ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯನ್ನು ಪ್ರವೇಶಿಸಿದರು. ಆಗ ಒಬ್ಬ ವ್ಯಕ್ತಿ ಮಸೀದಿಯನ್ನು ಪ್ರವೇಶಿಸಿ ನಮಾಝ್ ಮಾಡಿದರು. ನಂತರ ಅವರು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್ ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್‌ಗೆ ಉತ್ತರಿಸಿ ಹೇಳಿದರು: "ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ." ಆ ವ್ಯಕ್ತಿ ಮೊದಲಿನಂತೆ ನಮಾಝ್ ಮಾಡಿ ಮತ್ತೆ ಬಂದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಸಲಾಮ್ ಹೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮರಳಿಹೋಗಿ ನಮಾಝ್ ಮಾಡಿರಿ. ಏಕೆಂದರೆ ನೀವು ನಮಾಝ್ ಮಾಡಿಲ್ಲ." ಹೀಗೆ ಮೂರು ಬಾರಿ ನಡೆಯಿತು. ಆಗ ಆ ವ್ಯಕ್ತಿ ಹೇಳಿದರು: "ನಿಮ್ಮನ್ನು ಸತ್ಯದೊಂದಿಗೆ ಕಳುಹಿಸಿದವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನನಗೆ ಇದಕ್ಕಿಂತ ಉತ್ತಮವಾಗಿ ನಮಾಝ್ ಮಾಡಲು ಬರುವುದಿಲ್ಲ. ಆದ್ದರಿಂದ ನನಗೆ ಕಲಿಸಿಕೊಡಿರಿ." ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ನಮಾಝ್‌ಗೆ ನಿಂತಾಗ ತಕ್ಬೀರ್ (ಅಲ್ಲಾಹು ಅಕ್ಬರ್) ಹೇಳಿರಿ. ನಂತರ ಕುರ್‌ಆನ್‌ನಿಂದ ನಿಮಗೆ ಸುಲಭವಾದಷ್ಟನ್ನು ಪಠಿಸಿರಿ. ನಂತರ ನೀವು ರುಕೂಅ್‌ನಲ್ಲಿ ಸಂಪೂರ್ಣವಾಗಿ ಶಾಂತವಾಗುವವರೆಗೆ ರುಕೂಅ್ ಮಾಡಿರಿ. ನಂತರ ನೀವು ನೇರವಾಗಿ ನಿಲ್ಲುವವರೆಗೆ ಎದ್ದೇಳಿರಿ. ನಂತರ ನೀವು ಸುಜೂದ್‌ನಲ್ಲಿ ಸಂಪೂರ್ಣವಾಗಿ ಶಾಂತವಾಗುವವರೆಗೆ ಸುಜೂದ್ ಮಾಡಿರಿ. ನಂತರ ನೀವು ಸಂಪೂರ್ಣ ಶಾಂತಚಿತ್ತರಾಗಿ ಕೂರುವವರೆಗೆ ಕುಳಿತುಕೊಳ್ಳಿರಿ. ನಿಮ್ಮ ಎಲ್ಲಾ ನಮಾಝ್‌ಗಳಲ್ಲೂ ಹೀಗೆಯೇ ಮಾಡಿರಿ."
Explanation
Benefits
ಅತ್ತುಮಅ್ ನೀನಾ (ಶಾಂತವಾಗಿರುವುದು ಅಥವಾ ತಟಸ್ಥವಾಗಿರುವುದು) ನಮಾಝಿನ ಸ್ತಂಭಗಳಲ್ಲಿ ಒಂದಾಗಿದೆ.
ನವವಿ ಹೇಳುತ್ತಾರೆ: "ನಮಾಝಿನ ಕೆಲವು ಕಡ್ಡಾಯ ಕಾರ್ಯಗಳನ್ನು ನಿರ್ವಹಿಸದವನ ನಮಾಝ್ ಸಿಂಧುವಾಗುವುದಿಲ್ಲ ಎಂದು ಈ ಹದೀಸಿನಿಂದ ತಿಳಿದುಬರುತ್ತದೆ."
ನವವಿ ಹೇಳುತ್ತಾರೆ: "ಈ ಹದೀಸಿನಲ್ಲಿ ತಿಳಿದುಬರುವುದೇನೆಂದರೆ, ಕಲಿಯುವವನೊಂದಿಗೆ ಮತ್ತು ತಿಳುವಳಿಕೆಯಿಲ್ಲದವನೊಂದಿಗೆ ಸೌಮ್ಯವಾಗಿ ವರ್ತಿಸಬೇಕು, ಸೌಜನ್ಯದಿಂದ ನಡೆದುಕೊಳ್ಳಬೇಕು, ವಿಷಯವನ್ನು ಸ್ಪಷ್ಟಪಡಿಸಿಕೊಡಬೇಕು, ಅಗತ್ಯವಿರುವುದನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡಬೇಕು ಮತ್ತು ಪ್ರಮುಖವಾದ ವಿಷಯಗಳನ್ನು ಮಾತ್ರ ತಿಳಿಸಿಕೊಡುವುದಕ್ಕೆ ಸೀಮಿತಗೊಳಿಸಬೇಕು. ಏಕೆಂದರೆ, ಎಲ್ಲಾ ವಿಷಯಗಳನ್ನು ಒಮ್ಮೆಲೇ ತಿಳಿಸಿಕೊಟ್ಟರೆ ಅವುಗಳನ್ನು ನೆನಪಿಟ್ಟುಕೊಳ್ಳಲು ಮತ್ತು ನಿರ್ವಹಿಸಲು ಅವನಿಗೆ ಸಾಧ್ಯವಾಗದೇ ಹೋಗಬಹುದು."
ನವವಿ ಹೇಳುತ್ತಾರೆ: "ಯಾರಾದರೂ ಮುಫ್ತಿ (ಧಾರ್ಮಿಕ ತೀರ್ಪು ನೀಡುವವನು) ಯೊಂದಿಗೆ ಏನನ್ನಾದರೂ ಕೇಳಿದರೆ ಮತ್ತು ಕೇಳಿದವನು ಅಗತ್ಯವಾಗಿ ತಿಳಿದಿರಬೇಕಾದ ಬೇರೆ ವಿಷಯವಿದ್ದು ಅವನು ಅದರ ಬಗ್ಗೆ ಕೇಳದಿದ್ದರೆ, ಅದನ್ನು ಅವನಿಗೆ ತಿಳಿಸುವುದು ಅಪೇಕ್ಷಣೀಯವಾಗಿದೆ. ಇದು ಉಪದೇಶ ನೀಡುವುದರ ಒಂದು ಭಾಗವೆಂದು ಪರಿಗಣಿಸಲಾಗುತ್ತದೆಯೇ ಹೊರತು ಅಗತ್ಯವಿಲ್ಲದ ಮಾತೆಂದು ಪರಿಗಣಿಸಲಾಗುವುದಿಲ್ಲ."
"ನನಗೆ ಇದಕ್ಕಿಂತ ಉತ್ತಮವಾಗಿ ಮಾಡಲು ಬರುವುದಿಲ್ಲ, ಆದ್ದರಿಂದ ನನಗೆ ಕಲಿಸಿಕೊಡಿರಿ" ಎಂಬ ಆ ವ್ಯಕ್ತಿಯ ಮಾತಿನಿಂದ ತಪ್ಪನ್ನು ಒಪ್ಪಿಕೊಳ್ಳುವುದರ ಶ್ರೇಷ್ಠತೆಯು ಕಂಡುಬರುತ್ತದೆ.
ಇಬ್ನ್ ಹಜರ್ ಹೇಳುತ್ತಾರೆ: "ಇದರಲ್ಲಿ ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆಯುವುದರ ಬಗ್ಗೆ ಹಾಗೂ ಕಲಿಯುವ ಆಸಕ್ತಿಯಿರುವವನು ವಿದ್ವಾಂಸನೊಂದಿಗೆ ಕಲಿಸಿಕೊಡಬೇಕೆಂದು ಕೇಳುವುದರ ಬಗ್ಗೆ ಉಲ್ಲೇಖವಿದೆ."
ಭೇಟಿಯಾದಾಗ ಸಲಾಮ್ ಹೇಳುವುದು ಅಪೇಕ್ಷಣೀಯವಾಗಿದೆ ಮತ್ತು ಅದಕ್ಕೆ ಉತ್ತರಿಸುವುದು ಕಡ್ಡಾಯವಾಗಿದೆ. ಪುನಃ ಭೇಟಿಯಾಗುವಾಗ ಪುನಃ ಸಲಾಂ ಹೇಳುವುದು ಅಪೇಕ್ಷಣೀಯವಾಗಿದೆ. ಅದು ಕೆಲವೇ ಕ್ಷಣಗಳ ಒಳಗಾಗಿದ್ದರೂ ಸಹ. ಪ್ರತಿ ಬಾರಿಯೂ ಅದಕ್ಕೆ ಉತ್ತರಿಸುವುದು ಕಡ್ಡಾಯವಾಗಿದೆ.
Attribution
Categories
Share hadeeth
Sharing options · 0 Total shares

