ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ
Choose an available translation of this Hadeeth
Hadeeth text
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ."
Explanation
Benefits
ಕೆಡುಕನ್ನು ನಿರೋಧಿಸುವುದು ಕಡ್ಡಾಯವಾಗಿದೆ.
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏಕದೇವವಿಶ್ವಾಸವನ್ನು ರಕ್ಷಿಸಿದರು ಮತ್ತು ಬಹುದೇವವಿಶ್ವಾಸದ ಮಾರ್ಗವನ್ನು ಮುಚ್ಚಿದರು.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾಡಿ ತೋರಿಸಿದಂತೆ ಕೆಡುಕನ್ನು ವಿರೋಧಿಸುವಾಗ ಅದಕ್ಕೆ ಬದಲಿಯಾಗಿರುವ ಒಳಿತನ್ನು ತೋರಿಸಿಕೊಡಬೇಕಾಗಿದೆ.
ಈ ಹದೀಸ್‌ನಲ್ಲಿನ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿಕೆ "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಮತ್ತು ಇನ್ನೊಂದು ಹದೀಸ್‌ನಲ್ಲಿನ "ಅಲ್ಲಾಹು ಇಚ್ಛಿಸಿದ್ದು, ನಂತರ ನೀವು ಇಚ್ಛಿಸಿದ್ದು ಎಂದು ಹೇಳಿರಿ" ಎಂಬ ಹೇಳಿಕೆಗಳನ್ನು ಸಂಯೋಜಿಸಿದರೆ, "ಅಲ್ಲಾಹು ಇಚ್ಛಿಸಿದ್ದು, ನಂತರ ನೀವು ಇಚ್ಛಿಸಿದ್ದು" ಎಂದು ಹೇಳುವುದು ಅನುಮತಿಸಲ್ಪಟ್ಟಿದೆಯಾದರೂ, "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಎಂದು ಹೇಳುವುದು ಶ್ರೇಷ್ಠವಾಗಿದೆ.
"ಅಲ್ಲಾಹು ಇಚ್ಛಿಸಿದ್ದು, ನಂತರ ನೀವು ಇಚ್ಛಿಸಿದ್ದು" ಎಂದು ಹೇಳುವುದು ಅನುಮತಿಸಲ್ಪಟ್ಟಿದೆ. ಆದರೆ "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಎಂದು ಹೇಳುವುದು ಶ್ರೇಷ್ಠವಾಗಿದೆ.
Attribution
Categories
Share hadeeth
Sharing options · 0 Total shares

