ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ
Choose an available translation of this Hadeeth
Hadeeth text
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ರಮದಾನ್ ತಿಂಗಳು ಬಂದರೆ, ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ನರಕದ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ."
Explanation
Benefits
ಈ ತಿಂಗಳಲ್ಲಿ ಉಪವಾಸ ಮಾಡುವವರಿಗೆ, ಈ ಅನುಗ್ರಹಿತ ತಿಂಗಳು ಆರಾಧನೆ ಮತ್ತು ಸತ್ಕರ್ಮಗಳ ಋತುವಾಗಿದೆ ಎಂಬ ಶುಭಸುದ್ದಿಯನ್ನು ತಿಳಿಸಲಾಗಿರುವುದು.
ರಮದಾನ್ ತಿಂಗಳಲ್ಲಿ ಶೈತಾನರನ್ನು ಸರಪಳಿಗಳಿಂದ ಬಂಧಿಸಲಾಗುತ್ತದೆ ಎಂಬ ವಚನವು ಶೈತಾನರನ್ನು ನೆಪವಾಗಿ ಮಾಡಿಕೊಳ್ಳುವವರಿಗೆ ಹಾಗೆ ಮಾಡಬಾರದೆಂಬ ಸೂಚನೆಯಾಗಿದೆ. ಇದರ ಅರ್ಥವು ಅವರೊಡನೆ ಬಹುಶಃ ಹೀಗೆ ಹೇಳಿದಂತೆ: "ಶೈತಾನರನ್ನು ನಿಮ್ಮಿಂದ ದೂರವಿಡಲಾಗಿದೆ. ಆದ್ದರಿಂದ ಸತ್ಕರ್ಮವನ್ನು ತೊರೆಯಲು ಅಥವಾ ಪಾಪವನ್ನು ಮಾಡಲು ಅವರನ್ನು ನೆಪವಾಗಿ ಬಳಸಬೇಡಿರಿ."
ಕುರ್ತುಬಿ ಹೇಳುತ್ತಾರೆ: "ರಮದಾನ್ ತಿಂಗಳಲ್ಲಿ ನಾವು ಅನೇಕ ದುಷ್ಕೃತ್ಯಗಳು ಮತ್ತು ಪಾಪಗಳು ಸಂಭವಿಸುವುದನ್ನು ನೋಡುತ್ತೇವೆ. ಶೈತಾನರನ್ನು ಬಂಧಿಸಲಾಗುವುದಾದರೆ ಇವು ಸಂಭವಿಸಬಾರದಲ್ಲವೇ ಎಂದು ಯಾರಾದರೂ ಕೇಳಿದರೆ, ಅದಕ್ಕೆ ಉತ್ತರ: ಷರತ್ತುಗಳನ್ನು ಪಾಲಿಸಿಕೊಂಡು ಮತ್ತು ಶಿಷ್ಟಾಚಾರವನ್ನು ಗಮನಿಸಿಕೊಂಡು ಉಪವಾಸ ಆಚರಿಸುವವರಿಗೆ ಶೈತಾನರ ಉಪಟಳ ಕಡಿಮೆಯಾಗಿರುತ್ತವೆ. ಅಥವಾ ಇದರ ಅರ್ಥ ಬಂಡುಕೋರರಾದ ಕೆಲವು ಶೈತಾನರನ್ನು ಮಾತ್ರ ಬಂಧಿಸುವುದಾಗಿರಬಹುದು, ಎಲ್ಲರನ್ನಲ್ಲ. ಕೆಲವು ವರದಿಗಳಲ್ಲಿ ಇದನ್ನು ತಿಳಿಸಲಾಗಿದೆ. ಅಥವಾ ಇದರ ಉದ್ದೇಶವು ರಮದಾನ್ ತಿಂಗಳಲ್ಲಿ ದುಷ್ಕೃತ್ಯಗಳ ಪ್ರಮಾಣವು ಕಡಿಮೆಯಾಗಿರುತ್ತದೆ ಎಂದಾಗಿರಬಹುದು. ಇದು ಎಲ್ಲರೂ ಅನುಭವಿಸಿ ತಿಳಿದ ವಿಚಾರವಾಗಿದೆ. ಅಂದರೆ, ಇತರ ತಿಂಗಳುಗಳಿಗೆ ಹೋಲಿಸಿದರೆ ರಮದಾನ್ ತಿಂಗಳಲ್ಲಿ ದುಷ್ಕೃತ್ಯಗಳು ಕಡಿಮೆ ಇರುತ್ತವೆ. ಎಲ್ಲಾ ಶೈತಾನರನ್ನು ಬಂಧಿಸಲಾಗುತ್ತದೆ ಎಂದರೆ ಅದರ ಅರ್ಥ ಯಾವುದೇ ದುಷ್ಕೃತ್ಯ ಅಥವಾ ಪಾಪ ಸಂಭವಿಸುವುದಿಲ್ಲ ಎಂದಲ್ಲ. ಏಕೆಂದರೆ, ಅವು ಸಂಭವಿಸುವುದಕ್ಕೆ ಶೈತಾನನಲ್ಲದ ಬೇರೆ ಕಾರಣಗಳೂ ಇವೆ. ಉದಾಹರಣೆಗೆ, ಕೆಟ್ಟ ಮನಸ್ಸುಗಳು, ಕೆಟ್ಟ ಅಭ್ಯಾಸಗಳು ಮತ್ತು ಮನುಷ್ಯರಲ್ಲಿರುವ ಶೈತಾನರು (ದುರುಳರು) ಇತ್ಯಾದಿ."
Attribution
Categories
Share hadeeth
Sharing options · 0 Total shares

