ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು ಅವತೀರ್ಣವಾದ ಬಳಿಕ ಅವರು ಯಾವುದೇ ನಮಾಝ್ ಮಾಡಿದರೂ ಅದರಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳದೇ ಇರುತ್ತಿರಲಿಲ್ಲ
Choose an available translation of this Hadeeth
Hadeeth text
ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) "ಅಲ್ಲಾಹನ ಸಹಾಯ ಮತ್ತು ವಿಜಯ ಬಂದಾಗ." [ಸೂರ ನಸ್ರ್: 1] ಎಂಬ ವಚನವು ಅವತೀರ್ಣವಾದ ಬಳಿಕ ಅವರು ಯಾವುದೇ ನಮಾಝ್ ಮಾಡಿದರೂ ಅದರಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳದೇ ಇರುತ್ತಿರಲಿಲ್ಲ." ಆಯಿಶರಿಂದ ವರದಿ. ಅವರು ಹೇಳುತ್ತಾರೆ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್‌ಆನಿನಲ್ಲಿರುವಂತೆ ನಡೆದುಕೊಳ್ಳುವುದಕ್ಕಾಗಿ ತಮ್ಮ ರುಕೂ ಮತ್ತು ಸುಜೂದ್‌ಗಳಲ್ಲಿ "ಸುಬ್‌ಹಾನಕ ರಬ್ಬನಾ ವಬಿಹಮ್ದಿಕ್, ಅಲ್ಲಾಹುಮ್ಮಗ್‌ಫಿರ್ ಲೀ" (ನಮ್ಮ ಪರಿಪಾಲಕನೇ, ನೀನು ಪರಮ ಪವಿತ್ರನು. ಸ್ತುತಿಗಳೆಲ್ಲವೂ ನಿನಗೆ ಸಲ್ಲುತ್ತದೆ. ಓ ಅಲ್ಲಾಹ್, ನನ್ನನ್ನು ಕ್ಷಮಿಸು) ಎಂದು ಹೇಳುವುದನ್ನು ಹೆಚ್ಚಿಸುತ್ತಿದ್ದರು."
Explanation
Benefits
ಜೀವನದ ಕೊನೆಯ ಕಾಲದಲ್ಲಿ ಕ್ಷಮೆಯಾಚನೆ ಮಾಡುವುದರಲ್ಲಿರುವ ಒಂದು ಸೂಚನೆಯೇನೆಂದರೆ, ಅದೇ ರೀತಿ ಆರಾಧನಾ ಕರ್ಮಗಳನ್ನು - ವಿಶೇಷವಾಗಿ ನಮಾಝನ್ನು - ಅವುಗಳಲ್ಲಿ ಸಂಭವಿಸಬಹುದಾದ ನ್ಯೂನತೆಗಳನ್ನು ಸರಿಪಡಿಸಲು ಕ್ಷಮೆಯಾಚನೆಯ ಮೂಲಕ ಮುಕ್ತಾಯಗೊಳಿಸಬೇಕೆಂದಾಗಿದೆ.
ಪ್ರಾರ್ಥನೆಗಳ ಸ್ವೀಕಾರಕ್ಕಾಗಿ ಅಲ್ಲಾಹನ ಕಡೆಗೆ ಮಧ್ಯವರ್ತಿಯಾಗಿ ಮಾಡಬಹುದಾದ ಅತ್ಯುತ್ತಮ ವಸ್ತುವೆಂದರೆ, ಅವನ ಸ್ತುತಿಗಳನ್ನು ಮತ್ತು ಮಹಿಮೆಗಳನ್ನು ಹೇಳುವುದು ಹಾಗೂ ಅವನನ್ನು ಎಲ್ಲಾ ರೀತಿಯ ಕುಂದುಕೊರತೆಗಳು ಮತ್ತು ನ್ಯೂನತೆಗಳಿಂದ ಮುಕ್ತನೆಂದು ಘೋಷಿಸುವುದು.
ಕ್ಷಮೆಯಾಚನೆಯನ್ನು ಮತ್ತು ಎಲ್ಲಾ ಸಮಯಗಳಲ್ಲೂ ಕ್ಷಮೆಯಾಚಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದಾಸ್ಯತ್ವದ ಸಂಪೂರ್ಣತೆ ಮತ್ತು ಅಲ್ಲಾಹನ ಆಜ್ಞೆಗಳನ್ನು ಪಾಲಿಸಲು ಅವರು ತೋರುತ್ತಿದ್ದ ಮುತುವರ್ಜಿಯನ್ನು ತಿಳಿಸಲಾಗಿದೆ.
Attribution
Categories
Share hadeeth
Sharing options · 0 Total shares

