افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم. افتتاح البرنامج الدعوي السبت القادم، ٩ / ٣ / ١٤٤٨هـ بعد صلاة الفجر مباشرة مسجد محمد بن إبراهيم، الجامعة الإسلامية بالمدينة المنورة فضيلة الشيخ د. هيثم بن محمد سرحان دورة اليوم الواحد، وختم كتاب كل سبت بإذن الله حياكم الله ونفع بكم.
#3529[صحيح]
HadeethEnc · 1.36.0

ಅವರು ತಮ್ಮ ಚಿಕ್ಕ ಮಗುವನ್ನು (ಗಂಡು ಮಗುವನ್ನು) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದರು. ಆ ಮಗು ಇನ್ನೂ (ಘನ) ಆಹಾರವನ್ನು ತಿನ್ನುತ್ತಿರಲಿಲ್ಲ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಅವನು ಅವರ ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿದನು. ಅವರು ನೀರನ್ನು ತರಿಸಿ, ಅದನ್ನು (ಮೂತ್ರದ ಮೇಲೆ) ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ

Available translations

Choose an available translation of this Hadeeth

01

Hadeeth text

ಉಮ್ಮ್ ಖೈಸ್ ಬಿಂತ್ ಮಿಹ್ಸನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ತಮ್ಮ ಚಿಕ್ಕ ಮಗುವನ್ನು (ಗಂಡು ಮಗುವನ್ನು) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕರೆತಂದರು. ಆ ಮಗು ಇನ್ನೂ (ಘನ) ಆಹಾರವನ್ನು ತಿನ್ನುತ್ತಿರಲಿಲ್ಲ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಅವನು ಅವರ ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿದನು. ಅವರು ನೀರನ್ನು ತರಿಸಿ, ಅದನ್ನು (ಮೂತ್ರದ ಮೇಲೆ) ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ.
02

Explanation

ಉಮ್ಮ್ ಖೈಸ್ ಬಿಂತ್ ಮಿಹ್ಸನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ತಮ್ಮ ಮಗುವನ್ನು ಕರೆತಂದರು. ಅದು ವಯಸ್ಸಿನಲ್ಲಿ ಚಿಕ್ಕದಾಗಿದ್ದ ಕಾರಣ ಇನ್ನೂ ಆಹಾರ ತಿನ್ನಲು ಪ್ರಾರಂಭಿಸಿರಲಿಲ್ಲ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನನ್ನು (ಮಗುವನ್ನು) ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡರು. ಆಗ ಮಗು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಸ್ತ್ರದ ಮೇಲೆ ಮೂತ್ರ ವಿಸರ್ಜಿಸಿತು. ಪ್ರವಾದಿಯವರು ನೀರನ್ನು ತರಿಸಿ, ಅದನ್ನು ತಮ್ಮ ವಸ್ತ್ರದ ಮೇಲೆ ಚಿಮುಕಿಸಿದರು. ಅವರು ಅದನ್ನು ತೊಳೆಯಲಿಲ್ಲ.
03

Benefits

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉನ್ನತ ನಡವಳಿಕೆ ಮತ್ತು ಅಪಾರ ವಿನಮ್ರತೆಯನ್ನು ತಿಳಿಸಲಾಗಿದೆ.
ಜನರೊಂದಿಗೆ ಉತ್ತಮ ಒಡನಾಟ, ವಿನಮ್ರತೆಯಿಂದ ವರ್ತಿಸುವುದನ್ನು, ಮಕ್ಕಳೊಂದಿಗೆ ಮೃದುತ್ವ ತೋರುವುದನ್ನು, ಮತ್ತು ಹಿರಿಯರ ಮಕ್ಕಳನ್ನು ಗೌರವಿಸುವ ಮೂಲಕ ಹಾಗೂ ಅವರನ್ನು ಮಡಿಲಲ್ಲಿ ಕುಳ್ಳಿರಿಸಿಕೊಳ್ಳುವ ಮೂಲಕ ಹಿರಿಯರ ಮನಸ್ಸಿಗೆ ಸಂತೋಷ ನೀಡುವುದನ್ನು ಪ್ರೋತ್ಸಾಹಿಸಲಾಗಿದೆ.
ಗಂಡು ಮಗುವಿನ ಮೂತ್ರವು ಅಶುದ್ಧವಾಗಿದೆ. ಅದು ಆಹಾರವನ್ನು ಸೇವಿಸದಿದ್ದರೂ ಸಹ.
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾಡಿದ ಕಾರ್ಯವನ್ನು 'ನದ್ಹ್' (ಚಿಮುಕಿಸುವುದು) ಎಂದು ಕರೆಯಲಾಗುತ್ತದೆ. ಇದು ಆಹಾರ ತಿನ್ನಲು ಪ್ರಾರಂಭಿಸದ ಗಂಡು ಮಗುವಿಗೆ ಮಾತ್ರ ಸೀಮಿತವಾಗಿದೆ. ಹೆಣ್ಣು ಮಗುವಾದರೆ, ಅದು ಎಷ್ಟೇ ಚಿಕ್ಕದಾಗಿದ್ದರೂ ಅದರ ಮೂತ್ರವನ್ನು ತೊಳೆಯಲೇಬೇಕು.
ತಾಯಿಯ ಹಾಲನ್ನು ಮಾತ್ರ ಕುಡಿಯುವ ಗಂಡು ಮಗುವಿನ ಮಲವನ್ನು ಇತರ ಅಶುದ್ಧಿಗಳಂತೆ ತೊಳೆಯಲೇಬೇಕು (ಇದಕ್ಕೆ ವಿನಾಯಿತಿ ಇಲ್ಲ).
'ತೊಳೆಯುವುದು' ಎಂದರೆ ಕೇವಲ ನೀರನ್ನು ತಲುಪಿಸುವುದಕ್ಕಿಂತ ಹೆಚ್ಚಾಗಿರಬೇಕು (ನೀರು ಹರಿಯುವಂತೆ ಮಾಡುವುದು ಅಥವಾ ಉಜ್ಜುವುದು).
ಅಶುದ್ಧಿಯ ಸ್ಥಳವನ್ನು ಶುದ್ಧೀಕರಿಸಲು ತ್ವರೆ ಮಾಡುವುದು ಉತ್ತಮ. ಅಶುದ್ಧಿಯಿಂದ ಬೇಗನೆ ಶುದ್ಧರಾಗಲು ಮತ್ತು ಅದು ಮರೆತುಹೋಗದಿರಲು ಇದು ಸಹಕಾರಿಯಾಗಿದೆ.

Attribution

[متفق عليه]

Categories

Share

Share hadeeth

Sharing options · 0 Total shares

Share

← Back to encyclopedia
Shopping Basket

Loading...