ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್
Choose an available translation of this Hadeeth
Hadeeth text
ಸೌಬಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮುಗಿಸಿದರೆ ಮೂರು ಬಾರಿ ಇಸ್ತಿಗ್ಫಾರ್ (ಕ್ಷಮೆಯಾಚನೆ) ಮಾಡುತ್ತಿದ್ದರು. ನಂತರ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” (ವರದಿಗಾರರಲ್ಲಿ ಒಬ್ಬರಾದ) ವಲೀದ್ ಹೇಳುತ್ತಾರೆ: ನಾನು ಔಝಾಈರೊಡನೆ ಕೇಳಿದೆ: "ನಾನು ಕ್ಷಮೆಯಾಚನೆ ಮಾಡುವುದು ಹೇಗೆ?" ಅವರು ಉತ್ತರಿಸಿದರು: "ಅಸ್ತಗ್ಫಿರುಲ್ಲಾಹ್, ಅಸ್ತಗ್ಫಿರುಲ್ಲಾಹ್ ಎಂದು ಹೇಳುವುದು."
Explanation
ನಂತರ ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಹಿಮೆಪಡಿಸುತ್ತಾ ಹೀಗೆ ಹೇಳುತ್ತಿದ್ದರು: "ಅಲ್ಲಾಹುಮ್ಮ ಅನ್ತ ಸ್ಸಲಾಂ, ವಮಿನ್ಕ ಸ್ಸಲಾಂ, ತಬಾರಕ್ತ ದಲ್ ಜಲಾಲಿ ವಲ್ ಇಕ್ರಾಮ್" (ಓ ಅಲ್ಲಾಹ್! ನೀನು ಅಸ್ಸಲಾಂ (ಶಾಂತಿ) ಮತ್ತು ನಿನ್ನಿಂದಲೇ ಶಾಂತಿ. ಓ ಮಹಿಮೆ ಪ್ರತಿಷ್ಠೆಗಳನ್ನು ಹೊಂದಿರುವವನೇ! ನೀನು ಅನುಗ್ರಹಪೂರ್ಣನಾಗಿರುವೆ.” ಅಲ್ಲಾಹು ಅವನ ಗುಣಲಕ್ಷಣಗಳ ವಿಷಯದಲ್ಲಿ ಸುರಕ್ಷಿತನು ಮತ್ತು ಪರಿಪೂರ್ಣನು. ಅವನಿಗೆ ಯಾವುದೇ ಕುಂದು-ಕೊರತೆಗಳು ಅಥವಾ ಅಪೂರ್ಣತೆಗಳಿಲ್ಲ. ಅದೇ ರೀತಿ, ಈ ಪ್ರಾರ್ಥನೆಯಲ್ಲಿ ಇಹಲೋಕದ ಮತ್ತು ಪರಲೋಕದ ಎಲ್ಲಾ ಕೆಡುಕುಗಳಿಂದ ಅಲ್ಲಾಹನಲ್ಲಿ ಮಾತ್ರ ಪ್ರಾರ್ಥಿಸಲಾಗುತ್ತದೆ. ಪರಮ ಪರಿಶುದ್ಧನಾದ ಅವನ ಒಳಿತುಗಳು ಇಹಲೋಕದಲ್ಲೂ ಪರಲೋಕದಲ್ಲೂ ಅತ್ಯಧಿಕವಾಗಿವೆ. ಅವನು ಮಹಿಮೆ ಮತ್ತು ಒಳಿತುಗಳ ಒಡೆಯನಾಗಿದ್ದಾನೆ.
Benefits
ಆರಾಧನೆಯಲ್ಲಿ ಸಂಭವಿಸುವ ಅಪೂರ್ಣತೆಗಳನ್ನು ಪೂರ್ಣಗೊಳಿಸಲು ಮತ್ತು ಅನುಸರಣೆಯಲ್ಲಿ ಸಂಭವಿಸುವ ಕೊರತೆಗಳನ್ನು ತುಂಬಿಕೊಳ್ಳಲು ಕ್ಷಮೆಯಾಚಿಸುವುದು ಅಪೇಕ್ಷಣೀಯವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
Attribution
Categories
Share hadeeth
Sharing options · 0 Total shares

