಗಿವೆ."
Benefits
ಅನುಗ್ರಹಗಳು ಕಡಿಮೆಯಾಗಿದ್ದರೂ ಹೆಚ್ಚಾಗಿದ್ದರೂ ಅದರ ಬಗ್ಗೆ ಪುನರುತ್ಥಾನದ ದಿನದಂದು ಮನುಷ್ಯರೊಡನೆ ಪ್ರಶ್ನಿಸಲಾಗುತ್ತದೆ.
Attribution
Categories
Share hadeeth
Sharing options · 0 Total shares

