HadeethEnc · 1.36.0
ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ
Available translations
Choose an available translation of this Hadeeth
01
Hadeeth text
ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಜನರು ಗುಂಪುಗೂಡಿ ಒಬ್ಬ ವ್ಯಕ್ತಿಗೆ ನೆರಳು ನೀಡುತ್ತಿರುವುದನ್ನು ಕಂಡರು. ಅವರು (ಪ್ರವಾದಿ) ಕೇಳಿದರು: "ಇದೇನು?". ಜನರು ಹೇಳಿದರು: "ಆತ ಉಪವಾಸದಲ್ಲಿದ್ದಾನೆ". ಆಗ ಅವರು (ಪ್ರವಾದಿ) ಹೇಳಿದರು: "ಪ್ರಯಾಣದ ಸಂದರ್ಭದಲ್ಲಿ ಉಪವಾಸ ಆಚರಿಸುವುದು ಪುಣ್ಯಕಾರ್ಯವಲ್ಲ". ಇಮಾಮ್ ಮುಸ್ಲಿಂ ರವರ ಇನ್ನೊಂದು ವರದಿಯಲ್ಲಿ ಹೀಗಿದೆ: "ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು ಸ್ವೀಕರಿಸಿಕೊಳ್ಳಿರಿ".
02
Explanation
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ಅವರು ಒಬ್ಬ ವ್ಯಕ್ತಿಯನ್ನು ಕಂಡರು, ಜನರು ಅವನ ಸುತ್ತಲೂ ಒಟ್ಟುಗೂಡಿದ್ದರು ಮತ್ತು ಬಿಸಿಲಿನ ತಾಪ ಹಾಗೂ ತೀವ್ರ ಬಾಯಾರಿಕೆಯಿಂದಾಗಿ ಅವನಿಗೆ ನೆರಳು ನೀಡುತ್ತಿದ್ದರು. ಆಗ ಅವರು (ಪ್ರವಾದಿ) ಕೇಳಿದರು: ಅವನಿಗೆ ಏನಾಗಿದೆ? ಜನರು ಹೇಳಿದರು: ಅವನು ಉಪವಾಸದಲ್ಲಿದ್ದಾನೆ. ಅವರು (ಪ್ರವಾದಿ) ಹೇಳಿದರು: ಪ್ರಯಾಣದಲ್ಲಿ (ಹೀಗೆ ಕಷ್ಟಪಟ್ಟು) ಉಪವಾಸ ಆಚರಿಸುವುದು ಪುಣ್ಯವಲ್ಲ. ಅಲ್ಲಾಹು ನಿಮಗೆ ನೀಡಿದ ರಿಯಾಯಿತಿಯನ್ನು (ಅಂದರೆ ಪ್ರಯಾಣದಲ್ಲಿ ಉಪವಾಸ ಬಿಡುವುದನ್ನು) ಸ್ವೀಕರಿಸಿಕೊಳ್ಳಿ.
03
Benefits
ಇಸ್ಲಾಮೀ ನಿಯಮಗಳ ಸರಳತೆಯನ್ನು ವಿವರಿಸಲಾಗಿದೆ.
ಪ್ರಯಾಣದಲ್ಲಿ ಉಪವಾಸ ಆಚರಿಸಲು ಅನುಮತಿಯಿದೆ. ಹಾಗೆಯೇ ಉಪವಾಸ ಆಚರಿಸದಿರುವ ರಿಯಾಯಿತಿಯನ್ನು ತೆಗೆದುಕೊಳ್ಳಲೂ ಅನುಮತಿಯಿದೆ.
ಪ್ರಯಾಣದಲ್ಲಿ ಉಪವಾಸ ಆಚರಿಸುವುದು ಕಷ್ಟಕರವಾಗಿದ್ದರೆ ಅದು ಅನಪೇಕ್ಷಿತವಾಗಿದೆ. ಒಂದು ವೇಳೆ ಅದು ಪ್ರಾಣಾಪಾಯದ ಹಂತವನ್ನು ತಲುಪಿದರೆ ಆಗ ಉಪವಾಸ ಆಚರಿಸುವುದು ನಿಷಿದ್ಧವಾಗುತ್ತದೆ.
ಇಮಾಮ್ ನವವಿ ಹೇಳುತ್ತಾರೆ: "ಪ್ರಯಾಣದಲ್ಲಿ ಉಪವಾಸ ಆಚರಿಸುವುದು ಪುಣ್ಯವಲ್ಲ" ಎಂಬುದರ ಅರ್ಥವೇನೆಂದರೆ, ಅದು ನಿಮಗೆ ಕಷ್ಟಕರವಾಗಿದ್ದರೆ ಮತ್ತು ಹಾನಿಯಾಗುವ ಭಯವಿದ್ದರೆ ಪುಣ್ಯವಲ್ಲ. ಹದೀಸ್‌ನ ಸಂದರ್ಭವು ಇದೇ ಅರ್ಥವನ್ನು ಸೂಚಿಸುತ್ತದೆ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು ಮತ್ತು ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು ಎಂದು ತಿಳಿಸಲಾಗಿದೆ.

Attribution
[متفق عليه]
Categories
Share
Share hadeeth
Sharing options · 0 Total shares