ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು
Choose an available translation of this Hadeeth
Hadeeth text
ಕಅಬ್ ಬಿನ್ ಉಜ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕಡ್ಡಾಯ ನಮಾಝ್‌ಗಳ ನಂತರ ಕೆಲವು ಸ್ಮರಣೆಗಳಿದ್ದು, ಅವುಗಳನ್ನು ಪಠಿಸುವವನು—ಅಥವಾ ಕಾರ್ಯಗತಗೊಳಿಸುವವನು—ಎಂದಿಗೂ ನಿರಾಶನಾಗುವುದಿಲ್ಲ. ಮೂವತ್ತಮೂರು ತಸ್ಬೀಹ್‌ಗಳು, ಮೂವತ್ತಮೂರು ತಹ್ಮೀದ್‌ಗಳು ಮತ್ತು ಮೂವತ್ತನಾಲ್ಕು ತಕ್ಬೀರ್‌ಗಳು."
Explanation
"ಸುಬ್‌ಹಾನಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಎಲ್ಲಾ ರೀತಿಯ ನ್ಯೂನತೆಗಳಿಂದ ಪರಿಶುದ್ಧಗೊಳಿಸುವುದಾಗಿದೆ.
"ಅಲ್-ಹಮ್ದುಲಿಲ್ಲಾಹ್" (ಮೂವತ್ತ ಮೂರು ಬಾರಿ) ಇದು ಅಲ್ಲಾಹನನ್ನು ಪ್ರೀತಿಸುವುದು ಮತ್ತು ಮಹಿಮೆಪಡಿಸುವುದರ ಜೊತೆಗೆ ಅವನನ್ನು ಸರ್ವಸಂಪೂರ್ಣನೆಂದು ಬಣ್ಣಿಸುವುದಾಗಿದೆ.
"ಅಲ್ಲಾಹು ಅಕ್ಬರ್" (ಮೂವತ್ತ ನಾಲ್ಕು ಬಾರಿ) ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ದೊಡ್ಡವನು ಮತ್ತು ಮಹಾಮಹಿಮನು ಎಂದು ಘೋಷಿಸುವುದಾಗಿದೆ.
Benefits
Attribution
Categories
Share hadeeth
Sharing options · 0 Total shares

