ಯಾವುದೇ ಜನರು ಒಂದು ಸಭೆಯಲ್ಲಿ ಕುಳಿತುಕೊಂಡಾಗ, ಅವರು ಅಲ್ಲಾಹನನ್ನು ಸ್ಮರಿಸದೆ ಮತ್ತು ತಮ್ಮ ಪ್ರವಾದಿಯ ಮೇಲೆ ದುರೂದ್ (ಸಲಾತ್) ಹೇಳದೆ ಇದ್ದರೆ, ಅದು ಅವರಿಗೆ ಕೊರತೆಯಾಗದೆ ಇರುವುದಿಲ್ಲ. ಅವನು ಬಯಸಿದರೆ ಅವರನ್ನು ಶಿಕ್ಷಿಸುವನು ಮತ್ತು ಅವನು ಬಯಸಿದರೆ ಅವರನ್ನು ಕ್ಷಮಿಸುವನು
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವುದೇ ಜನರು ಒಂದು ಸಭೆಯಲ್ಲಿ ಕುಳಿತುಕೊಂಡಾಗ, ಅವರು ಅಲ್ಲಾಹನನ್ನು ಸ್ಮರಿಸದೆ ಮತ್ತು ತಮ್ಮ ಪ್ರವಾದಿಯ ಮೇಲೆ ದುರೂದ್ (ಸಲಾತ್) ಹೇಳದೆ ಇದ್ದರೆ, ಅದು ಅವರಿಗೆ ಕೊರತೆಯಾಗದೆ ಇರುವುದಿಲ್ಲ. ಅವನು ಬಯಸಿದರೆ ಅವರನ್ನು ಶಿಕ್ಷಿಸುವನು ಮತ್ತು ಅವನು ಬಯಸಿದರೆ ಅವರನ್ನು ಕ್ಷಮಿಸುವನು."
Explanation
Benefits
ಅಲ್ಲಾಹನನ್ನು ಸ್ಮರಿಸುವ ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಮರಿಸುವ ಸಭೆಗಳ ಮಹತ್ವವನ್ನು ತಿಳಿಸಲಾಗಿದೆ. ಹಾಗೆಯೇ, ಅದಿಲ್ಲದ ಸಭೆಗಳು ಪುನರುತ್ಥಾನ ದಿನದಂದು ಅದರಲ್ಲಿ ಪಾಲ್ಗೊಂಡವರಿಗೆ ದುರಾದೃಷ್ಟದ ಸಭೆಗಳಾಗಿವೆಯೆಂದು ತಿಳಿಸಲಾಗಿದೆ.
ಅಲ್ಲಾಹನ ಸ್ಮರಣೆಯನ್ನು (ಧಿಕ್ರ್) ನಿರ್ಲಕ್ಷಿಸುವುದರ ಬಗ್ಗೆ ನೀಡಲಾದ ಎಚ್ಚರಿಕೆಯು ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಅದು ಇತರ ವಿಷಯಗಳಿಗೂ ಅನ್ವಯಿಸುತ್ತದೆ. ಇಮಾಮ್ ನವವಿ ಹೇಳುತ್ತಾರೆ: "ಒಬ್ಬ ವ್ಯಕ್ತಿಯು ಒಂದು ಸ್ಥಳದಲ್ಲಿ ಕುಳಿತಿದ್ದರೆ, ಅಲ್ಲಾಹನನ್ನು ಸ್ಮರಿಸದೆ ಅವನು ಅಲ್ಲಿಂದ ಎದ್ದು ಹೋಗುವುದು ಅಸಹ್ಯಕರ (ಕರಾಹತ್) ವಾಗಿದೆ."
ಪುನರುತ್ಥಾನ ದಿನದಂದು ಅವರಿಗೆ ಉಂಟಾಗುವ ವಿಷಾದವೇನೆಂದರೆ: ಒಂದೋ ಆ ಸಮಯವನ್ನು ಅಲ್ಲಾಹನಿಗೆ ವಿಧೇಯತೆ ತೋರಲು ಬಳಸಿಕೊಳ್ಳದ ಕಾರಣದಿಂದ ಪ್ರತಿಫಲ ಮತ್ತು ಪುಣ್ಯವು ನಷ್ಟವಾಗುವುದು, ಅಥವಾ ಆ ಸಮಯವನ್ನು ಅಲ್ಲಾಹನಿಗೆ ಅವಿಧೇಯತೆ ತೋರಲು ಬಳಸಿರುವುದರಿಂದ ಪಾಪ ಮತ್ತು ಶಿಕ್ಷೆಯು ದೊರೆಯುವುದು ಆಗಿರಬಹುದು.
ಈ ಎಚ್ಚರಿಕೆಯು ಅನುಮತಿಸಲಾದ ವಿಷಯಗಳಲ್ಲಿ ನಿರ್ಲಕ್ಷ್ಯ ತಾಳಿದ್ದಕ್ಕೆ ಆಗಿರಬೇಕಾದರೆ, ಗೀಬತ್ (ಪರನಿಂದೆ), ನಮೀಮತ್ (ಚಾಡಿ) ಮತ್ತು ಇತರ ನಿಷಿದ್ಧ ಕಾರ್ಯಗಳಿಂದ ತುಂಬಿರುವ ನಿಷಿದ್ಧ ಸಭೆಗಳ ಸ್ಥಿತಿಯೇನಾಗಿರಬಹುದು?!
Attribution
Categories
Share hadeeth
Sharing options · 0 Total shares

